Site icon Vistara News

Fertiliser stocks | ಸಬ್ಸಿಡಿ ಹೆಚ್ಚಳ ಮಾತುಕತೆ ಬೆನ್ನಲ್ಲೇ ರಸಗೊಬ್ಬರ ಕಂಪನಿಗಳ ಷೇರು ದರ ಜಿಗಿತ

fertilizer

Pile of sack in warehouse. Background and texture of sack stack in warehouse.

ಮುಂಬಯಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಸಗೊಬ್ಬರ ಕಂಪನಿಗಳ ಷೇರು ದರಗಳು ಏರುಗತಿಯಲ್ಲಿವೆ. ಮುಂಬರುವ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿ ಹೆಚ್ಚಳದ ಸಾಧ್ಯತೆ ಕುರಿತ ಮಾತುಕತೆಗಳ ಪರಿಣಾಮ, ರಸಗೊಬ್ಬರ ಕಂಪನಿಗಳ ಷೇರು ದರದಲ್ಲಿ ಏರುಗತಿ ಕಂಡು ಬಂದಿದೆ. ಇನ್ನೂ ಹಲವು ಕಾರಣಗಳಿ ಇವೆ. (Fertiliser stocks) 6 ತಿಂಗಳಿನಲ್ಲಿ ಪ್ರಮುಖ ರಸಗೊಬ್ಬರ ಕಂಪನಿಗಳ ಷೇರುಗಳು ಗಳಿಸಿರುವ ಲಾಭದ ಅಂಕಿ ಅಂಶಗಳು ಇಲ್ಲಿವೆ.

ಷೇರು ದರ ಹೆಚ್ಚಳ ದಾಖಲಿಸಿದ ಕಂಪನಿಗಳು
ಕಂಪನಿಕ್ಲೋಸಿಂಗ್‌ ದರ6 ತಿಂಗಳಿನಲ್ಲಿ ಗಳಿಕೆ %
ಎಫ್‌ಎಸಿಟಿ‌323.40233.75
ನ್ಯಾಶನಲ್‌ ಫರ್ಟಿಲೈಸರ್ಸ್77.0583.79
ಮದ್ರಾಸ್‌ ಫರ್ಟಿಲೈಸರ್ಸ್78.9577.62
ಏರಿಯಸ್‌ ಆಗ್ರೊ206.7574.69
ಎಸ್‌ಪಿಐಸಿ83.7071.2
ರಾಷ್ಟ್ರೀಯ ಕೆಮಿಕಲ್ಸ್133.8067.89
ಅಗ್ರಿ-ಟೆಕ್‌ (ಇಂಡಿಯಾ)110.6065.82
ದೀಪಕ್‌ ಫರ್ಟಿಲೈಸರ್ಸ್709.6516.73

ನ್ಯಾಶನಲ್‌ ಫರ್ಟಿಲೈಸರ್ಸ್‌, ರಾಷ್ಟ್ರೀಯ ಕೆಮಿಕಲ್ಸ್‌ & ಫರ್ಟಿಲೈಸರ್ಸ್‌, ಜಿಎಸ್‌ಎಫ್‌ಸಿ, ದೀಪಕ್‌ ಫರ್ಟಿಲೈಸರ್ಸ್‌ ಕಂಪನಿಯ ಷೇರು ದರ ಬುಧವಾರ 7-16% ವೃದ್ಧಿಸಿತ್ತು.

ಸಾರ್ವಜನಿಕ ವಲಯದ ಫರ್ಟಿಲೈಸರ್ಸ್‌ & ಕೆಮಿಕಲ್ಸ್‌ ಟ್ರಾವಾಂಕೂರ್‌ (FACT) ಷೇರು ದರ ಇತ್ತೀಚೆಗೆ 10% ಏರಿಕೆಯಾಗಿ ಅಪ್ಪರ್‌ ಪ್ರೈಸ್‌ ಸರ್ಕ್ಯೂಟ್‌ ಅನ್ನು ಮುಟ್ಟಿತ್ತು. ಎನ್‌ಎಫ್‌ಎಲ್‌ ಷೇರು ದರ ಕಳೆದ ಐದೂವರೆ ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಆರ್‌ಸಿಎಫ್‌ ಷೇರು ದರ ಕಳೆದ 15 ವರ್ಷಗಳಲ್ಲೇ ಎತ್ತರಕ್ಕೇರಿದೆ. ಮದ್ರಾಸ್‌ ಫರ್ಟಿಲೈಸರ್ಸ್‌ ಷೇರು ದರ ಕೂಡ ಇದರ ಸಾರ್ವತ್ರಿಕ ಏರುಗತಿಯ ಮಟ್ಟದಲ್ಲಿದೆ.

ಷೇರು ದರ ಜಿಗಿತಕ್ಕೆ ಕಾರಣವೇನು?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಕಂಪನಿಗಳ ಷೇರು ದರದಲ್ಲೂ ಹೆಚ್ಚಳವಾಗುವ ಸಾಧ್ಯತೆ ಇದೆ.

ಆಹಾರ ದರಗಳ ದಾಖಲೆಯ ಏರಿಕೆ, ಚೀನಾ ಮತ್ತು ರಷ್ಯಾದಿಂದ ಪೂರೈಕೆಯಲ್ಲಿ ವ್ಯತ್ಯಯ, ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮ ರಸಗೊಬ್ಬರ ಕಂಪನಿಯ ಷೇರುಗಳು ಈ ವರ್ಷ ಏರಿಕೆಯೊಂದಿಗೆ ಗಮನ ಸೆಳೆದಿತ್ತು.

ದೇಶೀಯ ರಸಗೊಬ್ಬರ ವಲಯ ಕೂಡ ರಸಗೊಬ್ಬರ ಆಮದನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ರಷ್ಯಾ ಎಲ್ಲ ರಸಗೊಬ್ಬರಗಳಿಗೆ 23.5% ರಫ್ತು ಸುಂಕವನ್ನು ವಿಧಿಸಿದ್ದು, 2023ರ ಜನವರಿ 1ರಿಂದ ಜಾರಿಯಾಗಲಿದೆ. ಈ ಎಲ್ಲ ಅಂಶಗಳ ಪರಿಣಾಮ ರಸಗೊಬ್ಬರ ಕಂಪನಿಗಳ ದರ ವೃದ್ಧಿಸಿದೆ.

Exit mobile version