ಬೆಂಗಳೂರು: ವಿಸ್ತಾರ ನ್ಯೂಸ್ ಚಾನೆಲ್‌ನ ಎಲ್ಲ ಚಟುವಟಿಕೆಗಳಿಗೆ ಶ್ರೀಕೃಷ್ಣನ ಅನುಗ್ರಹ ಇರಲಿ. ಇವತ್ತು ಮಾಧ್ಯಮ ಸಂಸ್ಥೆಗಳು ಕೇವಲ ಸುದ್ದಿಗಷ್ಟೇ ಸೀಮಿತವಲ್ಲ, ಸಮಾಜದ ಎಲ್ಲ ಆಗುಹೋಗುಗಳನ್ನು ತಿಳಿಸುವ ಜತೆಗೆ ಸಾಮಾಜಿಕ ವಿಕಾಸದ ಹೊಣೆಗಾರಿಕೆಯೂ ಇದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು (Vistara news launch ) ಹೇಳಿದರು.
ಕೋಣೆಯನ್ನು ಮನೆಯನ್ನಾಗಿಸಿದವರು ಈಗ ವಿಶ್ವವನ್ನೇ ಕೋಣೆಯನ್ನಾಗಿಸಿದ್ದಾರೆ. ಅವರಿಗೆ ಸಂಸ್ಥೆಯ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ ಧರ್ಮೇಶ್, ನಿರ್ದೇಶಕ ಶ್ರೀನಿವಾಸ್ ಹೆಬ್ಬಾರ್ ಅವರ ಬೆಂಬಲವಿದೆ. ಸಮಾಜವನ್ನು ಕಟ್ಟುವ ಮತ್ತು ಒಡೆಯುವ ಸಾಮರ್ಥ್ಯ ಸುದ್ದಿ ಮಾಧ್ಯಮಗಳಿಗೆ ಇದೆ. ಆದರೆ ಸಮಾಜವನ್ನು ಕಟ್ಟುವ ದೊಡ್ಡ ಹೊಣೆಗಾರಿಕೆ ಮಾಧ್ಯಮಗಳದ್ದಾಗಿದೆ. ಸಮಾಜವನ್ನು ಕಟ್ಟುವ ಹೊಣೆ ಹೊತ್ತಿರುವ ವಿಸ್ತಾರ ನ್ಯೂಸ್ ಚಾನೆಲ್‌ಗೆ ಕೃಷ್ಣನ ಅನುಗ್ರಹ ಇರಲಿ ಎಂದು ಅವರು ಆಶೀರ್ವಚನ ನೀಡಿ ಶುಭ ಹಾರೈಸಿದರು.