Site icon Vistara News

Hardik Pandya : ಹಾರ್ದಿಕ್ ಪಾಂಡ್ಯನಿಗೆ ತಮಾಷೆ ಮಾಡುವವರಿಗೆ ಜೈಲೂಟ ಗ್ಯಾರಂಟಿ!

Hardik Pandya 1

ಬೆಂಗಳೂರು: ಮುಂಬೈ ಇಂಡಿಯನ್ಸ್ (Mumbai Indian’s) ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಈಗ ಐಪಿಎಲ್​ ಟೂರ್ನಿಯ (IPL 2024) ಬಹು ಚರ್ಚೆಯ ವಿಷಯವಾಗಿದ್ದಾರೆ. ರೋಹಿತ್ ಶರ್ಮಾ (Rohit Sharma) ಅವರನ್ನು ತಂಡದ ನಾಯಕನ ಸ್ಥಾನದಿಂದ ಬದಲಾಯಿಸಿದ ನಂತರ ಮುಂಬಯಿ ತಂಡದ ಅಭಿಮಾನಿಗಳು ಕೋಪಗೊಂಡಿದ್ದಾರೆ. ಆ ಕೋಪವನ್ನು ಪಾಂಡ್ಯ ಅವರನ್ನು ಟ್ರೋಲ್ ಮಾಡುವ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ. ಇದು ಮುಂಬಯಿ ತಂಡದಕ್ಕೆ, ಐಪಿಎಲ್ ಆಯೋಜಕರಿಗೆ ಹಾಗೂ ಸ್ವತಃ ಪಾಂಡ್ಯನಿಗೆ ನುಂಗಲಾರದ ತುತ್ತಾಗಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯವನ್ನು ಆಡಿತ್ತು. ಅಲ್ಲಿ ಪಾಂಡ್ಯ ಅವರ ಹಿಂದಿನ ತವರು ಮೈದಾನದಲ್ಲಿ ಅಭಿಮಾನಿಗಳಿಂದ ಭಾರಿ ಟ್ರೋಲ್​ ಹಾಗೂ ಅಪಮಾನಕ್ಕೆ ಒಳಗಾಗಿದ್ದರು.

ಮುಂಬೈ ತಂಡ ಇದುವರೆಗೆ ಆಡಿರುವ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿದೆ. ಮುಂದಿನ ನಾಲ್ಕು ಪಂದ್ಯಗಳು ಮುಂಬೈನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಭಿಮಾನಿಗಳ ಪ್ರಸ್ತುತ ಕೋಪದ ಬಗ್ಗೆ ತಿಳಿದಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಟ್ರೋಲಿಂಗ್ ಹಾಗೂ ತಮಾಷೆ ತಡೆಗಟ್ಟಲು ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ.

ಲೋಕಮತ್ ಮರಾಠಿ ಸುದ್ದಿ ಸಂಸ್ಥೆಯ ಪ್ರಕಾರ, ಪಾಂಡ್ಯನಿಗೆ ಟ್ರೋಲ್​ ಮಾಡದಂತೆ ಎಂಸಿಎ ಭದ್ರತೆ ಹೆಚ್ಚಿಸಿದೆ. ಪಂದ್ಯದ ಸಮಯದಲ್ಲಿ ಪ್ರೇಕ್ಷಕರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಪಾಂಡ್ಯಗೆ ಕಿರುಕುಳ ನೀಡುವ ಅಥವಾ ಟ್ರೋಲ್ ಮಾಡುವವರನ್ನು ಬಂಧಿಸಲಾಗುತ್ತದೆ. ಅಲ್ಲದಿದ್ದರೆ ಕ್ರೀಡಾಂಗಣದಿಂದ ಹೊರಹಾಕಲಾಗುತ್ತದೆ.. ಆದರೂ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮುಂಬೈನ ಮೊದಲ ತವರು ಪಂದ್ಯಕ್ಕೆ ಮೊದಲು ಪ್ರೇಕ್ಷಕರಲ್ಲಿ ಪಾಂಡ್ಯ ಅವರ ಟೀಕಾಕಾರರನ್ನು ನಿಯಂತ್ರಿಸುವ ಸಾಕಷ್ಟು ಸವಾಲು ಪೊಲೀಸರ ಮುಂದಿದೆ.

ಇದನ್ನೂ ಓದಿ: Virat Kohli : ರಿಂಕು ಸಿಂಗ್​ಗೆ ಬ್ಯಾಟ್ ಕೊಟ್ಟು ಅಭಿನಂದಿಸಿದ ಕೊಹ್ಲಿ

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಸತತ ಸೋಲಿನ ನಂತರ ಎಂಸಿಎ ಈ ಕ್ರಮಗಳನ್ನು ಕೈಗೊಂಡಿದೆ. ಹಾರ್ದಿಕ್ ಪಾಂಡ್ಯ ವಿರುದ್ಧ ಕಾಮೆಂಟ್​ಗಳನ್ನು ಮಾಡುವ ಮೂಲಕ ಅವರ ಜೋರಾಗಿ ಕೂಗುವವರನ್ನು ಭದ್ರತಾ ಸಿಬ್ಬಂದಿ ಬಂಧಿಸಲಿದ್ದಾರೆ.

ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಯಾವುದೇ ಗೆಲುವು ದಾಖಲಿಸಿಲ್ಲ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಸೋಲಿನ ನಂತರ ಪಾಂಡ್ಯ ನಾಯಕತ್ವವನ್ನು ಅನೇಕ ಕ್ರಿಕೆಟ್​ ಪಂಡಿತರು ಪ್ರಶ್ನಿಸಿದ್ದಾರೆ. ಏಕೆಂದರೆ ಎಸ್​ಆರ್​ಎಚ್​ ಬ್ಯಾಟರ್​ಗಳು 277 ರನ್ ಗಳಿಸಿದ್ದೇ ಇದಕ್ಕೆ ಕಾರಣ. ಇದು ಈಗ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತವಾಗಿದೆ.

Exit mobile version