Site icon Vistara News

Sachin Tenulkar : ಒಡಿಐನಲ್ಲಿ ಸಚಿನ್​ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು

Sachin Tendulkar

ಬೆಂಗಳೂರು: ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ (Sachin Tenulkar) ಕ್ರಿಕೆಟ್​​ ಇತಿಹಾಸದಲ್ಲಿ ಸೃಷ್ಟಿಸದ ದಾಖಲೆಗಳೇ ಇಲ್ಲ. ಆಧುನಿಕ ಕ್ರಿಕೆಟ್​ನ ಅಬ್ಬರದಲ್ಲಿ ಕೆಲವೊಂದು ದಾಖಲೆಗಳ ಬೇರೆ ಆಟಗಾರರ ಹೆಸರಿಗೆ ಹೋಗಿದ್ದರು ಇಂಥ ಅಮೋಘ ಸಾಧನೆ ಮಾಡಿದ ಪ್ರಮುಖ ಕ್ರಿಕೆಟರ್​ ಎಂಬ ಹೆಗ್ಗಳಿಕೆ ಸಚಿನ್ ಅವರಿಗೆ ಸಲ್ಲುತ್ತದೆ. ಈ ರೀತಿಯಾಗಿ ಅವರು ಏಕದಿನ ಕ್ರಿಕೆಟ್​ ಮಾದರಿಯಲ್ಲಿ ದ್ವಿಶತಕ ಬಾರಿಸಿದ (Double Century) ಮೊದಲ ಪುರುಷ ಕ್ರಿಕೆಟಿಗ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಸಚಿನ್​ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗರಲ್ಲ. ಆದರೆ ಮೊದಲ ಪುರುಷರ ಕ್ರಿಕೆಟಿಗ. ಆದಾಗ್ಯೂ ಅವರು ಸಾಧನೆ ಅಸಾಮಾನ್ಯ. ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್​ ಬೆಲಿಂಡಾ ಕ್ಲಾರ್ಕ್ ಬಳಿಕ ಸಚಿನ್​ ಈ ಸಾಧನೆ ಮಾಡಿದವರು. ಮುಂಬೈನ ಬಾಂದ್ರಾದ ಮಿಡಲ್ ಇನ್ಕಮ್ ಗ್ರೂಪ್ ಮೈದಾನದಲ್ಲಿ ನಡೆದ 1997 ರ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ ಕ್ಲಾರ್ಕ್ ಈ ಮೈಲಿಗಲ್ಲು ಸಾಧಿಸಿದ್ದರು. ಆದಾಗ್ಯೂ ಸಚಿನ್​ ದ್ವಿಶತಕ ಬಾರಿಸಿದ ಬಳಿಕ ಈ ಸಾಧನೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ.

ಬೆಲಿಂಡಾ ಸಾಧನೆ ಮಾಡಿದ 13 ವರ್ಷಗಳ ನಂತರ, ಗ್ವಾಲಿಯರ್​ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ಜಾಕ್ ಕಾಲಿಸ್ ನೇತೃತ್ವದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್ ಪುರುಷರ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದರು. ಭಾರತ ತಂಡ 400ರ ಗಡಿ ದಾಟುತ್ತಿದ್ದಂತೆಯೇ ಸಚಿನ್ ತೆಂಡೂಲ್ಕರ್ ಅವರು ಚಾರ್ಲ್ ಲ್ಯಾಂಗೆಡ್ವೆಲ್ಟ್ ಅವರ ಯಾರ್ಕರ್ ಎಸೆತದಲ್ಲಿ ಒಂದು ರನ್​​ ಗಳಿಸಿ ಸಂತೋಷದಿಂದ ಕೈ ಎತ್ತಿದರು. ಈ ವೇಳೆ ದಾಖಲೆ ಸೃಷ್ಟಿಯಾಯಿತು.

