Site icon Vistara News

Virat Kohli : ಕಿಂಗ್ ಕೊಹ್ಲಿ ಎಂದು ಕರಿಬೇಡಿ, ಮುಜುಗರವಾಗುತ್ತದೆ ಎಂದ ವಿರಾಟ್​

Virat kohli

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನಾಯಕ ವಿರಾಟ್ ಕೊಹ್ಲಿ (VIrat kohli) ಎರಡು ತಿಂಗಳ ಬಳಿಕ ಕ್ರಿಕೆಟ್ ಸ್ಟೇಡಿಯಂಗೆ ಮರಳಿದ್ದಾರೆ. ವಿಶೇಷವೆಂದರೆ, ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಇರಲು ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿದ್ದರು.

ಫೆಬ್ರವರಿಯಲ್ಲಿ ಮಗ ಅಕಾಯ್​ ಜನನದ ನಂತರ, ಕೊಹ್ಲಿ ಅಂತಿಮವಾಗಿ ಮುಂಬರುವ ಐಪಿಎಲ್ 2024 ಗಾಗಿ ಆರ್​​ಸಿಬಿ ತಂಡವನ್ನು ಸೇರುವ ಮೂಲಕ ಕ್ರಿಕೆಟ್ ಮೈದಾನಕ್ಕೆ ಮರಳಿದರು. ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ ಅನ್​ಬಾಕ್ಸ್ (RCB UNBOX) ಈವೆಂಟ್​ನಲ್ಲಿ ಕೊಹ್ಲಿಗೆ ಪ್ರೇಕ್ಷಕರಿಂದ ಉತ್ಸಾಹಭರಿತ ಸ್ವಾಗತ ದೊರೆಯಿತು. ಪ್ರೇಕ್ಷಕರು ತಮ್ಮ ನೆಚ್ಚಿನ ತಾರೆಯನ್ನು ನೋಡಿ ರೋಮಾಂಚನಗೊಂಡು ಕೂಗಿದರು. ಈ ವೇಳೆ ಈವೆಂಟ್​ನ ನಿರೂಪಕರಾದ ದಾನಿಶ್ ಸೇಠ್ ಅವರ ಬಳಿ ತಮ್ಮನ್ನು ‘ಕಿಂಗ್’ ಎಂದು ಕರೆಯಬೇಡಿ ಎಂದು 35 ವರ್ಷದ ಕೊಹ್ಲಿ ಹೇಳಿದ ಪ್ರಸಂಗ ನಡೆಯಿತು.

ಗೆಳೆಯರೇ , ನಾವು ಬಹಳ ಬೇಗ ಚೆನ್ನೈಗೆ ಹೋಗಬೇಕಾಗಿದೆ, ನಮ್ಮಲ್ಲಿ ಚಾರ್ಟರ್ಡ್ ವಿಮಾನವಿದೆ. ನಮಗೆ ಹೆಚ್ಚು ಸಮಯವಿಲ್ಲ. ಮೊದಲನೆಯದಾಗಿ, ನೀವು ನನ್ನನ್ನು ಆ ಪದ ( ಕಿಂಗ್​) ಎಂದು ಕರೆಯುವುದನ್ನು ನಿಲ್ಲಿಸಬೇಕು. ನಾನು ಫಾಫ್ ಗೆ ಹೇಳುತ್ತಿದ್ದೆ ನೀವು ನನ್ನನ್ನು ಹಾಗೆ ಕರೆದಾಗ ನನಗೆ ಮುಜುಗರವಾಗುತ್ತದೆ. ಆದ್ದರಿಂದ ದಯವಿಟ್ಟು ಇನ್ನು ಮುಂದೆ ನನ್ನನ್ನು ವಿರಾಟ್ ಎಂದು ಕರೆಯಿರಿ. ಕಿಂಗ್​ ಪದವನ್ನು ಬಳಸಬೇಡಿ. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡುತ್ತದೆ”ಎಂದು ಕೊಹ್ಲಿ ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: WPL 2024 : ಚಾಂಪಿಯನ್​ ಆರ್​ಸಿಬಿ ಮಹಿಳೆಯರಿಗೆ ಪುರುಷರ ತಂಡದಿಂದ ಗಾರ್ಡ್ ಆಫ್​ ಆನರ್​ ! ಇಲ್ಲಿದೆ ವಿಡಿಯೊ

