Site icon Vistara News

Ind vs Eng : ಬೌಲ್ಡ್​​ ಆದ ಬಳಿಕ ಡಿಆರ್​ಎಸ್​​ಗೆ ಮನವಿ ಮಾಡಿದ ಬಶೀರ್​; ಬಿದ್ದು ಬಿದ್ದು ನಕ್ಕ ರೂಟ್​!

Shoib Malik

ಧರ್ಮಶಾಲಾ : ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 09) ನಡೆದ ಇಂಗ್ಲೆಂಡ್ ವಿರುದ್ಧದ (Ind vs Eng) 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 64 ರನ್ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 477 ರನ್ಗಳಿಗೆ ಆಲ್​ಔಟ್​ ಆಯಿತು. ಪಂದ್ಯವನ್ನು ಇನ್ನಿಂಗ್ಸ್ ಮತ್ತು 64 ರನ್​ಗಳಿಂದ ಗೆದ್ದಿತ್ತು.

ಇಂಗ್ಲೆಂಡ್​​ ತಂಡದ ಎರಡನೇ ಇನ್ನಿಂಗ್ಸ್​​ನಲ್ಲಿ 3ನೇ ದಿನದಂದು ಸ್ಪಿನ್ನರ್​​ ಶೋಯೆಬ್ ಬಶೀರ್ ‘ಕ್ಲೀನ್ ಬೌಲ್ಡ್​ ಆದರು. ಆದರೆ, ಅವರು ಸುಮ್ಮನೆ ಇರದೇ ಡಿಆರ್​​ಎಸ್​ ಮನವಿ ಮಾಡುವ ಮೂಲಕ ನಗೆಪಾಟಲಿಗೀಡಾದರು. ಜಡೇಜಾ ಎಸೆದ ಎಡನೇ ಇನಿಂಗ್ಸ್​ನ 46ನೇ ಓವರ್​ನಲ್ಲಿ ಈ ಘಟನೆ ಸಂಭವಿಸಿತು.

20 ವರ್ಷದ ಸ್ಪಿನ್ನರ್​ ತಾನು ತನ್ನ ಸ್ಟಂಪ್​​ಗಳಿಗೆ ಚೆಂಡು ಬಿದ್ದಿರುವ ವಿಷಯವೇ ಗೊತ್ತಿರಲಿಲ್ಲ. ಎಲ್​ಬಿಡಬ್ಲ್ಯು ಔಟ್​ ನೀಡಿದ್ದಾರೆ ಎಂಬ ಕಾರಣಕ್ಕೆ ಡಿಆರ್​ಎಸ್​ಗೆ ಮನವಿ ಮಾಡಿದರು. ವಿಷಯ ತಿಳಿದ ಜೋ ರೂಟ್​ ತಲೆ ಮೇಲೆ ಕೈ ಇಟ್ಟು ಜೋರಾಗಿ ನಕ್ಕರು.

ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

ಧರ್ಮಶಾಲಾ: ಇಂಗ್ಲೆಂಡ್(IND vs ENG)​ ವಿರುದ್ಧದ ಅಂತಿಮ ಟೆಸ್ಟ್(India vs England 5th Test)​ ಪಂದ್ಯದಲ್ಲಿ ಆತಿಥೇಯ ಭಾರತ ಇನಿಂಗ್ಸ್​ ಮತ್ತು 64 ರನ್​ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 4-1 ರೊಂದಿಗೆ ಮುಕ್ತಾಯಗೊಳಿಸಿದೆ. ಗುರುವಾರ ಆರಂಭಗೊಂಡ ಈ ಟೆಸ್ಟ್​ ಪಂದ್ಯ ಕೇವಲ ಮೂರು ದಿನಕ್ಕೆ ಅಂತ್ಯಕಂಡಿತು.

ದಾಖಲೆ ಬರೆದ ಭಾರತ

ಭಾರತ ಈ ಗೆಲುವಿನ ಮೂಲಕ 112 ವರ್ಷದಲ್ಲೇ ಮೊದಲ ಪಂದ್ಯದ ಸೋಲಿನ ಬಳಿಕ 5 ಪಂದ್ಯದ ಸರಣಿಯಲ್ಲಿ 4-1 ರಿಂದ ಗೆದ್ದ ಏಕೈಕ ತಂಡ ಎಂಬ ಇತಿಹಾಸ ನಿರ್ಮಿಸಿತು. 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯ ಸೋತು ಬಳಿಕ ಸರಣಿಯನ್ನು 4-1ರಿಂದ ಗೆದ್ದಿದ್ದು ಈ ವರೆಗೆ ಕೇವಲ 2 ತಂಡಗಳು ಮಾತ್ರ. 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ, 1912ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಈ ಸಾಧನೆ ಮಾಡಿತ್ತು. ಇದೀಗ ಈ ಸಾಧನೆ ಕೂಡ ಈ ಸಾಧನೆ ಮಾಡಿದೆ.