ಇದನ್ನೂ ಓದಿ : Sachin Tendulkar : ವಿಶೇಷಚೇತನ ಕ್ರಿಕೆಟರ್​ ಅಮೀರ್​ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ

“ವೀಕ್ಷಕವಿವರಣೆ ಬಾಕ್ಸ್​ನಲ್ಲಿದ್ದ ರವಿ ಶಾಸ್ತ್ರಿ ಈ ಕ್ಷಣದಲ್ಲಿ ಜೋರಾಗಿ ಅಬ್ಬರಿಸಿದ್ದರು “ಈ ಭೂಮಂಡಲದಲ್ಲಿ 200 ರನ್ ತಲುಪಿದ ಮೊದಲ ವ್ಯಕ್ತಿ ಸಚಿನ್​. ಅವರೇ ಭಾರತದ ಸೂಪರ್ ಮ್ಯಾನ್, ಸಚಿನ್ ತೆಂಡೂಲ್ಕರ್. ಎಲ್ಲರೂ ಎದ್ದು ಗೌರವಿಸಿ ಎಂದು ಬರೆದುಕೊಂಡಿದ್ದರು. ಐತಿಹಾಸಿಕ ಕ್ಷಣ ಕಳೆದು 14 ವರ್ಷಗಳಾಗಿವೆ. ಇಂದಿಗೂ ಅದು ಅಭಿಮಾನಿಗಳ ಮನದಲ್ಲಿ ಹಾಗೆಯೇ ಉಳಿದಿದೆ.

ಸಚಿನ್ ತೆಂಡೂಲ್ಕರ್ ಇತಿಹಾಸ ನಿರ್ಮಿಸಿದ್ದು ಹೇಗೆ?

ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಭಾರತ ತಂಡವು ವೀರೇಂದ್ರ ಸೆಹ್ವಾಗ್ ಅವರ ವಿಕೆಟ್ ಪತನದ ಬಳಿಕ ಸಂಕಷ್ಟಕ್ಕೆ ಸಿಲುಕಿಸಿತು. ಆದರೆ, ಸಚಿನ್ ತೆಂಡೂಲ್ಕರ್ ಮತ್ತು ದಿನೇಶ್ ಕಾರ್ತಿಕ್ ಎರಡನೇ ವಿಕೆಟ್ ಗೆ 194 ರನ್ ಗಳ ಜೊತೆಯಾಟವಾಡುವ ಮೂಲಕ ವಿಶ್ವಾಸ ಮೂಡಿಸಿದರು.

ಸಚಿನ್ ತೆಂಡೂಲ್ಕರ್ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ನಂತರ 90 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಅಲ್ಲಿಂದ ಅವರು ಅಬ್ಬರಿಸಿದರು.

ಅವರು 147 ಎಸೆತಗಳಲ್ಲಿ ದ್ವಿಶತಕ ಗಳಿಸಿದರು. ಅಂತಿಮವಾಗಿ ಭಾರತ 50 ಓವರ್​ಗೆ 3 ವಿಕೆಟ್ ಕಳೆದುಕೊಂಡು 401 ರನ್ ಕಲೆಹಾಕಿತು. ಮೆನ್ ಇನ್ ಬ್ಲೂ ಪಂದ್ಯವನ್ನು 153 ರನ್ ಗಳಿಂದ ಗೆದ್ದ ನಂತರ ತೆಂಡೂಲ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ರೋಹಿತ್ ಶರ್ಮಾ, ಮಾರ್ಟಿನ್ ಗಪ್ಟಿಲ್, ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಫಖರ್ ಜಮಾನ್, ಪಥುಮ್ ನಿಸ್ಸಾಂಕಾ, ಇಶಾನ್ ಕಿಶನ್, ಶುಭ್ಮನ್ ಗಿಲ್ ಮತ್ತು ಅಮೆಲಿಯಾ ಕೆರ್ ಏಕದಿನ ದ್ವಿಶತಕ ಬಾರಿಸಿದ ಇತರ ಆಟಗಾರರು.

Exit mobile version