Site icon Vistara News

IPL 2024 : ಕೆಕೆಆರ್​ ಸೇರಲು ಗಂಭೀರ್​ಗೆ ಬ್ಲ್ಯಾಂಕ್​ ಚೆಕ್​ ಆಫರ್​ ಕೊಟ್ಟಿದ್ದ ಶಾರುಖ್​ ಖಾನ್​!

Sharukh Khan

ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ಪರ ಎರಡು ಯಶಸ್ವಿ ವರ್ಷಗಳ ನಂತರ ಗೌತಮ್ ಗಂಭೀರ್ (Gautam Gambhir) ಐಪಿಎಲ್ 2024 ಗಾಗಿ (IPL 2024) ಕೋಲ್ಕತಾ ನೈಟ್ ರೈಡರ್ಸ್​ಗೆ (KKR) ಮರಳಿದ್ದಾರೆ. ಅವರ ನಾಯಕತ್ವದಲ್ಲಿ ಕೆಕೆಆರ್ ತಂಡ 2012 ಮತ್ತು 2014 ರಲ್ಲಿ ಚಾಂಪಿಯನ್ಶಿಪ್ ಗೆದ್ದಿತು. ಆದರೆ 2017 ರಲ್ಲಿ ಫ್ರಾಂಚೈಸಿಯನ್ನು ತೊರೆದು ಡೆಲ್ಲಿ ಕ್ಯಾಪಿಟಲ್ಸ್​ಗೆ ಅವರು ಆಟಗಾರನಾಗಿ ಸೇರಿಕೊಂಡಿದ್ದರು. ನಿವೃತ್ತಿಯ ನಂತರ ಅವರು ಕೋಚಿಂಗ್​ಗೆ ಕ್ಷೇತ್ರಕ್ಕೆ (Coaching Duty)ಪ್ರವೇಶಿಸಿದರು. 2022 ಮತ್ತು 2023 ರಲ್ಲಿ ಎಲ್ಎಸ್​​ಜಿ (lsg TEAM) ಪ್ಲೇ-ಆಫ್​ಗೆ ಅರ್ಹತೆ ಪಡೆಯಲು ಸಹಾಯ ಮಾಡಿದ್ದರು.

ಏತನ್ಮಧ್ಯೆ, 2021 ರಲ್ಲಿ ಫೈನಲ್​ಗೆ ಅರ್ಹತೆ ಪಡೆದ ನಂತರ ಕೆಕೆಆರ್ ಸತತ ಎರಡು ವರ್ಷಗಳಲ್ಲಿ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿದೆ. ಅದಕ್ಕಾಗಿ ಕೆಕೆಆರ್ ಸಹ ಮಾಲೀಕ ಮತ್ತು ಬಾಲಿವುಡ್ ನಟ ಶಾರುಖ್ ಖಾನ್ ಗಂಭೀರ್ ಅವರನ್ನು ಮರಳಿ ಕರೆತರಲು ನಿರ್ಧರಿಸಿದ್ದಾರೆ. ಅವರ ನಾಯಕತ್ವದಲ್ಲಿ ಫ್ರಾಂಚೈಸಿ ಅದ್ಭುತ ಯಶಸ್ಸನ್ನು ಕಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಮಣೆ ಹಾಕಲಾಗಿದೆ.

ಖಾಲಿ ಚೆಕ್​ ನೀಡಿ ಕರೆದಿದ್ದರು

ವರದಿಗಳ ಪ್ರಕಾರ ಸಹ-ಮಾಲೀಕರಾದ ಶಾರುಖ್ ಖಾನ್​ ಮಾಜಿ ಕ್ರಿಕೆಟಿಗನಿಗೆ ತಂಡ ಸೇರಲು ಖಾಲಿ ಚೆಕ್ ನೀಡಿದ್ದಾರೆ. ಆದರೆ ಅವರು ಅದನ್ನು ಒಪ್ಪಿಕೊಂಡು ಹೋಗಿದ್ದಾರೆಯೇ ಎಂಬುದು ಗೊತ್ತಾಗಿಲ್ಲ . 42 ವರ್ಷದ ಆಟಗಾರ ಕೊನೆಗೂ ಕೆಕೆಆರ್​ಗೆ ಸೇರಿಕೊಂಡಿದ್ದಾರೆ. ಅವರು ತಮ್ಮ ಮೊದಲ ಕೆಕೆಆರ್ ಮತ್ತೊಮ್ಮೆ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

ಇದನ್ನೂ ಓದಿ : IPL 2024 : ಐಪಿಎಲ್​ ಇನಿಂಗ್ಸ್​ ಒಂದರಲ್ಲಿ ಅತ್ಯಧಿಕ ಸಿಕ್ಸರ್​ಗಳನ್ನು ಬಾರಿಸಿದ ಆಟಗಾರರ ವಿವರ ಇಲ್ಲಿದೆ

ಲೋಕಸಭಾ ಚುನಾವಣೆ ಹಿನ್ನೆಲೆ; ಐಪಿಎಲ್​ ಎರಡನೇ ಹಂತ ದುಬೈಗೆ ಶಿಫ್ಟ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕಾರಿಗಳು ಐಪಿಎಲ್​ನ ದ್ವಿತೀಯಾರ್ಧವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಿಸಲಿದ್ದಾರೆ. ಮತದಾನ ಏಪ್ರಿಲ್​ 19ರಿಂದ ಆರಂಭಗೊಂಡಂತೆ ಜೂನ್​ 1ರ ತನಕ ಲೋಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಭಾರತದಲ್ಲಿ ಐಪಿಎಲ್​ ಪಂದ್ಯಗಳನ್ನು (IPL 2024) ಭಾರತದಲ್ಲಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಎಂದಿನಂತೆ ಯುಎಇಗೆ ವರ್ಗಾವಣೆಯಾಗಲಿದೆ.

