ಬೆಂಗಳೂರು : ಮಹಿಳೆಯರ ಪ್ರೀಮಿಯರ್ ಲೀಗ್ನ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಶುಕ್ರವಾರ (ಫೆಬ್ರುವರಿ 23) ನಡೆಯಿತು. ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ (Shah rukh Khan). ಅದಕ್ಕಿಂತಲೂ ಹೆಚ್ಚಾಗಿ ಉದ್ಘಾಟನಾ ಕಾರ್ಯಕ್ರಮದ ವೇಳೆ ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
ಶಾರುಖ್ ಖಾನ್ ವೇದಿಕಗೆ ಆಗಮಿಸುತ್ತಲೇ ನಮಸ್ಕಾರ, ಸ್ವಾಗತ ಬೆಂಗಳೂರು ಎಂದು ಹೇಳಿದರು. ಈ ಮೂಲಕ ಅವರು ಕ್ರಿಕೆಟ್ ಅಭಿಮಾನಿಗಳು ಹಾಗೂ ಸ್ಥಳದಲ್ಲಿದ್ದ ಕನ್ನಡಿಗರ ಮೆಚ್ಚುಗೆ ಗಳಿಸಿದರು. ಶಾರುಖ್ ಖಾನ್ ವೇದಿಕೆಗೆ ಆಗಮಿಸುತ್ತಿದ್ದಂತೆ ಕನ್ನಡದಲ್ಲಿಯೇ ಮಾತನಾಡಿ ಅಚ್ಚರಿ ಮೂಡಿಸಿದರು.
ಶಾರುಖ್ ಖಾನ್ ತಮ್ಮ ವಿಭಿನ್ನ ಶೈಲಿ ಹಾಗೂ ಡಾನ್ಸ್ ಮೂಲಕ ನೆರೆದ ಜನರನ್ನು ರಂಜಿಸಿದರೆ, ನಂತರ 5 ತಂಡಗಳ ನಾಯಕಿಯರನ್ನು ಸ್ವಾಗತಿಸಿ, ಮಹಿಳಾ ಪ್ರೀಮಿಯರ್ ಲೀಗ್ 2024ರ 2ನೇ ಸೀಸನ್ಗೆ ಅದ್ಧೂರಿಯಾಗಿ ಚಾಲನೆ ಕೊಟ್ಟರು.
ಇದನ್ನೂ ಓದಿ : WPL 2024 : ಲಾಸ್ಟ್ ಬಾಲ್ ಸಿಕ್ಸರ್; ಚಾಂಪಿಯನ್ ಮುಂಬೈ ತಂಡಕ್ಕೆ ರೋಚಕ ಜಯ
ಪಂದ್ಯಕ್ಕೂ ಮುನ್ನ ಹಲವಾರು ಬಾಲಿವುಡ್ ಸ್ಟಾರ್ ಗಳು ಭರ್ಜರಿಯಾಗಿ ಕಾರ್ಯಕ್ರಮ ನೀಡಿದರು. ಈ ಪಂದ್ಯಾವಳಿಯ ಎರಡನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ನಟರಾದ ಶಾಹಿದ್ ಕಪೂರ್, ಟೈಗರ್ ಶ್ರಾಫ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಉಪಸ್ಥಿತರಿದ್ದರು. ಅಲ್ಲದೇ ವಿಶೆಷ ಅತಿಥಿಯಾಗಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸಹ ಉಪಸ್ಥಿತರಿದ್ದರು. ಮಹಿಳಾ ಪ್ರೀಮಿಯರ್ ಲೀಗ್ (WPL 2024) ಫೆಬ್ರವರಿ 23ರಿಂದ ಅಂದರೆ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬಯಿ ರೋಚಕ ಗೆಲುವು ಸಾಧಿಸಿದೆ.