Site icon Vistara News

Shah Rukh Khan : ಶಾರುಖ್​ ಖಾನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Shah Rukh Khan

ಅಹ್ಮದಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬುದಾಗಿ ವರದಿಗಳಾಗಿವೆ. ಅವರನ್ನು ತಕ್ಷಣವೇ ಅಹಮದಾಬಾದ್ ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ (KKR ) ಮತ್ತು ಸನ್​ರೈಸರ್ಸ್​​ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ಸಮಯದಲ್ಲಿ ನಟ ಬಿಸಿಲಿನ ಆಘಾತಕ್ಕೆ (Sun Stroke) ಒಳಗಾದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

ಐಪಿಎಲ್ 2024ರ ಮೊದಲ ಪ್ಲೇಆಫ್ ಪಂದ್ಯದಲ್ಲಿ ಎಸ್ಆರ್​ಎಚ್​​​ ವಿರುದ್ಧ ತಮ್ಮ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಶಾರುಖ್ ಖಾನ್ ಅಹಮದಾಬಾದ್​ಗೆ ಬಂದಿದ್ದರು. ಪಂದ್ಯದ ಮುಕ್ತಾಯದ ತನಕ ಅವರು ಮೈದಾನದಲ್ಲಿಯೇ ಇದ್ದರು. ಬಳಿಕ ಅವರು ಮೈದಾನಕ್ಕೆ ಇಳಿದು ಕ್ಯಾಮೆರಾಗಳಿಗೆ ಫೋಸ್​ ಕೊಟ್ಟಿದ್ದರು. ಅಭಿಮಾನಿಗಳಿಗೆ ಕೈ ಬೀಸಿ ಶುಭಾಶಯ ಹೇಳಿದ್ದರು. ಆದರೆ, ಅಲ್ಲಿಂದ ನಿರ್ಗಮಿಸಿದ ಬಳಿಕ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂದು ಹೇಳಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಆರೋಗ್ಯದ ನಿಗಾ ವಹಿಸುತ್ತಿದ್ದಾರೆ ಎಂಬುದಾಗಿ ಮಾಹಿತಿ ದೊರಕಿದೆ.

ಫೈನಲ್ ತಲುಪಿದ ಕೆಕೆಆರ್

ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ರೋಚಕ ಪಂದ್ಯದ ನಂತರ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2024 ರ ಫೈನಲ್​ಗೆ ಪ್ರವೇಶಿಸಿದೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಶಾರುಖ್ ಖಾನ್ ಮತ್ತು ಅವರ ಮಕ್ಕಳಾದ ಅಬ್ರಾಮ್, ಸುಹಾನಾ ಇದ್ದರು. ಜತೆಗೆ ನಟಿ ಅನನ್ಯಾ ಮತ್ತು ಶನಾಯಾ ಕೂಡ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: LPL 2024 : ಫ್ರಾಂಚೈಸಿ ಮಾಲೀಕನಿಂದಲೇ ಮ್ಯಾಚ್​ ಫಿಕ್ಸಿಂಗ್; ಬಂಧನ

ಯಶಸ್ಸಿನ ಸಂಭ್ರಮದಲ್ಲಿ ಶಾರುಖ್​

ಶಾರುಖ್ ಖಾನ್ ಇತ್ತೀಚೆಗೆ ಮೂರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ: “ಪಠಾಣ್”, “ಜವಾನ್” ಮತ್ತು “ಡಂಕಿ”. ಆ ಬಳಿಕ ಅವರು ತಮ್ಮ ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್​ ಜತೆಗೆ ಇದ್ದಾರೆ. ಈ ಬಾರಿ ಅವರ ತಂಡುವ ಫೈನಲ್​ಗೆ ಪ್ರವೇಶ ಪಡೆದಿದೆ. ಇದರ ಜತೆಎಗ ಕಿಂಗ್ ಖಾನ್ ತಮ್ಮ ಮುಂಬರುವ ಚಿತ್ರ “ಕಿಂಗ್” ನಲ್ಲಿ ಕೆಲಸ ಮಾಡುತ್ತಿದ್ದಾರೆ,

ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು
ಶಾರುಖ್ ಖಾನ್ ಅವರ ಆರೋಗ್ಯದ ಕುರಿತ ಮಾಹಿತಿಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಶಾರುಖ್ ಅವರ ಅನಾರೋಗ್ಯ ಎತ್ತಿ ತೋರಿಸುತ್ತಿದೆ.

Exit mobile version