Site icon Vistara News

Euro 2024 : ಫ್ರಾನ್ಸ್ ತಂಡವನ್ನು ಸೋಲಿಸಿ ಯೂರೊ ಕಪ್​​ ಫೈನಲ್ ತಲುಪಿದ ಸ್ಪೇನ್​

Euro 2024

ಬೆಂಗಳೂರು: ಮ್ಯೂನಿಚ್​​ನಲ್ಲಿ ಮಂಗಳವಾರ ನಡೆದ ಯೂರೊ ಕಪ್ (Euro 2024 ) ಸೆಮಿಫೈನಲ್​ ಪಂದ್ಯದಲ್ಲಿ ಸ್ಪೇನ್ ತಂಡ ಫ್ರಾನ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಫೈನಲ್​ಗೆ ಪ್ರವೇಶಿಸಿದೆ. ಮೂರು ಬಾರಿಯ ಚಾಂಪಿಯನ್ ಸ್ಪೇನ್ ಯುರೋ ಕಪ್​ ಟೂರ್ನಿಯಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಾಖಲೆಯ ನಾಲ್ಕನೇ ಟ್ರೋಫಿಯನ್ನು ಗೆಲ್ಲುವುದಕ್ಕಾಗಿ ಫೈನಲ್ ತಲುಪಿದೆ. ಇದೇ ವೇಳೆ ಯುರೋಪಿಯನ್ ಚಾಂಪಿಯನ್​ಷಿಪ್​ ಇತಿಹಾಸದಲ್ಲಿ ಸ್ಪೇನ್​​ ಲ್ಯಾಮಿನ್ ಯಮಲ್ ಅತ್ಯಂತ ಕಿರಿಯ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾನುವಾರ ಫೈನಲ್​​ನಲ್ಲಿ ಇಂಗ್ಲೆಂಡ್ ಅಥವಾ ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ.

16 ವರ್ಷ 362 ದಿನಗಳ ವಯಸ್ಸಿನ ಯಮಲ್ ಅದ್ಭುತವಾಗಿ ಆಡಿದರು. ಸ್ಪೇನ್ ಈ ಗೆಲುವಿನೊಂದಿಗೆ ಪೆನಾಲ್ಟಿ ಅಗತ್ಯವಿಲ್ಲದೆ ಯೂರೋಸ್​​ನಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪ್ರಮುಖ ಟೂರ್ನಮೆಂಟ್ ಸೆಮಿಫೈನಲ್​​ನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ ಎಂಬ ಪೀಲೆ ಅವರ ದಾಖಲೆಯನ್ನು ಯಮಲ್ ಮುರಿದರು. ಕಳೆದ ನಾಲ್ಕು ಪ್ರಮುಖ ಪಂದ್ಯಾವಳಿಗಳಲ್ಲಿ ಮೂರರಲ್ಲಿ ಫೈನಲ್ ತಲುಪಿದ ಫ್ರಾನ್ಸ್ ಈ ಭಾರಿ ವಿಫಲಗೊಂಡಿದೆ.

ಸ್ಪೇನ್ ಪರ ಲಮಿನ್ ಯಮಾಲ್​ 21ನೇ ನಿಮಷಕ್ಕೆ ಗೋಲ್ ಬಾರಿಸಿದರೆ ಡೇನಿ ಒಲ್ಮೊ 25ನೇ ನಿಮಿಷಕ್ಕೆ ಗೋಲ್​ ಹೊಡೆದರೆ, ಫ್ರಾನ್ಸ್​ ಪರ ರಂಡಾಲ್​ ಕೊಲೊ ಮುಹಾನಿ 8ನೇ ನಿಮಿಷಕ್ಕೆ ಗೋಲ್ ಬಾರಿಸಿದರು. ಪಂದ್ಯದ ಆರಂಭದಲ್ಲಿ ಫ್ರಾನ್ಸ್ ತಂಡ ಮುನ್ನಡೆಯನ್ನು ಸಾಧಿಸಿತ್ತು. ಆದರೆ 20ನೇ ನಿಮಿಷದ ಬಳಿಕ ಏಕಾಏಕಿ ತಿರುಗೇಟು ನೀಡಿದ ಸ್ಪೇನ್​ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: IND vs SA : ಭಾರತ ಮಹಿಳೆಯರ ತಂಡಕ್ಕೆ ಭರ್ಜರಿ 10 ವಿಕೆಟ್​ ಜಯ, ಟಿ20 ಸರಣಿ ಸಮಬಲ

ಪಂದ್ಯದಲ್ಲಿ 6 ಹೊಡೆಗಳ ಅವಕಾಶ ಪಡೆದರೆ ಫ್ರಾನ್ಸ್ 9 ಬಾರಿ ಅವಕಾಶ ಪಡೆದುಕೊಂಡರು. ಆದರೆ, ಸ್ಪೇನ್ ತಂಡ ಶೇಕಡಾ 59ರಷ್ಟು ಚೆಂಡಿನ ಮೇಲೆ ಹಿಡಿತ ಸಾಧಿಸಿಕೊಂಡಿತು. ಅಲ್ಲದೆ ಒಟ್ಟು 500 ಪಾಸ್​ಗಳನ್ನು ಮಾಡುವ ಮೂಲಕ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಹೊಂದಿತು.

ನೂತನ ದಾಖಲೆ

21ನೇ ನಿಮಿಷದಲ್ಲಿ ಸ್ಪೇನ್ ಪರ ಲ್ಯಾಮಿನ್ ಯಮಲ್ ಗೋಲು ಬಾರಿಸಿ 16ರ ಹರೆಯದ ಅತ್ಯಂತ ಕಿರಿಯ ಗೋಲ್ ಸ್ಕೋರರ್ ಎನಿಸಿಕೊಂಡರು. ಯಮಲ್ ಕೇವಲ 16 ವರ್ಷ 362 ದಿನಗಳ ವಯಸ್ಸಿನಲ್ಲಿ ಈ ದಾಖಲೆಯನ್ನು ಮುರಿದರು. ಈ ಹಿಂದೆ 2004ರಲ್ಲಿ ಸ್ವಿಟ್ಜರ್ಲೆಂಡ್ನ ಜೋಹಾನ್ ವೊನ್ಲಾಥೆನ್ 18 ವರ್ಷ 141 ದಿನ ವಯಸ್ಸಿನಲ್ಲಿ ದಾಖಲೆ ನಿರ್ಮಿಸಿದರು.

ಲ್ಯಾಮಿನ್ ಯಮಲ್ ಯುರೋಸ್​​ನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ ಮತ್ತು ಜುಲೈ 13 ರಂದು 17 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಯೂರೋಸ್ ಅಥವಾ ಫಿಫಾ ವಿಶ್ವಕಪ್​​ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಯಮಲ್ ಪಾತ್ರರಾದರು. ವಿಶ್ವಕಪ್​ನಲ್ಲಿ ಬ್ರೆಜಿಲ್ ಪರ ಮೊದಲ ಗೋಲು ಗಳಿಸಿದಾಗ ಪೀಲೆಗೆ 17 ವರ್ಷ 239 ದಿನಗಳಾಗಿದ್ದವು.

Exit mobile version