Site icon Vistara News

Shoaib Malik : ಶೋಯೆಬ್​ ಮಲಿಕ್​ನ 2ನೇ ಹೆಂಡತಿಗೆ ಸಾನಿಯಾ ಮಿರ್ಜಾ ಕಾಟ

Sana Javed

ಬೆಂಗಳೂರು: ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವೆ ಸೋಮವಾರ ನಡೆದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2024 ಪಂದ್ಯದ ವೇಳೆ ಪ್ರೇಕ್ಷಕರ ಗುಂಪೊಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik) ಅವರ ಪತ್ನಿ ಸನಾ ಜಾವೇದ್ (Sana Javed) ಅವರನ್ನು ನಿಂದಿಸಿದೆ. ಕರಾಚಿ ಕಿಂಗ್ಸ್ ಪರ ಮಲಿಕ್ ಅರ್ಧಶತಕ ಬಾರಿಸುತ್ತಿದ್ದಂತೆ ಪ್ರೇಕ್ಷಕರ ಗುಂಪು ಭಾರತೀಯ ಟೆನಿಸ್ ಐಕಾನ್ ಸಾನಿಯಾ ಮಿರ್ಜಾ (Sania Mirza) ಅವರ ಹೆಸರನ್ನು ಜೋರಾಗಿ ಕೂಡಿತು. ಸನಾ ಜಾವೇದ್ ಅವರೊಂದಿಗಿನ ಮದುವೆಯನ್ನು ಮಲಿಕ್ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಬಹಿರಂಗಪಡಿಸಿದ ಕೆಲವೇ ದಿನಗಳಲ್ಲಿ ದಂಪತಿಗಳು ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು. ಇದು ಅಲ್ಲಿನ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹೀಗಾಗಿ ಹೊಸ ಹೆಂಡತಿಯನ್ನು ನಿಂದಿಸುತ್ತಿದ್ದಾರೆ.

ಜನಸಮೂಹದ ಒಂದು ವಿಭಾಗವು ಸಾನಿಯಾ ಮಿರ್ಜಾ ಅವರ ಹೆಸರನ್ನು ಹೇಳುವ ಮೂಲಕ ಜಾವೇದ್ ಅವರನ್ನು ಕೆಣಕಿತು. ಜಾವೇದ್ ಪ್ರೇಕ್ಷಕರತ್ತ ನೋಡುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಒಂದು ಸಂದರ್ಭದಲ್ಲಿ, ಅವಳು ಜನಸಮೂಹದ ಕಡೆಗೆ ತಿರುಗಿ ಕೈ ಬೀಸಿದ್ದರು. ಆದರೆ ಘೋಷಣೆಗಳು ಸಾನಿಯಾ ಪರ ಮುಂದುವರಿದಿತ್ತು.

ಮಲಿಕ್ ಅವರ ಅರ್ಧಶತಕದ ನೆರವಿನಿಂದ ಮುಲ್ತಾನ್ ಸುಲ್ತಾನ್ಸ್ ತಂಡ 55 ರನ್ ಗಳಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ರೀಜಾ ಹೆಂಡ್ರಿಕ್ಸ್ ಉತ್ತಮ ಪ್ರದರ್ಶನ ಮತ್ತು ಮೊಹಮ್ಮದ್ ಅಲಿ ಮೂರು ವಿಕೆಟ್ ಪಡೆದರು.

ಇದನ್ನೂ ಓದಿ : Virat Kohli : ವಿರಾಟ್​ ಕೊಹ್ಲಿ, ಅನುಷ್ಕಾ ದಂಪತಿಗೆ ಗಂಡು ಮಗು; ಹೆಸರು ಅಕಾಯ್​​

ಮಲಿಕ್ ಮತ್ತು ಮಿರ್ಜಾ ನಡುವಿನ ಬೇರ್ಪಡಿಕೆ ಉಭಯ ದೇಶಗಳ ಕ್ರೀಡಾ ಪ್ರೇಮಿಗಳಲ್ಲಿ ಭಾರಿ ಆಸಕ್ತಿಯನ್ನು ಹುಟ್ಟುಹಾಕಿದೆ. ಮಿರ್ಜಾ ಅವರ ಕುಟುಂಬವು ಅವರ ಪ್ರತ್ಯೇಕತೆಯ ಸುದ್ದಿಯನ್ನು ದೃಢಪಡಿಸಿತು. ಈ ಸೂಕ್ಷ್ಮ ಸಂದರ್ಭದಲ್ಲಿ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಕೋರಿಕೊಂಡಿದ್ದರು.