ವಿಶೇಷವೆಂದರೆ, ಕ್ರಿಕೆಟ್ ಮೈದಾನದಲ್ಲಿ ಅವರ ಅದ್ಭುತ ಸಾಧನೆಗಳಿಗಾಗಿ ಕೊಹ್ಲಿಗೆ ಅವರ ದೊಡ್ಡ ಅಭಿಮಾನಿ ಬಳಗ ಮತ್ತು ಹಲವಾರು ವೀಕ್ಷಕವಿವರಣೆಗಾರರು ‘ಕಿಂಗ್’ ಎಂದು ಕರೆಯುತ್ತಾರೆ. ಸ್ಟಾರ್ ಬ್ಯಾಟರ್​ ಹಲವಾರು ಸಂದರ್ಭಗಳಲ್ಲಿ ಭಾರತ ಮತ್ತು ಆರ್​ಸಿಬಿಯನ್ನು ತೊಂದರೆಯಿಂದ ಪಾರು ಮಾಡಿದ್ದಾರೆ. ಆಟದ ಸಮಯದಲ್ಲಿ ಕೊಹ್ಲಿ ಯಾವಾಗಲೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.

ತಂಡದ ಹೆಸರು ಬದಲಿಸಿಕೊಂಡ ಆರ್​ಸಿಬಿ

ಬೆಂಗಳೂರು: ಐಪಿಎಲ್ (IPL 2024) ನ 17 ನೇ ಆವೃತ್ತಿ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಆರ್​ಸಿಬಿ (Royal Challengers Bangalore) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​​ಸಿಬಿ ಅನ್​ಬಾಕ್ಸ್​ (RCB UNBOX) ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ತಂಡಕ್ಕೆ ಹೊಸ ಹೆಸರನ್ನೂ ಇಡಲಾಗಿದೆ. ಅಂದರೆ ಇನ್ನು ಮುಂದೆ ರಾಯಲ್​ ಚಾಲೆಂಜರ್ಸ್ ಬೆಂಗ್ಳೂರ್​ (Royal Challengers Bangalore) ರಾಯಲ್​ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಆಗಿ ಬದಲಾವಣೆಯಾಗಿದೆ.

“ನಾವು ಪ್ರೀತಿಸುವ ನಗರ, ನಾವು ಅಪ್ಪಿಕೊಳ್ಳುವ ಪರಂಪರೆ ಮತ್ತು ಇದು ಹೊಸ ಅಧ್ಯಾಯ ಆರಂಭವಾಗುವ ಸಮಯ. ನಿಮಗಿದೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಅರ್ಪಣೆ. ನಿಮ್ಮ ತಂಡ, ನಿಮ್ಮ ಆರ್​ಸಿಬಿ “ಎಂದು ​ಎಕ್ಸ್​ನಲ್ಲಿ ಪೋಸ್ಟ್ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಎರಡು ದಿನದ ಹಿಂದೆ ಡಬ್ಲ್ಯುಪಿಎಲ್​ ಚಾಂಪಿಯನ್ (WPL 2024)​ ಪಟ್ಟ ಅಲಂಕರಿಸಿದ ಮಹಿಳೆಯರ ತಂಡವೂ ಆಗಮಿಸಿತ್ತು. ಅಂತೆಯೇ ತಂಡ ಸ್ಟೇಡಿಯಮ್​ಗೆ ಆಗಮಿಸುತ್ತಿದ್ದಂತೆ ಪುರುಷರ ತಂಡದ ಆಟಗಾರರು ವಿಶೇಷ ಗೌರವ ಸಲ್ಲಿಸಿದ್ದಾರೆ. ಸ್ಮೃತಿ ಮಂದಾನ ನೇತೃತ್ವದ ತಂಡ ಚಿನ್ನಸ್ವಾಮಿಗೆ ಪ್ರವೇಶ ಪಡೆದ ತಕ್ಷಣ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು. ಈ ವೇಳೆ ಪುರುಷರ ತಂಡ ವಿಶೇಷ ಗೌರವ ನೀಡಿತು.

Exit mobile version