Site icon Vistara News

WPL 2024 : ಲಾಸ್ಟ್​ ಬಾಲ್​​ ಸಿಕ್ಸರ್​; ಚಾಂಪಿಯನ್ ಮುಂಬೈ ತಂಡಕ್ಕೆ ರೋಚಕ ಜಯ

WPL Cricket

ಬೆಂಗಳೂರು : ಇದು ಮಹಿಳೆಯರ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದ ಮ್ಯಾಜಿಕ್​. ಡಬ್ಲ್ಯುಪಿಎಲ್ 2024 ರ (WPL 2024) ಆರಂಭಿಕ ಪಂದ್ಯದಲ್ಲಿ ಎಸ್ ಸಜನಾ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲ್ಲಿಸಿದರು. ಜತೆಗೆ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದರು. ಬಲಗೈ ಆಲ್ರೌಂಡರ್ ಒಂದು ಎಸೆತ ಬಾಕಿ ಇರುವಾಗ ಮತ್ತು ಐದು ರನ್ ಗೆಲುವಿಗೆ ಬೇಕಾದ ವೇಳೆ ಮೈದಾನ ಪ್ರವೇಶಿಸಿದ್ದರು. ಅವರು ಲಾಂಗ್ ಆನ್ ಕಡೆ ಸಿಕ್ಸರ್​ ಬಾರಿಸಿ ಮುಂಬೈ ಇಂಡಿಯನ್ಸ್​ಗೆ ರೋಚಕ ಗೆಲುವು ತಂದುಕೊಟ್ಟರು. ಇದರೊಂದಿಗೆ ಗೆಲುವಿನ ಹೊಸ್ತಿಲಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ವಿರೋಚಿತ 4 ವಿಕೆಟ್​ ಸೋಲು ಅನುಭವಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬಯಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 171 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ ಓವರ್​ಗಳ ಕೊನೇ ಎಸೆತದಲ್ಲಿ 6 ವಿಕೆಟ್​ಗೆ 173 ರನ್ ಬಾರಿಸಿ ಗೆಲುವು ಕಂಡಿತು.

ಇದನ್ನೂ ಓದಿ : IPL 2024 : ಸಿಎಸ್​ಕೆ ತಂಡದ ಇನ್ನೊಬ್ಬ ಆಲ್​ರೌಂಡರ್​ ಗೆ ಗಾಯ; ಟೂರ್ನಿಗೆ ಮೊದಲೇ ಆಘಾತ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಮುಂಬಯಿ ತಂಡದ ಸತತವಾಗಿ ರನ್​ ಗಳಿಸಿತು. ಆರಂಭಿಕ ಆಟಗಾರ್ತಿ ಯಸ್ತಿಕಾ ಭಾಟಿಯಾ ಅವರು 57 ರನ್​ಗಳ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಬಳಿಕ ನ್ಯಾಟ್​ ಸೀವರ್​ 19 ರನ್​ ಬಾರಿಸಿ ಔಟಾದರು. ಆದರೆ ಅದಕ್ಕಿಂತ ಮೊದಲು ಹೇಲಿ ಮ್ಯಾಥ್ಯೂಸ್​ ಶೂನ್ಯಕ್ಕೆ ಔಟಾಗುವ ಮೂಲಕ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಬಳಿಕ ನಾಯಕಿ ಹರ್ಮನ್​ಪ್ರೀತ್ ಕೌರ್​ ಮಧ್ಯಮ ಕ್ರಮಾಂಕದಲ್ಲಿ 55 ರನ್ ಬಾರಿಸಿದರು. ತಂಡದ ಗೆಲುವಿಗೆ 5 ರನ್ ಬೇಕಾಗುವಷ್ಟರಲ್ಲಿ ಔಟಾದರು. ಆದರೆ ಸಜನಾ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ಶಫಾಲಿ ವರ್ಮಾ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಆದರೆ ನಾಯಕಿ ಮೆಗ್​ ಲ್ಯಾನಿಂಗ್ ಅವರ 31 ರನ್ ಹಾಗೂ ಅಲೈಸ್​ ಕಾಪ್ಸಿ ಬಾರಿಸಿದ ಅಮೋಘ 75 ರನ್ ಹಾಗೂ ಜೆಮಿಮಾ ಅವರ ಸ್ಫೋಟಕ 42 ರನ್​ಗಳ ನೆರವಿನಿಂದ 171 ರನ್ ಬಾರಿಸಿತು.

ಡೆಲ್ಲಿ ಕ್ಯಾಪಿಟಲ್ಸ್: 5 ವಿಕೆಟ್​ಗೆ 171 (ಆಲಿಸ್ ಕ್ಯಾಪ್ಸಿ 75, ಜೆಮಿಮಾ ರೊಡ್ರಿಗಸ್ 42 ) ನ್ಯಾಟ್ ಸ್ಕಿವರ್-ಬ್ರಂಟ್ 2/33, ಅಮೆಲಿಯಾ ಕೆರ್ 2/43)

ಮುಂಬೈ ಇಂಡಿಯನ್ಸ್: 173/6 (ಯಾಸ್ತಿಕಾ ಭಾಟಿಯಾ 57, ಹರ್ಮನ್ಪ್ರೀತ್ ಕೌರ್ 55; ಯಜುವೇಂದ್ರ ಚಹಲ್ 22ಕ್ಕೆ 2) ಅರುಂಧತಿ ರೆಡ್ಡಿ 27ಕ್ಕೆ 2, ಆಲಿಸ್ ಕ್ಯಾಪ್ಸೆ 23ಕ್ಕೆ 2)

ಅದ್ಧೂರಿ ಶುಭಾರಂಭ

ಪಂದ್ಯಕ್ಕೆ ಮೊದಲು ಅದ್ಧೂರಿ ಉದ್ಘಾಟನಾ ಕಾರ್ಯಕ್ರಮಗಳು ನಡೆಯಿತು. ಬಾಲಿವುಡ್​ ಸ್ಟಾರ್​ಗಳಾದ ಟೈಗರ್ ಶ್ರಾಫ್​, ವರುಣ್​ ಧವನ್​, ಸಿದ್ದಾರ್ಥ್​ ಮಲ್ಹೋತ್ರಾ ಸೇರಿದಂತೆ ಈ ವೇಳೆ ಪ್ರದರ್ಶನ ನೀಡಿದರು. ಬಳಿಕ ಸುಡುಮದ್ದುಗಳ ಪ್ರದರ್ಶನವೂ ನಡೆಯಿತು.

Exit mobile version