Site icon Vistara News

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Shikhar Dhawan

ಬೆಂಗಳೂರು: ಎಡಗೈ ಬ್ಯಾಟರ್​ ಶಿಖರ್ ಧವನ್ (Shikhar Dhawan) ಭಾರತ ಕ್ರಿಕೆಟ್​ ತಂಡ ನೋಡಿದ ಅತ್ಯುತ್ತಮ ಆರಂಭಿಕ ಬ್ಯಾಟರ್​ಗಳಲ್ಲಿ ಒಬ್ಬರು. ಆದರೆ ಅವರ ವೈಯಕ್ತಿಕ ಜೀವನವು ಸ್ವಲ್ಪ ಮಟ್ಟಿಗೆ ಕ್ಲಿಷ್ಟಕರವಾಗಿದೆ. ಅವರ ಜೀವನ ಕತೆಯು ಪ್ರಕ್ಷುಬ್ಧತೆಯಿಂದ ತುಂಬಿಕೊಂಡಿದೆ. ಕಳೆದ ವರ್ಷ ಪರಸ್ಪರ ಒಪ್ಪಿಗೆಯೊಂದಿಗೆ ಪತ್ನಿ ಆಯೆಷಾ ಮುಖರ್ಜಿ ಅವರಿಂದ ಬೇರ್ಪಟ್ಟ ಬಳಿಕ ನಾನಾ ಘಟನೆಗಳು ಸಂಭವಿಸಿವೆ. 2023 ರ ಅಕ್ಟೋಬರ್​ನಲ್ಲಿ 11 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಲು ಪತ್ನಿ ಮತ್ತು ಅವರ ನಡುವಿನ ಹೊಂದಾಣಿಕೆ ಕೊರತೆಯೇ ಕಾರಣ. ಇದೇ ಹಿನ್ನೆಲೆಯಲ್ಲಿ ದೆಹಲಿಯ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನಕ್ಕೆ ಒಪ್ಪಿತ್ತು. ಆಗಸ್ಟ್ 8, 2020 ರಿಂದ ಧವನ್ ಮತ್ತು ಆಯೆಷಾ ಗಂಡ ಮತ್ತು ಹೆಂಡತಿಯಾಗಿ ಜತೆಗಿಲ್ಲ.

ಧವನ್ ತನ್ನ ಮಗ ಜೊರಾವರ್ ನಿಂದ ದೂರವಾಗಿರುವ ಬಗ್ಗೆ ಬೇಸರ ಹೊಂದಿದ್ದಾರೆ. ಪುತ್ರ ಆಸ್ಟ್ರೇಲಿಯಾದ ಪ್ರಜೆಯಾಗಿದ್ದು, ತನ್ನ ತಾಯಿಯೊಂದಿಗೆ ಮೆಲ್ಬೋರ್ನ್​ನಲ್ಲಿ ಇದ್ದಾನೆ. ಸಮಸ್ಯೆ ಹೊರತಾಗಿಯೂ ಧವನ್​ ಪುತ್ರನಿಗಾಗಿ ಹಂಬಲಿಸುತ್ತಿರುತ್ತಾರೆ. ಆತನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಆಗಾಗ ಹೇಳುತ್ತಿರುತ್ತಾರೆ. ಏತನ್ಮಧ್ಯೆ ಶಿಖರ್ ಧವನ್​ ಭಾರತ ಮಹಿಳಾ ತಂಡದ ಲೆಜೆಂಡ್​​ ಮಿಥಾಲಿ ರಾಜ್ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಮಿಥಾಲಿ ಜೊತೆ ಧವನ್ ಹೆಸರು ಲಿಂಕ್?

ಕೆಲವು ದಿನಗಳ ಹಿಂದೆ ಧವನ್ ಬಾಲಿವುಡ್ ನಟಿ ಹುಮಾ ಖುರೇಷಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದರು. ಆದರೆ ಅವರಲ್ಲಿ ಇಬ್ಬರೂ ಮಸಾಲಾ ಸುದ್ದಿಗೆ ಪ್ರತಿಕ್ರಿಯಿಸಿರಲಿಲ್ಲ. ಅದು ಹಾಗೆಯೇ ಅಂತ್ಯಗೊಂಡಿತು. ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರೊಂದಿಗೆ ಭಾರತೀಯ ಕ್ರಿಕೆಟಿಗನ ಹೆಸರು ತಳುಕು ಹಾಕಿಕೊಂಡಿದೆ.

ಮಿಥಾಲಿ ಇನ್ನೂ ಅವಿವಾಹಿತರಾಗಿದ್ದು, ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ವೀಕ್ಷಕವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಕೂಡ ಆಗಿದ್ದಾರೆ. ಏತನ್ಮಧ್ಯೆ, ಧವನ್ ಇತ್ತೀಚೆಗೆ ಟಾಕ್ ಶೋವೊಂದರಲ್ಲಿ ಮಾತನಾಡುವಾಗ ಮಿಥಾಲಿ ಅವರೊಂದಿಗೆ ಡೇಟಿಂಗ್ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ.

ಇದನ್ನೂ ಓದಿ: Natasa Stankovic : ಡೈವೋರ್ಸ್​ ಗಾಸಿಪ್​ ನಡುವೆಯೇ ಬೇರೊಬ್ಬರ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ ಪತ್ನಿ

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಜಿಯೋ ಸಿನೆಮಾದ ‘ಧವನ್ ಕರೆಂಗೆ’ ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ್ದರು. ಈ ವೇಳೆ ಅವರು ಮಿಥಾಲಿ ಅವರನ್ನು ಮದುವೆಯಾಗುವ ವದಂತಿ ಬಗ್ಗೆ ಮಾತನಾಡಿದ್ದಾರೆ. ಇದೊಂದು ಅತ್ಯಂತ ಶಾಕಿಂಗ್ ಘಟನೆ ಎಂದಿದ್ದಾರೆ. ನಿಮಗಾದ ಶಾಕಿಂಗ್​ ನ್ಯೂಸ್​ ಯಾವುದು ಎಂದು ಕೇಳಿದ್ದಕ್ಕೆ, , “ನಾನು ಮಿಥಾಲಿ ರಾಜ್ ಅವರನ್ನು ಮದುವೆಯಾಗುತ್ತಿದ್ದೇನೆ ಎಂಬ ವಿಷಯ ಎಂದ ಹೇಳಿದ್ದಾರೆ.

ರಿಷಭ್ ಪಂತ್​ಗೆ ಶ್ಲಾಘನೆ

15 ತಿಂಗಳ ಸವಾಲಿನ ಅವಧಿಯ ನಂತರ ಕ್ರಿಕೆಟ್​ಗೆ ಮರಳಿದ್ದ ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ಧವನ್ ಶ್ಲಾಘಿಸಿದರು. ಡಿಸೆಂಬರ್ 2022 ರಲ್ಲಿ, ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಪಂತ್ ಗಾಯಗೊಂಡಿದ್ದರು. ಈ ಘಟನೆಯ ನಂತರ, ಪಂತ್ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ನಂತರ ಎನ್​​ಸಿಎನಲ್ಲಿ ಪುನಶ್ಚೇತನ ಮಾಡಿದ್ದಾರೆ. ಅವರ ಆತ್ಮಸ್ಥೈರ್ಯವನ್ನು ಧವನ್ ಹೊಗಳಿದ್ದಾರೆ.

Exit mobile version