ಏಪ್ರಿಲ್​​ 19ರಿಂದ ಚುನಾವಣೆ ಆರಂಭಗೊಂಡು ಏಳು ಹಂತದಲ್ಲಿ ನಡೆಯಲಿದೆ. ಜೂನ್​ 4ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಇಡೀ ಪಂದ್ಯಾವಳಿಯನ್ನು ಭಾರತದಲ್ಲಿ ಆಯೋಜಿಸುವುದು ಕಷ್ಟಕರವಾಗಿದೆ. ಹೀಗಾಗಿ ಪಂದ್ಯಾವಳಿಯಲ್ಲಿ ಮೂರನೇ ಬಾರಿಗೆ ಯುಎಇಗೆ ಸ್ಥಳಾಂತರಗೊಳ್ಳಲಿದೆ.

ವಿಶೇಷವೆಂದರೆ, 2014 ರ ಸಾರ್ವತ್ರಿಕ ಚುನಾವಣೆಗಳಿಂದಾಗಿ, ಬಿಸಿಸಿಐ ಐಪಿಎಲ್​​ನ ಮೊದಲಾರ್ಧವನ್ನು ಯುಎಇಯಲ್ಲಿ ಆಯೋಜಿಸಿತು. ನಂತರ 2020ರಲ್ಲಿ, ಭಾರತದಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ಇಡೀ ಪಂದ್ಯಾವಳಿಯನ್ನು ಅಲ್ಲೇ ಆಯೋಜಿಸಲಾಯಿತು. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲವಾದರೂ ಚುನಾವಣಾ ಆಯೋಗ ದಿನಾಂಕ ಪ್ರಕಟಗೊಳಿಸಿದ ಬಳಿಕ ಸ್ಥಳಾಂತರ ಖಾತರಿಯಾಗಿದೆ.

ವರದಿಗಳ ಪ್ರಕಾರ, ಐಪಿಎಲ್ ತಂಡಗಳು ತಮ್ಮ ಆಟಗಾರರಿಗೆ ತಮ್ಮ ಪಾಸ್​ಪೋರ್ಟ್​ಗಳನ್ನು ಸಲ್ಲಿಸುವಂತೆ ಕೇಳಿಕೊಂಡಿವೆ. ಮಾರ್ಚ್ 16 ರಂದು ಚುನಾವಣಾ ಆಯುಕ್ತರು ದಿನಾಂಕಗಳನ್ನು ಘೋಷಿಸುವ ಮೊದಲು ಬಿಸಿಸಿಐ ಎಲ್ಲಾ ಆಯ್ಕೆಗಳನ್ನು ತೆರೆದಿಟ್ಟಿದೆ. ಹೀಗಾಗಿ ಸ್ಥಳಾಂತರ ಬಹುತೇಕ ಖಚಿತಗೊಂಡಿದೆ.

ಭಾರತದ ಚುನಾವಣಾ ಆಯೋಗವು ಶನಿವಾರ ಮಧ್ಯಾಹ್ನ 3 ಗಂಟೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೀಗಾಗಿ ಐಪಿಎಲ್ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಬೇಕೇ ಎಂದು ಬಿಸಿಸಿಐ ನಿರ್ಧರಿಸಲಿದೆ. ಪ್ರಸ್ತುತ, ಐಪಿಎಲ್​​ ದ್ವಿತೀಯಾರ್ಧವನ್ನು ದುಬೈನಲ್ಲಿ ಆಯೋಜಿಸುವ ಸಾಧ್ಯತೆಯನ್ನು ಅನ್ವೇಷಿಸಲು ಬಿಸಿಸಿಐನ ಕೆಲವು ಉನ್ನತ ಅಧಿಕಾರಿಗಳು ದುಬೈಗೆ ತೆರಳಿದ್ದಾರೆ.

ಪೆಬ್ರವರಿ 22ರಂದು ಮೊದಲ ಪಟ್ಟಿ

ಐಪಿಎಲ್ ವೇಳಾಪಟ್ಟಿಯ ಮೊದಲಾರ್ಧವನ್ನು ಫೆಬ್ರವರಿ 22 ರಂದು ಘೋಷಿಸಲಾಯಿತು ಆದರೆ ಭಾರತದ ಚುನಾವಣಾ ಆಯೋಗವು ದಿನಾಂಕಗಳನ್ನು ಮೊದಲೇ ಘೋಷಿಸದ ಕಾರಣ ಬಿಸಿಸಿಐ ಮುಂದಿನ ಹೆಜ್ಜೆ ಇಡಲು ಸಾಧ್ಯವಾಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮಾರ್ಚ್ 22 ರಂದು ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ಮೊದಲ ಲೆಗ್ನ ಕೊನೆಯ ಪಂದ್ಯ ಏಪ್ರಿಲ್ 7 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ.

ಜೂನ್​ ಆರಂಭದಲ್ಲಿ ಟಿ20 ವಿಶ್ವ ಕಪ್​ ನಡೆಯಲಿದೆ. ಅದಕ್ಕಿಂತ ಮೊದಲು ಐಪಿಎಲ್​ ಮುಗಿಸಬೇಕಾಗಿದೆ. ಹೀಗಾಗಿ ಬಿಸಿಸಿಐ ಮೇ ತಿಂಗಳ ಮಧ್ಯದಲ್ಲಿ ಐಪಿಎಲ್ ಟೂರ್ನಿಯನ್ನು ವಿದೇಶಿ ನೆಲದಲ್ಲಿ ಮುಗಿಸಲಿದೆ.

Exit mobile version