ಇದನ್ನೂ ಓದಿ : Babar Azam: ಕೊಹ್ಲಿಯ ಸಂಭ್ರಮಾಚರಣೆಯನ್ನು ಕಾಪಿ ಮಾಡಿದ ಬಾಬರ್​ ಅಜಂ

ಮೂರನೇ ದಿನವಾದ ಶನಿವಾರ 8 ವಿಕೆಟ್​ಗೆ 473 ರನ್​ ಗಳಿಸಿದ್ದಲ್ಲಿಂದ ಬ್ಯಾಟಿಂಗ್​ ಮುಂದುವರಿಸಿ ಭಾರತ ಕೇವಲ ನಾಲ್ಕು ರನ್​ ಗಳಿಸಲಷ್ಟೇ ಶಕ್ತವಾಗಿ 477ರನ್​ಗೆ ಆಲೌಟ್​ ಆಯಿತು. 259 ರನ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್​ಗೆ 100ನೇ ಟೆಸ್ಟ್​ ಆಡಿದ ಆರ್​.ಅಶ್ವಿನ್​ ಅವಳಿ ಆಘಾತವಿಕ್ಕಿದರು. ಜಾಕ್​ ಕ್ರಾಲಿ ಅವರನ್ನು ಶೂನ್ಯಕ್ಕೆ ಮತ್ತು ಬೆನ್​ ಡಕೆಟ್​ ಅವರನ್ನು ಕೇವಲ 2 ರನ್​ಗೆ ಔಟ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಆ ಬಳಿಕ ಕುಲ್​ದೀಪ್​ ಯಾದವ್​ ಕೂಡ ತಮ್ಮ ಸ್ಪಿನ್ ಜಾದು ಮೂಲಕ ವಿಕೆಟ್​ ಕಿತ್ತು ಆಂಗ್ಲರನ್ನು ಹಡೆಮುರಿ ಕಟ್ಟಿದರು.

ರೂಟ್​ ಏಕಾಂಗಿ ಹೋರಾಟ

ಒಂದೆಡೆ ಸಹ ಆಟಗಾರರ ವಿಕೆಟ್​ ಬಡಬಡನೆ ಬೀಳುತ್ತಿದ್ದರೂ ಮತ್ತೊಂದು ಕಡೆ ಕ್ರೀಸ್​ನಲ್ಲಿ ಬೇರೂರಿ ನಿಂತ ಜೋ ರೂಟ್​ ಏಕಾಂಗಿ ಹೋರಾಟದ ಮೂಲಕ ಕೆಲ ಕಾಲ ಭಾರತೀಯ ಬೌಲರ್​ಗಳನ್ನು ಕಾಡಿದರು. ಜತೆಗೆ ತಂಡವನ್ನು ಪಾರು ಮಾಡುವ ಪ್ರಯತ್ನ ಮುಂದುವರಿಸಿದರು. ಆದರೆ, 84 ರನ್​ ಗಳಿಸಿದ ವೇಳೆ ಇವರ ವಿಕೆಟ್​ ಕೂಡ ಪತನಗೊಂಡಿತು. ಈ ವಿಕೆಟ್​ ಬೀಳುತ್ತಿದ್ದಂತೆ ಇಂಗ್ಲೆಂಡ್​ ಇನಿಂಗ್ಸ್​ ಕೂಡ ಮುಕ್ತಾಯಕಂಡಿತು. ಆರ್​.ಅಶ್ವಿನ್​ ದ್ವಿತೀಯ ಇನಿಂಗ್ಸ್​ನಲ್ಲಿ 5 ವಿಕೆಟ್​ ಕಿತ್ತು ತಮ್ಮ 100ನೇ ಟೆಸ್ಟ್​ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಕುಲ್​ದೀಪ್​ ಮತ್ತು ಜಸ್​ಪ್ರೀತ್​ ಬುಮ್ರಾ ತಲಾ 2 ವಿಕೆಟ್​ ಕಿತ್ತರು. ಅಂತಿಮವಾಗಿ ಇಂಗ್ಲೆಂಡ್​ 195 ರನ್​ಗೆ ಆಲೌಟ್​ ಆಯಿತು.

Exit mobile version