Site icon Vistara News

ICC T20 ranking : ಐಸಿಸಿ ರ್ಯಾಂಕಿಂಗ್​ನಲ್ಲಿ ಸ್ಮೃತಿ ಮಂಧಾನಾ, ರೇಣುಕಾಗೆ ಭರ್ಜರಿ ಲಾಭ

ICC T20 ranking

ಬೆಂಗಳೂರು: ಮಂಗಳವಾರ ಬಿಡುಗಡೆಯಾದ ಐಸಿಸಿ ಟಿ 20 ಐ ಶ್ರೇಯಾಂಕದ (ICC T20 ranking) ಪ್ರಕಾರ ವೇಗಿ ರೇಣುಕಾ ಸಿಂಗ್ ಠಾಕೂರ್ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ವೇಳೆ ಭಾರತದ ಬ್ಯಾಟರ್ಸ್ಮೃ ತಿ ಮಂದಾನ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಮಹಿಳಾ ಟಿ 20 ಏಷ್ಯಾ ಕಪ್ ಫೈನಲ್​​ನಲ್ಲಿ ಶ್ರೀಲಂಕಾ ವಿರುದ್ಧ ನಿರ್ಣಾಯಕ 60 ರನ್ ಗಳಿಸಿದ ನಂತರ ಭಾರತದ ಉಪನಾಯಕಿ ಮತ್ತು ಆರಂಭಿಕ ಆಟಗಾರ್ತಿ ಮಂದಾನ 743 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಈ ಟೂರ್ನಿಯಲ್ಲಿ ಏಳು ವಿಕೆಟ್ ಪಡೆದ ಬೌಲರ್ ರೇಣುಕಾ ಈಗ 722 ರೇಟಿಂಗ್ ಅಂಕಗಳೊಂದಿಗೆ ಬೌಲರ್​ಗಳ ಪೈಕಿ ಐದನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್​​ನ ಸೋಫಿ ಎಕ್ಲೆಸ್ಟೋನ್ (772) ಮತ್ತು ಸಾರಾ ಗ್ಲೆನ್ (760) ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ದೀಪ್ತಿ ಶರ್ಮಾ (755) ಮೂರನೇ ಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಸಾದಿಯಾ ಇಕ್ಬಾಲ್ (743) ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಷ್ಯಾಕಪ್ನಲ್ಲಿ 6 ವಿಕೆಟ್ ಪಡೆದ ರಾಧಾ ಯಾದವ್ 5ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಏಳು ಸ್ಥಾನಗಳನ್ನು ಏರಿದ ನಂತರ ಅವರು 13 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದ ಬೆತ್ ಮೂನಿ (769) ಮತ್ತು ತಹ್ಲಿಯಾ ಮೆಕ್​ಗ್ರಾತ್​ (762) ಅಗ್ರ ಎರಡು ವೆಸ್ಟ್ ಇಂಡೀಸ್​​ನ ಹೇಲಿ ಮ್ಯಾಥ್ಯೂಸ್ (746) ಮೂರನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಆರನೇ ಸ್ಥಾನದಲ್ಲಿದ್ದಾರೆ.

ಏಷ್ಯಾಕಪ್ ಫೈನಲ್​​ನಲ್ಲಿ ಭಾರತ ವಿರುದ್ಧ 61 ರನ್ ಗಳಿಸಿದ ಶ್ರೀಲಂಕಾದ ನಾಯಕಿ ಚಾಮರಿ ಅಟ್ಟಪಟ್ಟು ಮೂರು ಸ್ಥಾನ ಮೇಲಕ್ಕೇರಿ 705 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Asian Cricket Council : ಜಯ್​ ಶಾ ಹೊಂದಿರುವ ಉನ್ನತ ಸ್ಥಾನದ ಮೇಲೆ ಕಣ್ನಿಟ್ಟಿರುವ ಪಾಕಿಸ್ತಾನ ಮೊಹ್ಸಿನ್ ನಖ್ವಿ

“ಸ್ಪೂರ್ತಿದಾಯಕ ಆಟಗಾರ್ತಿ ಚಾಮರಿ ಅವರು ಏಷ್ಯಾ ಕಪ್​ನಲ್ಲಿ 100 ರ ಸರಾಸರಿಯಲ್ಲಿ 304 ರನ್​ಗಳನ್ನು ಒಳಗೊಂಡ ಪಂದ್ಯಾವಳಿಯ ವೀರೋಚಿತ ಪ್ರದರ್ಶನ ನೀಡಿದ್ದರು. ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಅನ್ನು ಹೊಂದುವ ಮೂಲಕ ಅದೇ ಪಟ್ಟಿಯಲ್ಲಿ ಮೂರು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ.

ಏಷ್ಯಾಕಪ್ ಮುಕ್ತಾಯದ ನಂತರ, ಪಾಕಿಸ್ತಾನದ ಮುನೀಬಾ ಅಲಿ ಟಿ 20 ಐ ಬ್ಯಾಟರ್​ಗಳ ಪಟ್ಟಿಯಲ್ಲಿ ಆರು ಸ್ಥಾನ ಮೇಲಕ್ಕೇರಿ 35 ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ನಾಯಕ ನಿಗರ್ ಸುಲ್ತಾನಾ ಮೂರು ಸ್ಥಾನ ಮೇಲಕ್ಕೇರಿ 14 ನೇ ಸ್ಥಾನದಲ್ಲಿದ್ದಾರೆ. ಫೈನಲ್​​ನಲ್ಲಿ ಅಜೇಯ 69 ರನ್ ಗಳಿಸಿದ ಶ್ರೀಲಂಕಾದ ಹರ್ಷಿತಾ ಸಮರವಿಕ್ರಮ ಗರಿಷ್ಠ ಸ್ಕೋರ್ ಗಳಿಸಿದ ನಂತರ 20 ನೇ ಸ್ಥಾನ ತಲುಪಿದ್ದಾರೆ.

Exit mobile version