Site icon Vistara News

Vande Bharat : ಪ್ರಯಾಣಿಕರ ಗಮನಕ್ಕೆ; ಬೆಂಗಳೂರು- ಚೆನ್ನೈ 2ನೇ ವಂದೇ ಭಾರತ್​ ರೈಲು ಮಾರ್ಚ್​ 12ಕ್ಕೆ ಹೊರಡಲಿದೆ

Vande Bharat

ಬೆಂಗಳೂರು : ಕರ್ನಾಟಕದ ರಾಜಧಾನಿ ಹಾಗೂ ತಮಿಳುನಾಡಿನ ರಾಜಧಾನಿ ಚೆನ್ನೈ ನಡುವೆ ಮತ್ತೊಂದು ವಂದೇ ಭಾರತ್​ ರೈಲು (Vande Bharat) ಸಂಚರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್​ 12ರಂದು ವರ್ಚುಯಲ್ ಕಾರ್ಯಕ್ರಮದ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ಎರಡು ನಗರಗಳ ನಡುವೆ ಈಗಾಗಲೇ ಒಂದು ಒಂದು ವಂದೇ ಭಾರತ್​ ಓಡಾಡುತ್ತಿದೆ. ಅದು ಮೈಸೂರು ತನಕ ಸಂಚರಿಸುತ್ತದೆ. ಈ ಟ್ರೈನು ಎರಡು ನಗರಗಳ ನಡುವೆ ಮಾತ್ರ ಓಡಲಿದೆ. ಇದೇ ದಿನ ಕಲಬುರಗಿಗೂ ಒಂದು ರೈಲು ಸಂಚಾರ ಆರಂಭವಾಗಲಿದೆ.

ಈ ಹಿಂದೆ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಇದು ದಕ್ಷಿಣ ಭಾರತದಲ್ಲಿ ಈ ಮಾದರಿಯ ಮೊದಲ ರೈಲು ಆಗಿತ್ತು. ಪ್ರಸ್ತುತ, ಬೆಂಗಳೂರಿನಿಂದ ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಚೆನ್ನೈ, ಕೊಯಮತ್ತೂರು, ಮೈಸೂರು ಮತ್ತು ಹೈದರಾಬಾದ್​ಗೆ ವಂದೇ ಭಾರತ್ ರೈಲುಗಳಿವೆ.

ಹೊಸ ರೈಲಿನ ಸೇರ್ಪಡೆಯನ್ನು ಪ್ರಧಾನಿ ಮೋದಿ ಮಾರ್ಚ್ 12 ರಂದು ವರ್ಚುವಲ್ ಆಗಿ ಘೋಷಿಸಲಿದ್ದಾರೆ. ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರು ಹೊಸ ಸೆಮಿ ಹೈಸ್ಪೀಡ್ ರೈಲು ಶೀಘ್ರದಲ್ಲೇ ಹಳಿಗೆ ಬರಲಿದೆ ಎಂದು ಖಚಿತಪಡಿಸಿದ್ದಾರೆ.

ವಿವರಗಳ ಪ್ರಕಾರ, ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಕಿತ್ತಳೆ ಮತ್ತು ಬಿಳಿ ಬಣ್ಣಗಳಲ್ಲಿ ಬರುತ್ತದೆ. ಹಿಂದಿನ ಬಿಳಿ ಮತ್ತು ನೀಲಿ ಸಂಯೋಜನೆಗಿಂತ ಇದು ಭಿನ್ನವಾಗಿದೆ. ಇದು ಹಿಂದಿನ ವಂದೇ ಭಾರತ್ ಎಕ್ಸ್​ಪ್ರೆಸ್​ಗಿಂತ ವೇಗವಾಗಿ ಪ್ರಯಾಣಿಸುತ್ತದೆ. ಇದು ಎರಡು ರಾಜಧಾನಿ ನಗರಗಳ ನಡುವಿನ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುತ್ತದೆ ಎಂದು ಹೇಳಲಾಗಿದೆ.

ಯಾವ ಸಮಯಕ್ಕೆ?

ರೈಲಿನ ಸಮಯ ಮತ್ತು ಟಿಕೆಟ್​ ದರದ ಬಗ್ಗೆ ಯಾವುದೇ ಬಹಿರಂಗಪಡಿಸಲಾಗಿಲ್ಲ. ಇದಲ್ಲದೆ, ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಐಟಿ ರಾಜಧಾನಿಯೊಂದಿಗೆ ಸಂಪರ್ಕಿಸುವ ಬೆಂಗಳೂರು ಮತ್ತು ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್​​ಪ್ರೆಸ್​ಗೆ ಪ್ರಧಾನಿ ಮೋದಿ ವರ್ಚುವಲ್ ಹಸಿರು ನಿಶಾನೆ ತೋರಲಿದ್ದಾರೆ. ಅಲ್ಲದೆ ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್​ಪ್ರೆಸ್​​ ಸಿಗುವ ಸಾಧ್ಯತೆಯಿದೆ. ಅದು ತಮಿಳುನಾಡಿನ ಮಧುರೈಗೆ ಪ್ರಯಾಣಿಸಲಿದೆ.

ಇದನ್ನೂ ಓದಿ : Lok Sabha Election : ತಮಿಳುನಾಡಿನಲ್ಲಿ ಕಾಂಗ್ರೆಸ್​ಗೆ 9 ಕ್ಷೇತ್ರ ಬಿಟ್ಟುಕೊಟ್ಟ ಡಿಎಂಕೆ

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ 12ರಂದು ಹಸಿರು ನಿಶಾನೆ ತೋರಲಾಗುವುದು ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಜಾಧವ್, “ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್. 12.03.2024 ರಂದು ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಉದ್ಘಾಟನೆ. ಕಲಬುರಗಿ ಪ್ರದೇಶಕ್ಕೆ ಈ ಉಡುಗೊರೆ ನೀಡಿದ ಶ್ರೀ @narendramodiji, ಶ್ರೀ @AshwiniVaishnaw ಜೀ ಅವರಿಗೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ

Exit mobile version