ಅಹಮದಾಬಾದ್: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ನ ರಾಜಸ್ಥಾನ್ ರಾಯಲ್ಸ್ ಫ್ರ್ಯಾಂಚೈಸಿ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದುಕೊಂಡಿದ್ದಾರೆ. ಅವರು ಮಾಜಿ ನಾಯಕ ಹಾಗೂ ವಿಶ್ವ ಪ್ರಸಿದ್ಧ ಸ್ಪಿನ್ನರ್ ದಿ. ಶೇನ್ ವಾರ್ನ್ ಅವರ ಸಾಧನೆಯೊಂದನ್ನು ಸರಿಗಟ್ಟಿದ್ದಾರೆ. ಬುಧವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ಎಲಿಮಿನೇಟರ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದ ಬಳಿಕ ಸಂಜು ಈ ಸಾಧನೆಗೆ ಪಾತ್ರರಾಗಿದ್ದಾರೆ.
🔝 Most wins as RR captain (IPL)
— MANAN 63 (@MANAN_63) May 23, 2024
3️⃣1️⃣Shane Warne
3️⃣1️⃣Sanju Samson*💪
1️⃣8️⃣Rahul Dravid
1️⃣5️⃣Steven Smith
━━━━━━━━━━━━━#SanjuSamson #TATAIPL2024 #RAJASTHANROYALS #RCBvsRR pic.twitter.com/nGXVGlqDg2
ಈ ಗೆಲುವಿನೊಂದಿಗೆ ನಾಯಕನಾಗಿ ಸಂಜು ಸ್ಯಾಮ್ಸನ್ ಅವರ ಒಟ್ಟು ಗೆಲುವು 31 ಪಂದ್ಯಗಳಿಗೆ ತಲುಪಿತು. ಇದು 2008 ರಲ್ಲಿ ತಂಡವನ್ನು ಉದ್ಘಾಟನಾ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದ ಸ್ಪಿನ್ ಮಾಂತ್ರಿಕ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ರಾಜಸ್ಥಾನ್ ತಂಡದ ಇತರ ಮಾಜಿ ನಾಯಕರುಗಳಾದ ರಾಹುಲ್ ದ್ರಾವಿಡ್ (18 ಗೆಲುವುಗಳು), ಶೇನ್ ವ್ಯಾಟ್ಸನ್ (8 ಗೆಲುವುಗಳು), ಅಜಿಂಕ್ಯ ರಹಾನೆ (9 ಗೆಲುವುಗಳು) ಮತ್ತು ಸ್ಟೀವ್ ಸ್ಮಿತ್ (15 ಗೆಲುವು) ಅವರಂತಹ ಆಟಗಾರರನ್ನು ಪರಿಗಣಿಸಿದಾಗ ಈ ಸಾಧನೆಯ ಮಹತ್ವದ್ದಾಗಿದೆ.
ಇದನ್ನೂ ಓದಿ: IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್ ಆಡ್ತಾರೆ; ಸಿಎಸ್ಕೆ ಸಿಇಒ ಸ್ಪಷ್ಟನೆ
ಈ ನಾಯಕರಲ್ಲಿ ಪ್ರತಿಯೊಬ್ಬರೂ ಫ್ರ್ಯಾಂಚೈಸಿ ಕ್ರಿಕೆಟ್ನಲ್ಲಿ ವಿಶಿಷ್ಟವಾದ ಹೆಗ್ಗುರುತು ಸ್ಥಾಪಿಸಿದ್ದರು. ಆದರೆ ಉದ್ಘಾಟನಾ ಋತುವಿನಲ್ಲಿ ಶೇನ್ ವಾರ್ನ್ ಅವರ ಬಲವಾದ ನಾಯಕತ್ವವು ಉನ್ನತ ಮಾನದಂಡ ಸ್ಥಾಪಿಸಿದೆ. ಈಗ, 2021ರಲ್ಲಿ ಸ್ಮಿತ್ ಅವರಿಂದ ನಾಯಕತ್ವದ ಅಧಿಕಾರ ವಹಿಸಿಕೊಂಡ ಬಳಿಕ ಸ್ಯಾಮ್ಸನ್ ತನ್ನನ್ನು ತಾನು ಯೋಗ್ಯ ಉತ್ತರಾಧಿಕಾರಿಯೆಂದು ಸಾಬೀತುಪಡಿಸಿಕೊಳ್ಳುತ್ತಿದ್ದಾರೆ.
ಆರ್ಸಿಬಿ ವಿರುದ್ಧದ ರೋಚಕ ಪಂದ್ಯ
ಎಲಿಮಿನೇಟರ್ ಆಟದ ವಿಚಾರಕ್ಕೆ ಬಂದರೆ ಎರಡೂ ಕಡೆಯವರ ನಡುವಿನ ಘರ್ಷಣೆ ಒಂದು ಅದ್ಭುತ ಪ್ರದರ್ಶನವಾಗಿತ್ತು. ಋತುವನ್ನು ಅಬ್ಬರದಿಂದ ಪ್ರಾರಂಭಿಸಿದ ರಾಜಸ್ಥಾನ ರಾಯಲ್ಸ್ ಕೊನೆಯಲ್ಲಿ ಸತತ ನಾಲ್ಕು ಸೋಲು ಕಂಡಿತು. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಏಳು ಬೀಳುಗಳ ನಡುವೆ ಪ್ಲೇಆಫ್ಗೇರಿದ್ದು ಆರ್ಸಿಬಿ ಪಾಲಿಗೆ ಅಚ್ಚರಿಯ ವಿಚಾರ. ಅಂತೆಯೇ ಎರಡೂ ತಂಡಗಳು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವು.
ಅನುಕ್ರಮವಾಗಿ ಎರಡು ಮತ್ತು ಮೂರು ವಿಕೆಟ್ಗಳನ್ನು ಪಡೆದ ರವಿಚಂದ್ರನ್ ಅಶ್ವಿನ್ ಮತ್ತು ಅವೇಶ್ ಖಾನ್ ನೇತೃತ್ವದ ರಾಜಸ್ಥಾನದ ಬೌಲಿಂಗ್ ಘಟಕವು ಆರ್ಸಿಬಿಯನ್ನು 172 ರನ್ಗಳಿಗೆ ನಿಯಂತ್ರಿಸಿತು. ರನ್ ಚೇಸಿಂಗ್ ಕೆಲವೊಂದು ಕ್ಷಣದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದರೂ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಆರ್ಆರ್ ಗುರಿ ತಲುಪಿತ್ತು.
ಮೇ 24 ರಂದು ಚೆಪಾಕ್ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಖಾಮುಖಿಯಾಗಲಿದೆ ರಾಜಸ್ಥಾನ್. ಹೀಗಾಗಿ ಸಂಜು ಪಡೆಗೆ ಇನ್ನು ಫೈನಲ್ಗೇರಲು ಒಂದು ಹೆಜ್ಜೆ ಬಾಕಿಯಿದೆ. ಸಂಜು ನೇತೃತ್ವದ ತಂಡದ ಪ್ರಶಸ್ತಿಗಾಗಿ ಕಾಯುತ್ತಿದೆ.