Site icon Vistara News

CWG-2022 | ಚಿನ್ನದ ಪದಕ ಗೆದ್ದ ಭಾರತದ ಟೇಬಲ್‌ ಟೆನಿಸ್‌ ಮಿಶ್ರ ಜೋಡಿ

ಬರ್ಮಿಂಗ್ಹಮ್‌ : ಭಾರತದ ಮಿಶ್ರ ಟೇಬಲ್‌ ಟೆನಿಸ್‌ ಜೋಡಿ ಶರತ್‌ ಕಮಾಲ್‌ ಮತ್ತು ಶ್ರೀಜಾ ಅಕುಲಾ ಕಾಮನ್ವೆಲ್ತ್ ಗೇಮ್ಸ್‌ (CWG-2022) ಕ್ರೀಡಾಕೂಟದಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ಭಾರತದ ಮಿಶ್ರ ಡಬಲ್ಸ್‌ ಟಿಟಿ ತಂಡ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರ ಗೆಲ್ಲುವುದು ಇದೇ ಮೊದಲ ಬಾರಿಯಾಗಿದ್ದು, ಈ ನಿಟ್ಟಿನಲ್ಲೂ ಭಾರತ ಹೊಸ ದಾಖಲೆ ಸೃಷ್ಟಿಸಿದೆ.

ಭಾರತದ ಪ್ರತಿಭಾವಂತ ಜೋಡಿಯಾಗಿರುವ ಶರತ್‌ ಕಮಾಲ್ ಹಾಗೂ ಶ್ರೀಜಾ ಮಲೇಷ್ಯಾದ ಆಟಗಾರರ ವಿರುದ್ಧ ೩-೧ ಅಂತರದ ಗೆಲುವು ದಾಖಲಿಸುವ ಮೂಲಕ ಭಾರತಕ್ಕೆ ೧೮ನೇ ಸ್ವರ್ಣ ಪದಕ ತಂದಕೊಟ್ಟರು. ಮೊದಲ ಸೆಟ್‌ ೧೧-೪ ಅಂತರದಿಂದ ಗೆದ್ದ ಭಾರತದ ಜೋಡಿ ನಂತರದ ಸೆಟ್‌ನಲ್ಲಿ ೧೧-೯ರಿಂದ ಹಿನ್ನಡೆಗೆ ಒಳಗಾಯಿತು. ಆದರೆ, ಮುಂದಿನೆರಡು ಸೆಟ್‌ಗಳನ್ನು ೧೧-೫ ಹಾಗೂ ೧೧-೬ ಸೆಟ್‌ಗಳಿಂದ ವಶಪಡಿಸಿಕೊಂಡು ಬಂಗಾರದ ಪದಕ ತನ್ನದಾಗಿಸಿಕೊಂಡಿತು.

ಇವರ ಬಂಗಾರದ ಪದಕದೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೫೫ಕ್ಕ ಏರಿತು. ಇದರಲ್ಲಿ ೧೮ ಬಂಗಾರ, ೧೫ ಬೆಳ್ಳಿ, ೨೨ ಕಂಚಿನ ಪದಕಗಳು ಸೇರಿಕೊಂಡಿವೆ.

ಇದನ್ನೂ ಓದಿ | CWG- 2022 | ಮಹಿಳೆಯರ ಕ್ರಿಕೆಟ್‌ ತಂಡಕ್ಕೆ ಬೆಳ್ಳಿ ಪದಕ, ಆಸ್ಟ್ರೇಲಿಯಾ ವಿರುದ್ಧ ವೀರೋಚಿತ ಸೋಲು

Exit mobile version