Site icon Vistara News

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

IPL 2024

ಕೋಲ್ಕೊತಾ: ಆರಂಭಿಕ ಬ್ಯಾಟರ್​ ಜೋಶ್ ಬಟ್ಲರ್​ ಅವರ (109 ರನ್​, 56 ಎಸೆತ, 13 ಫೋರ್​, 6 ಸಿಕ್ಸರ್​) ಅಜೇಯ ಶತಕದ ನೆರವು ಪಡೆದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ನೇ ಆವೃತ್ತಿಯ 31ನೇ ಪಂದ್ಯದಲ್ಲಿ 2 ವಿಕೆಟ್​ಗಳ ಗೆಲುವು ಸಾಧಿಸಿದೆ. ಪಂದ್ಯದ ಒಂದು ಹಂತದಲ್ಲಿ ಕೆಕೆಆರ್​ ತಂಡದ ಕೈ ಮೇಲಾದರೂ ಬಳಿಕ ಬಟ್ಲರ್​ ಅಬ್ಬರದ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಬಟ್ಲರ್​​ಗೆ ಇದು ಹಾಲಿ ಆವೃತ್ತಿಯಲ್ಲಿ ಎರಡನೇ ಶತಕ. ಆರ್​ಸಿಬಿ ವಿರುದ್ಧ ಬಟ್ಲರ್​ ಮೊದಲ ಶತಕ ಬಾರಿಸಿದ್ದರು.

ಈ ವಿಜಯ ರಾಜಸ್ಥಾನ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆರನೇ ಗೆಲುವಾಗಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಪಾಡಿಕೊಂಡಿದೆ. ಈ ಸೋಲಿನೊಂದಿಗೆ ಕೆಕೆಆರ್​ ಪರ ಸುನೀಲ್​ ನರೈನ್​ (109 ರನ್​, 56 ಎಸೆತ, 13 ಫೋರ್​, 6 ಸಿಕ್ಸರ್​) ಸ್ಫೋಟಕ ಶತಕ ಹಾಗೂ ಬೌಲಿಂಗ್​ನಲ್ಲಿ 30 ರನ್​ ವೆಚ್ಚದಲ್ಲಿ 2 ವಿಕೆಟ್​ಗಳ ಆಲ್​ರೌಂಡರ್ ಆಟ ವ್ಯರ್ಥಗೊಂಡಿತು. ಇದು ಕೆಕೆಆರ್​ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಎರಡನೇ ಸೋಲು.

ಇಲ್ಲಿನ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

ಈ ಪಂದ್ಯ ಅಂಕಪಟ್ಟಿಯ ಎರಡು ಅಗ್ರ ತಂಡಗಳ ನಡುವಿನ ಕದವಾಗಿತ್ತು. ರಾಜಸ್ಥಾನ ಗೆದ್ದು ಮೊದಲ ಸ್ಥಾನ ಕಾಪಾಡಿಕೊಂಡಿದೆ. ಕೆಕೆಆರ್ ಗೆದಿದ್ದರೆ ಆ ತಂಡಕ್ಕೆ ಮೊದಲ ಸ್ಥಾನ ಸಿಗುತ್ತಿತ್ತು.

ಇದನ್ನೂ ಓದಿ: Sanju Samson : ಸಂಜು ಸ್ಯಾಮ್ಸನ್​ಗೆ ರಾಯಲ್ಸ್​ ತಂಡದಲ್ಲಿ ದಶಕದ ಸಾಧನೆ; ಬೆಸ್ಟ್​ ಕ್ಯಾಪ್ಟನ್ ಎಂದ ಅಭಿಮಾನಿಗಳು

ಬಟ್ಲರ್ ಏಕಾಂಗಿ ಹೋರಾಟ

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲುಹೊರಟ ರಾಜಸ್ಥಾನ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಯಶಸ್ವಿ ಜೈಸ್ವಾಲ್ ಮತ್ತೆ ವೈಫಲ್ಯ ಎದುರಿಸಿ 19 ರನ್​ಗೆ ಔಟಾದರು. ಸಂಜು ಸ್ಯಾಮ್ಸನ್​ 12 ರನ್​ಗಳಿಗೆ ಸೀಮಿತಗೊಂಡರು. ಆದರೆ, ಬಟ್ಲರ್ ತಳವೂರಿ ಆಡಲು ಆರಂಭಿಸಿದರು. ಇವರಿಗೆ ಸ್ವಲ್ಪ ಹೊತ್ತು ರಿಯಾನ್ ಪರಾಗ್​ (14 ಎಸೆತಕ್ಕೆ 34 ರನ್​) ಸಾಥ್​ ಕೊಟ್ಟರು. ಆದರೆ ಆ ಬಳಿಕದಿಂದ ಸತತವಾಗಿ ವಿಕೆಟ್​ಗಳು ಉರುಳಿದವು. ಜುರೆಲ್​ 2 ರನ್​ಗೆ ಔಟಾದರೆ ಅಶ್ವಿನ್ 8 ರನ್​​ಗೆ ವಿಕೆಟ್ ಒಪ್ಪಿಸಿದರು. ಶಿಮ್ರೋನ್ ಹೆಟ್ಮಾಯರ್ ಶೂನ್ಯಕ್ಕೆ ಔಟಾದರು. ಬಳಿಕ ಬಂದ ರೊವ್ಮನ್ ಪೊವೆಲ್ 13 ಎಸೆತಕ್ಕೆ 26 ರನ್​ ಬಾರಿಸಿ ಗೆಲುವಿನ ಹಾದಿ ತೋರಿದರು. ಅಂತಿಮವಾಗಿ ಬುದ್ಧಿವಂತಿಕೆಯಿಂದ ಬ್ಯಾಟ್ ಮಾಡಿದ ಬಟ್ಲರ್ ಅಜೇಯವಾಗಿ ಉಳಿದು ತಂಡವನ್ನು ಗೆಲ್ಲಿಸಿದರು.

ನರೈನ್ ಚೊಚ್ಚಲ ಶತಕ

ಆರಂಭಿಕರಾಗಿ ಕಣಕ್ಕೆ ಇಳಿದ ಸುನೀಲ್​ ನರೈನ್​ ಆರಂಭದಿಂದಲೇ ಅಬ್ಬರಿಸಿದರು. ರಾಜಸ್ಥಾನ ತಂಡ ಬೌಲರ್​​ಗಳನ್ನು ಸತತವಾಗಿ ದಂಡಿಸಿ ರನ್ ಪೇರಿಸಲು ಆರಂಭಿಸಿದರು. ಆದರೆ, ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ಫಿಲ್ ಸಾಲ್ಟ್ ಇಲ್ಲಿ ಹೆಚ್ಚಿನ ಪರಿಣಾಮ ಬೀರಲಿಲ್ಲ. ಆದಾಗ್ಯೂ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರಿಸಿದ ನರೈನ್​ 49 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಐಪಿಎಲ್​ನಲ್ಲಿ ಅವರ ಚೊಚ್ಚಲ ಶತಕವಾಗಿದೆ. ಬಳಿಕ ಅದಕ್ಕೆ 9 ರನ್ ಸೇರಿಸಿದ ಅವರು ಔಟಾದರು. ರಸೆಲ್​ 13 ರನ್ ಬಾರಿಸಿದರೆ ರಿಂಕು ಸಿಂಗ್​ 20 ರನ್​ಗಳ ಕೊಡುಗೆ ಕೊಟ್ಟರು.

Exit mobile version