Site icon Vistara News

Ind vs Eng : ಎರಡನೇ ಟೆಸ್ಟ್​ಗೆ ಸಿರಾಜ್​ ಹೊರಗಿಡಿ, ಮಾಜಿ ಆಟಗಾರನ ಸಲಹೆ

Mohammed Siraj

ನವದೆಹಲಿ: ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ (Ind vs Eng) ಪಂದ್ಯಕ್ಕೆ ಮುಂಚಿತವಾಗಿ, ಭಾರತದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಭಾರತೀಯ ತಂಡಕ್ಕೆ ಕೆಲವು ಕಾರ್ಯತಂತ್ರದ ಸಲಹೆಗಳನ್ನು ನೀಡಿದ್ದಾರೆ. ಆರಂಭಿಕ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಸಾಮರ್ಥ್ಯಕ್ಕಿಂತ ಕನಿಷ್ಠ ಪ್ರದರ್ಶನ ನೀಡಿದ್ದರು. ವೇಗದ ಬೌಲರ್ ಒಂದೇ ಒಂದು ವಿಕೆಟ್ ಪಡೆಯಲು ವಿಫಲರಾಗಿದ್ದರು. ಹೀಗಾಗಿ ಸಿರಾಜ್ ಕೈಬಿಟ್ಟು ತಂಡದ ಸಂಯೋಜನೆಗೆ ಹೆಚ್ಚುವರಿ ಬ್ಯಾಟರ್​ ತೆಗೆದುಕೊಳ್ಳುವಂತೆ ಮಾಜಿ ಆಟಗಾರ ಸಲಹೆ ನೀಡಿದ್ದಾರೆ.

ಹೈದರಾಬಾದ್ ಸಿರಾಜ್ ಗೆ ತವರು. ಅಲ್ಲಿ ಅವರಿಂದ ಒಟ್ಟು 11 ಓವರ್​ಗಳನ್ನು ಹಾಕಿಸಲಾಯಿತು. ಈ ಓವರ್​ಗಳಲ್ಲಿ ಅವರು 50 ರನ್ ಬಿಟ್ಟುಕೊಟ್ಟಿದ್ದರು. ಹೆಚ್ಚು ರನ್ ಸೋರಿಕೆ ಮಾಡುವ ಜತೆಗೆ ಪರಿಣಾಮಕಾರಿ ಬೌಲಿಂಗ್ ನಡೆಸದ ಅವರನ್ನು ಬೆಂಚು ಕಾಯಿಸಿ ಬೇರೆ ಬ್ಯಾಟರ್​ಗಳಿಗೆ ಅವಕಾಶ ಕೊಡುವುದು ಉತ್ತಮ ಎಂಬುದೇ ಪಾರ್ಥಿವ್ ಪಟೇಲ್ ಅವರ ಅಭಿಪ್ರಾಯವಾಗಿದೆ. ಗಾಯದಿಂದಾಗಿ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಅವರ ಅನುಪಸ್ಥಿತಿಯು ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಮುಂದಿನ ಟೆಸ್ಟ್​ಗೆ ತಯಾರಿ ನಡೆಸುತ್ತಿರುವ ಭಾರತ ತಂಡಕ್ಕೆ ಆಯ್ಕೆ ಸವಾಲನ್ನು ಒಡ್ಡಿದೆ.

ಮೂವರು ಸ್ಪಿನ್ನರ್​ಗಳು ಸಾಕು

ಮುಂದಿನ ಪಂದ್ಯಕ್ಕೆ ಮೂವರು ಸ್ಪಿನ್ನರ್​ಗಳು ಸಾಕು ಎಂದು ಪಟೇಲ್ ವಾದಿಸಿದ್ದಾಎ. ಹಿಂದಿನ ಟೆಸ್ಟ್​ನಲ್ಲಿ ಸಿರಾಜ್ ಅವರ ಸೀಮಿತ ಬಳಕೆಯನ್ನು ಗಮನಸೆಳೆದರು. ಕುಲದೀಪ್ ಯಾದವ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಅವರು ಪ್ರಶ್ನಿಸಿದರು. ಇದು ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಪೂರಕವಾಗಿದೆ ಎಂದಿದ್ದಾರೆ.