ಚಿಯರ್ಸ್​ ಹೇಳಿದ ಶೋಯೆಬ್​ ಮಲಿಕ್​ನ ಹೊಸ ಹೆಂಡತಿ

ಬೆಂಗಳೂರು: ಪಾಕಿಸ್ತಾನದ ನಟಿ ಸನಾ ಜಾವೇದ್ (Sana Javed) ಕಳೆದ ಭಾನುವಾರ ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 9ರಲ್ಲಿ ಹೊಸದಾಗಿ ಹೊಸ ಪತಿ ಶೋಯೆಬ್ ಮಲಿಕ್ ಅವರಿಗೆ ಚಿಯರ್ಸ್ ಹೇಳಿದ್ದಾರೆ. ಮುಲ್ತಾನ್ ಸುಲ್ತಾನ್ಸ್ ತಂಡದ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯವನ್ನು ವೀಕ್ಷಿಸುವ ಮೂಲಕ ಸುದ್ದಿಯಾಗಿದ್ದಾರೆ. ಶೋಯೆಬ್ ಅವರ ಪ್ರಶಂಸನೀಯ ಪ್ರದರ್ಶನದ ಹೊರತಾಗಿಯೂ, ಕರಾಚಿ ಕಿಂಗ್ಸ್ ಮುಲ್ತಾನ್ ಸುಲ್ತಾನ್ಸ್ ವಿರುದ್ಧ 55 ರನ್​ಗಳಿಂದ ಸೋಲನ್ನು ಅನುಭವಿಸಿತು.

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸನಾ ಹಾಗೂ ಶೋಯೆಬ್​ ಮಲಿಕ್​. ಪಿಎಸ್ಎಲ್ ಉದ್ಘಾಟನಾ ಸಮಾರಂಭದ ವೇಳೆ ಮುಲ್ತಾನ್​ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಪಾಕಿಸ್ತಾನದ ಪ್ರಮುಖ ನಟಿ ಸನಾ ಜಾವೇದ್, ಲೀಗ್​ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಶೋಯೆಬ್​​ಗೆ ತಮ್ಮ ಅಚಲ ಬೆಂಬಲ ತೋರಿಸಿದ್ದಾರೆ.

ಆಲ್​ರೌಂಡರ್​ ಕ್ರಿಕೆಟ್​ಗೆ ಹೆಸರುವಾಸಿಯಾದ ಶೋಯೆಬ್ ಮಲಿಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ಅವರು ದೇಶಕ್ಕಾಗಿ 446 ಪಂದ್ಯಗಳನ್ನು ಆಡಿದ್ದಾರೆ. ಪಂದ್ಯದಲ್ಲಿ ಸನಾ ಅವರ ಉಪಸ್ಥಿತಿಯು ಅವರ ಉತ್ಸಾಹವನ್ನು ಹೆಚ್ಚಿಸಿತ್ತು. ಸೋಶಿಯಲ್​ ಮೀಡಿಯಾಗಳಲ್ಲಿ ಅವರ ಗಮನ ಸೆಳೆಯಿತು.

ಪಾಕಿಸ್ತಾನದ ಅನುಭವಿ ಆಟಗಾರ ಶೋಯೆಬ್ ಮಲಿಕ್ ಈ ಹಿಂದೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದರು. ಕೆಲವು ದಿನಗಳ ಹಿಂದೆ ಅವರು ಬೇರ್ಪಟ್ಟಿದ್ದರು. ಬೇರ್ಪಟ್ಟಿರುವ ಹೊರತಾಗಿಯೂ ​ ಸಾನಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.

ಸನಾ ಜಾವೇದ್ ಅವರು ಪಾಕಿಸ್ತಾನದ ಗಾಯಕ ಅಮೀರ್ ಜೆಸ್ವಾಲಾ ಅವರಿಂದ ಬೇರ್ಪಟ್ಟ ನಂತರ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದಾರೆ. ಹೀಗಾಗಿ ಇದು ಸನಾ ಅವರ ಎರಡನೇ ಮದುವೆಯಾಗಿದೆ. ಪತಿಯ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಸ್ಪಷ್ಟವಾಗಿದೆ.

Exit mobile version