ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್ಪಿಎಲ್) ತನ್ನ ಎಲ್ಲಾ ಆರು ಫ್ರಾಂಚೈಸಿಗಳ ಸಹ ಮಾಲೀಕರ ಹೆಸರುಗಳನ್ನು ಬಹಿರಂಗಪಡಿಸಿದೆ. ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ಹಲವಾರು ಪ್ರಮುಖ ಐಎಸ್ಪಿಎಲ್ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಸಚಿನ್ ತೆಂಡೂಲ್ಕರ್ ಅವರು. ಅವರಲ್ಲದೆ ಆಶಿಶ್ ಶೆಲಾರ್, ಅಮೋಲ್ ಕಾಳೆ, ಸೂರಜ್ ಸಮತ್ ಮತ್ತು ಭಾರತದ ಮಾಜಿ ಮುಖ್ಯ ಕೋಚ್ ಮತ್ತು ಭಾರತ ಕ್ರಿಕೆಟ್ ತಂಡದ ದಂತಕಥೆ ರವಿ ಶಾಸ್ತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತಾ ಮತ್ತು ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) ಆರು ಐಎಸ್ಪಿಎಲ್ ತಂಡಗಳಾಗಿವೆ. ರಾಮ್ ಚರಣ್ (ಹೈದರಾಬಾದ್), ಅಮಿತಾಭ್ ಬಚ್ಚನ್ (ಮುಂಬೈ), ಹೃತಿಕ್ ರೋಷನ್ (ಬೆಂಗಳೂರು), ಸೂರ್ಯ (ಚೆನ್ನೈ), ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ (ಕೋಲ್ಕತ್ತಾ) ಮತ್ತು ಅಕ್ಷಯ್ ಕುಮಾರ್ (ಶ್ರೀನಗರ) ಸೇರಿದಂತೆ ಭಾರತದ ಮನರಂಜನಾ ಉದ್ಯಮದ ಕೆಲವು ದೊಡ್ಡ ಸೂಪರ್ ಸ್ಟಾರ್ಗಳು ಈ ಎಲ್ಲಾ ತಂಡಗಳ ಸಹ ಮಾಲೀಕರಾಗಿದ್ದಾರೆ.
ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪೋಷಿಸುವ ಉದ್ದೇಶದೊಂದಿಗೆ ಮಾಡಿರುವ ಸಾಕಾರಗೊಳಿಸುವಲ್ಲಿ ಸಹ ಮಾಲೀಕರು ದೊಡ್ಡ ಪಾತ್ರ ವಹಿಸುತ್ತಾರೆ ಎಂದು ಐಎಸ್ಪಿಎಲ್ ಕೋರ್ ಕಮಿಟಿ ಸದಸ್ಯರಾಗಿರುವ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಇದನ್ನೂ ಓದಿ : Ind vs Eng : ಮೂರನೇ ಪಂದ್ಯಕ್ಕೂ ಜಡೇಜಾ ಅಲಭ್ಯ; ರಾಹುಲ್ ಕತೆ ಏನು?
ಐಎಸ್ಪಿಎಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್ ಟೆನಿಸ್ ಚೆಂಡಿನೊಂದಿಗೆ ವೃತ್ತಿಪರ ಲೀಗ್ ಸ್ವರೂಪದ ಮೂಲಕ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಹುಡುಕುವ ಐಎಸ್ಪಿಎಲ್ ಪ್ರಮುಖ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಸಹ-ಮಾಲೀಕರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಆಟದೊಂದಿಗಿನ ಈ ಹೊಸ ಒಡನಾಟವನ್ನು ಪ್ರಾರಂಭಿಸುತ್ತಿರುವ ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಐಎಸ್ಪಿಎಲ್ನ ಉದ್ಘಾಟನಾ ಋತುವು ಈ ವರ್ಷದ ಮಾರ್ಚ್ನಲ್ಲಿ ಪ್ರಾರಂಭವಾಗಲಿದ್ದು, ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಪಂದ್ಯಾವಳಿಯು ವೃತ್ತಿಪರ ಲೀಗ್ನ ಮಾದರಿಯನ್ನೇ ಅನುಸರಿಸುತ್ತದೆ. ಟಿ10 ಸ್ವರೂಪದಲ್ಲಿ ನಡೆಯಲಿದೆ.