Site icon Vistara News

Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

sunil chhetri

ಕೋಲ್ಕತ್ತಾ: ಇಲ್ಲಿನ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ 58,000 ಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ಭಾರತ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ (Sunil Chhetri) ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ವಿದಾಯ ಹೇಳಿದರು. ಕತಾರ್ ವಿರುದ್ಧದ ಪಂದ್ಯದ ಫಲಿತಾಂಶವು ಡ್ರಾದಲ್ಲಿ ಕೊನೆಗೊಂಡ ಕಾರಣ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತದ ಪ್ರಗತಿ ಹಾದಿಗೆ ಅಡಚಣೆ ಉಂಟಾಯಿತು. ಇದು ಭಾರತದ ಫುಟ್ಬಾಲ್ ಪಾಲಿಗೆ ಬೇಸರದ ವಿಷಯ. ಆದಾಗ್ಯೂ ಅಭಿಮಾನಿಗಳು ಕೆಲವು ಕ್ಷಣಗಳವರೆಗೆ ನಿರಾಶೆ ಬದಿಗಿಟ್ಟರು. ಛೆಟ್ರಿಗೆ ಪ್ರೇಕ್ಷಕರು ಗಾರ್ಡ್​ ಆಫ್​ ಹಾನರ್ ಸಲ್ಲಿಸಿದರು.

ಕುವೈತ್ ವಿರುದ್ಧದ ಡ್ರಾದ ನಂತರ ಎರಡೂ ತಂಡದ ಆಟಗಾರರು ಅವರಿಗೆ ಗಾರ್ಡ್​ ಆಫ್​ ಹಾನರ್​ ಸಲ್ಲಿಸಿದರು. ಈ ವೇಳೆ ಛೆಟ್ರಿ ಆನಂದ ಭಾಷ್ಪ ಸುರಿಸಿದರು. ಭಾರತೀಯ ಅಭಿಮಾನಿಗಳಿಂದ ಭಾರಿ ಹರ್ಷೋದ್ಗಾರ ಗೌರವ ಸಲ್ಲಿಸಿದರು. ಆಟಗಾರರು ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಪಂದ್ಯದಲ್ಲಿ, 39 ವರ್ಷದ ಆಟಗಾರ ಅತ್ಯಂತ ಉತ್ಸಾಹದಲ್ಲಿದ್ದಂತೆ ಕಂಡರು. ತಮ್ಮ ಯುವ ಸಹ ಆಟಗಾರರನ್ನು ಮೀರಿಸಿ ಓಡಾಡುತ್ತಿದ್ದರು. ತಮ್ಮ 151 ನೇ ಪ್ರದರ್ಶನದಲ್ಲಿ 94 ಗೋಲುಗಳ ದಾಖಲೆಯ ಸಂಖ್ಯೆಯನ್ನು ಸೇರಿಸುವ ಭರವಸೆಯಲ್ಲಿದ್ದರು. ಆದಾಗ್ಯೂ, ಭಾರತದ ದಾಖಲೆಯ ಗೋಲ್ ಸ್ಕೋರರ್​ಗೆ ಪರಿಪೂರ್ಣ ವಿದಾಯ ಸಿಗಲಿಲ್ಲ, ಕುವೈತ್ ಆಟದಲ್ಲಿ ಪ್ರಾಬಲ್ಯ ಸಾಧಿಸಿತು.

ಛೆಟ್ರಿ 94ಗೋಲ್​ಗಳ ಸರದಾರ

39 ವರ್ಷದ ಛೆಟ್ರಿ, 94 ಗೋಲುಗಳನ್ನು ಗಳಿಸುವ ಮೂಲಕ ಕ್ರೀಡೆಯ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಗೋಲ್ ಸ್ಕೋರರ್ ಆಗಿ ತಮ್ಮ 19 ವರ್ಷಗಳ ಅಂತರರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ಪೋರ್ಚುಗಲ್​ನ ಕ್ರಿಸ್ಟಿಯಾನೊ ರೊನಾಲ್ಡೊ (128 ಗೋಲುಗಳು), ಇರಾನ್​ನ ಅಲಿ ಡೇಯ್ (108 ಗೋಲುಗಳು) ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (106 ಗೋಲುಗಳು) ಅವರಿಗಿಂತ ಮೊದಲಿನ ಸ್ಥಾನಗಳಲ್ಲಿ ಇದ್ದಾರೆ.

ಪೋಷಕರು ಭಾಗಿ

ಛೆಟ್ರಿ ಅವರ ಅಂತಾರಾಷ್ಟ್ರೀಯ ಫುಟ್ಬಾಲ್​​ಗೆ ವಿದಾಯ ಹೇಳಿರುವುದು ಹೃದಯಸ್ಪರ್ಶಿ ಕ್ಷಣವಾಗಿತ್ತು. ಏಕೆಂದರೆ ಭಾವನಾತ್ಮಕ ಬೀಳ್ಕೊಡುಗೆಯಲ್ಲಿ ಅವರ ಹೆತ್ತವರಾದ ಖಾರ್ಗಾ ಮತ್ತು ಸುಶೀಲಾ, ಅವರ ಪತ್ನಿ ಸೋನಮ್ ಭಟ್ಟಾಚಾರ್ಯ ಮತ್ತು ಹಲವಾರು ಅಧಿಕಾರಿಗಳು ಮತ್ತು ಮಾಜಿ ಆಟಗಾರರು ಹಾಜರಿದ್ದರು, ಇದು ಅವರು ಭಾರತೀಯ ಫುಟ್ಬಾಲ್ ಮೇಲೆ ಬೀರಿದ ಆಳ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಒಂದು ವೇಳೆ ಭಾರತ ಕತಾರ್ ತಂಡವನ್ನು ಸೋಲಿಸಲು ವಿಫಲವಾದರೆ, ಪ್ರಸ್ತುತ ನಾಲ್ಕು ಅಂಕಗಳನ್ನು ಹೊಂದಿರುವ ಕುವೈತ್ ಜೂನ್ 11 ರಂದು ಅಫ್ಘಾನಿಸ್ತಾನವನ್ನು ಸೋಲಿಸಿದರೆ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಪ್ರವೇಶಿಸಬಹುದು.

Exit mobile version