Site icon Vistara News

Sarfaraz Khan : ಹಾರ್ದಿಕ್​ ಪಾಂಡ್ಯ ದಾಖಲೆ ಸರಿಗಟ್ಟಿದ ಸರ್ಫರಾಜ್ ಖಾನ್​

Sarfaraz Khan

ಬೆಂಗಳೂರು: ಯುವ ಬ್ಯಾಟರ್​ ಸರ್ಫರಾಜ್ ಖಾನ್ (Sarfaraz Khan) ಅಂತಿಮವಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ದೇಶಿಯ ಕ್ರಿಕೆಟ್​ನಲ್ಲಿ ನೀಡಿದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಅವರು ಅವಕಾಶ ಪಡೆದಿದ್ದಾರೆ. ರಾಜ್ಕೋಟ್​ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ಸರ್ಫರಾಜ್ ಅವರನ್ನು ಭಾರತದ ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡಿದರು. ಸರ್ಫರಾಜ್ ಭಾರತ ತಂಡದ ಮ್ಯಾನೇಜ್ಮೆಂಟ್​ನ ನಿರೀಕ್ಷೆಯಂತೆ ಸಂದರ್ಭಗಳಿಗೆ ತಕ್ಕಂತೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು.

ಸರ್ಫರಾಜ್ ಖಾನ್ 66 ಎಸೆತಗಳಲ್ಲಿ 62 ರನ್ ಗಳಿಸಿದರು. ಅದರಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸೇರಿಕೊಂಡಿವೆ. ಅದಕ್ಕಿಂತ ಮೊದಲು ಸರ್ಫರಾಜ್ ಖಾನ್ 48 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಟೆಸ್ಟ್​ನ ಚೊಚ್ಚಲ ಪಂದ್ಯದಲ್ಲಿ ಅತಿ ವೇಗದ ಅರ್ಧ ಶತಕವಾಗಿದೆ. ಇದರೊಂದಿಗೆ ಸರ್ಫರಾಜ್ ಖಾನ್ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ದಾಖಲೆಯನ್ನು ಸರಿಗಟ್ಟಿದರು. ಇಬ್ಬರೂ ಆಟಗಾರರು ಈಗ ಜಂಟಿಯಾಗಿ ದಾಖಲೆಯನ್ನು ಹೊಂದಿದ್ದಾರೆ. ಪಾಂಡ್ಯ 2017ರಲ್ಲಿ ಶ್ರೀಲಂಕಾ ವಿರುದ್ಧ 48 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಪುರುಷರ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದವರು

ಇನ್ನಿಂಗ್ಸ್​ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿದ ಸರ್ಫರಾಜ್ ಖಾನ್ ಭಾರತೀಯ ತಂಡಕ್ಕೆ ಹೆಚ್ಚು ಅಗತ್ಯವಾದ ರನ್​ ನೀಡಿದರು. ಅವರಿಗೆ ತಮ್ಮ ಅರ್ಧ ಶತಕವನ್ನು ಶತಕವಾಗಿ ಪರಿವರ್ತಿಸಬಹುದಿತ್ತು. ಆದಾಗ್ಯೂ, ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಅನಗತ್ಯ ರನ್ ಔಟ್ ಗೆ ಬಲಿಯಾದರು.

ಇದನ್ನೂ ಓದಿ : Rahul Dravid: ಮೊದಲ ಟೆಸ್ಟ್​ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಕೋಚ್​ ದ್ರಾವಿಡ್​

ಸರ್ಫರಾಜ್​ ರನ್​ಔಟ್ ಮಾಡಿದ ಜಡೇಜಾ ವಿರುದ್ಧ ಸಿಟ್ಟಿಗೆದ್ದ ರೋಹಿತ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ (Sarfaraz Khan) ಭರ್ಜರಿ ಅರ್ಧ ಶತಕ ಸಿಡಿಸಿದ್ದಾರೆ. ಸರ್ಫರಾಜ್ ಟೀಮ್ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ ಮತ್ತು ರವೀಂದ್ರ ಜಡೇಜಾ ಅವರ ತಪ್ಪಿನಿಂದಾಗಿ ಅವರು ರನ್ ಔಟ್ ಆಗಿದ್ದಾರೆ. ರವೀಂದ್ರ ಜಡೇಜಾ ರನ್​ಗಾಗಿ ಒಂದೆರಡು ಹೆಜ್ಜೆ ಮುಂದಕ್ಕೆ ಹೋಗಿ ಬಳಿಕ ನಿರಾಕರಿಸಿದರು. ಆದಾಗ್ಯೂ, ಸರ್ಫರಾಜ್ ಪಿಚ್​ನಿಂದ ಅರ್ಧದಷ್ಟು ಮುಂದಿದ್ದರು. ಹೀಗಾಗಿ ರನ್​ಔಟ್​ಗೆ ಬಲಿಯಾಗಬೇಕಾಯಿತು.

ಅದಕ್ಕಿಂತ ಮೊದಲು ಸರ್ಫರಾಜ್ ಖಾನ್ 66 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಈ ಮೂಲಕ ಭಾರತ ತಂಡ ಉತ್ತಮ ರನ್​ಗಳಿಕೆಯತ್ತ ಸಾಗಿತ್ತು. ಹೀಗಾಗಿ ಭಾರತ ತಂಡದ ನಾಯಕ ಸರ್ಫರಾಜ್ ಔಟಾಗುತ್ತಿದ್ದಂತೆ ಸಿಟ್ಟಿಗೆದ್ದರು. ಡ್ರೆಸಿಂಗ್​ ರೂಮ್​ನಲ್ಲಿ ಕುಳಿತಿದ್ದ ಅವರು ಎದ್ದು ನಿಂತು ತಲೆ ಮೇಲಿಂದ ಕ್ಯಾಪ್ ತೆಗೆದು ನೆಲಕ್ಕೆ ಎಸೆಯುವ ಮೂಲಕ ತಮ್ಮ ಹತಾಶೆಯನ್ನು ಪ್ರದರ್ಶಿಸಿದರು.

Exit mobile version