ಮೂವರು ಸ್ಪಿನ್ನರ್​ಗಳು ಸಾಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ನಾನು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದೇನೆ. ಟೆಸ್ಟ್ ನಾದ್ಯಂತ ನೀವು ಸಿರಾಜ್ ಅವರನ್ನು ಕೇವಲ ಆರು ಅಥವಾ ಏಳು ಓವರ್ ಗಳಿಗೆ ಬಳಸಿದ್ದೀರಿ. ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಸಾಮರ್ಥ್ಯದಿಂದಾಗಿ ಕುಲದೀಪ್ ಯಾದವ್ ಅವರಿಗಿಂತ ಮುಂದಿದ್ದಾರೆ ಎಂದು ಟೆಸ್ಟ್ ಗೆ ಮೊದಲು ರೋಹಿತ್ ಶರ್ಮಾ ಹೇಳಿದ್ದಾರೆ. ನೀವು ಸಿರಾಜ್ ಅವರನ್ನು ಹೆಚ್ಚು ವರಿ ಬ್ಯಾಟರ್​ ಆಯ್ಕೆ ಮಾಡುವುದು ಉತ್ತಮ” ಎಂದು ಪಟೇಲ್ ಜಿಯೋ ಸಿನೆಮಾದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : IND vs ENG: 3ನೇ ಟೆಸ್ಟ್​ಗೆ​ ನಾಳೆ ಭಾರತ ತಂಡ ಪ್ರಕಟ ಸಾಧ್ಯತೆ; ಕೊಹ್ಲಿ ಆಗಮನ ಅನುಮಾನ!

ಪಟೇಲ್ ಅವರ ಸಲಹೆಯ ತಂಡದ ಸಂಪನ್ಮೂಲಗಳ ಬಳಕೆಯ ಕಡೆಗೂ ಹರಿದಿದೆ. ಸಿರಾಜ್ ಅವರಂತಹ ಬೌಲರ್ ಅನ್ನು ಮಿತವಾಗಿ ಬಳಸಬೇಕಾದರೆ ತಂಡಕ್ಕೆ ಉತ್ತಮ ಬ್ಯಾಟರ್​​ ಆಯ್ಕೆ ಮಾಡುವುದು ತಂಡ ಪಾಲಿಗೆ ಹೆಚ್ಚು ಪ್ರಯೋಜನ ನೀಡಬಹುದು ಎಂದು ಸಲಹೆ ನೀಡಿದ್ದಾರೆ. ಅವರ ಪ್ರಕಾರ, ಈ ಹೊಂದಾಣಿಕೆಯು ಬ್ಯಾಟಿಂಗ್ ಕ್ರಮಾಂಕವನ್ನು ಬಲಿಷ್ಠಗೊಳಿಸುವ ಜತೆಗೆ ಅಶ್ವಿನ್, ಅಕ್ಷರ್ ಮತ್ತು ಕುಲದೀಪ್ ಅವರಂತಹ ಸಮತೋಲಿತ ಬೌಲಿಂಗ್ ದಾಳಿಯನ್ನು ಹೊಂದಬಹುದು ಎಂದು ಹೇಳಿದ್ದಾರೆ.

ಪ್ರಮುಖ ಆಟಗಾರರಿಗೆ ಗಾಯಗಳಾದ ಹಿನ್ನೆಲೆಯಲ್ಲಿ ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಫೆಬ್ರವರಿ 2ರ ಶುಕ್ರವಾರದಿಂದ ವಿಶಾಖಪಟ್ಟಣದಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್​​ಗೆ ಮುಂಚಿತವಾಗಿ ಭಾರತವು ಪರಿಗಣಿಸಬೇಕಾದ ಹಲವು ಆಯ್ಕೆಗಳಿವೆ.

Exit mobile version