Site icon Vistara News

Sunil Narine : ಐಪಿಎಲ್​ 2024ರ ‘ಮೌಲ್ಯಯುತ ಆಟಗಾರ ಪ್ರಶಸ್ತಿ’ ಗೆದ್ದು ಹೊಸ ದಾಖಲೆ ಬರೆದ ಸುನಿಲ್ ನರೈನ್​​

Sunil Narine

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ (SRH) ವಿರುದ್ಧ ಗೆಲುವು ಸಾಧಿಸಿದ ನಂತರ ಕೋಲ್ಕತಾ ನೈಟ್ ರೈಡರ್ಸ್ (KKR) ಆಲ್​ರೌಂಡರ್​ ಸುನಿಲ್ ನರೈನ್ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಸುನಿಲ್ ನರೈನ್ ಪಾತ್ರರಾಗಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಮೇ 26) ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ನೈಟ್ ರೈಡರ್ಸ್ ಒಟ್ಟು ಮೂರನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವನ್ನು ಏಕಪಕ್ಷೀಯ ಮುಖಾಮುಖಿಯಲ್ಲಿ ಸೋಲಿಸಿತು. 114 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್​ 10.3 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಸುನಿಲ್ ನರೈನ್ ಸಾಧನೆ

ಕೋಲ್ಕತಾ ನೈಟ್ ರೈಡರ್ಸ್​ ತಂಡ ಮೂರು ಪ್ರಶಸ್ತಿ ವಿಜೇತ ಅಭಿಯಾನಗಳ ಭಾಗವಾಗಿರುವ ಏಕೈಕ ಆಟಗಾರ ಸುನಿಲ್ ನರೈನ್. ಸ್ಪಿನ್ ಬೌಲರ್ 2012 ರ ಋತುವಿನಿಂದಲೂ ನೈಟ್ ರೈಡರ್ಸ್ ಜೊತೆಗಿದ್ದಾರೆ. 36 ವರ್ಷದ ಕ್ರಿಕೆಟರ್ ಗೌತಮ್ ಗಂಭೀರ್ ನಾಯಕತ್ವದಲ್ಲಿ 2012 ಮತ್ತು 2014ರಲ್ಲಿ ಪ್ರಶಸ್ತಿ ಗೆಲ್ಲುವ ಅಭಿಯಾನದ ಭಾಗವಾಗಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ನೀಡಿದ ಕೊಡುಗೆಗಳಿಗಾಗಿ ಸುನಿಲ್ ನರೈನ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಚಪಡೆದರು. ಈ ಹಿಂದೆ 2012 ಮತ್ತು 2018ರಲ್ಲಿ ಪ್ರಶಸ್ತಿ ಗೆದ್ದಿದ್ದ ನರೈನ್​​ ಇದು ಐಪಿಎಲ್ ಇತಿಹಾಸದಲ್ಲಿ ಮೂರನೇ ಪ್ರಶಸ್ತಿಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: IPL 2024 : ಐಪಿಎಲ್​ ಯಶಸ್ಸಿನ ಖುಷಿ; ಪಿಚ್ ಸಿದ್ಧಪಡಿಸಿದವರಿಗೂ 25 ಲಕ್ಷ ರೂ. ಇನಾಮು ಕೊಟ್ಟ ಬಿಸಿಸಿಐ!

ಐಪಿಎಲ್ 2024 ರಲ್ಲಿ, ನರೈನ್ ಅವರನ್ನು ನೈಟ್ ರೈಡರ್ಸ್ ಪರ ಆರಂಭಿಕ ಸ್ಥಾನಕ್ಕೆ ಬಡ್ತಿ ನೀಡಲಾಯಿತು. ಪಂದ್ಯಾವಳಿಯಲ್ಲಿ ಫಿಲ್ ಸಾಲ್ಟ್ ಅವರೊಂದಿಗೆ ಆಕ್ರಮಣಕಾರಿ ಆರಂಭವನ್ನು ನೀಡಿದರು. ಎಡಗೈ ಬ್ಯಾಟ್ಸ್ಮನ್ 15 ಪಂದ್ಯಗಳಲ್ಲಿ 34.85 ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ ಮತ್ತು 180.74 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.

ಟ್ರಿನಿಡಾಡ್​ನ ಆಟಗಾರ 21.64ರ ಸರಾಸರಿಯಲ್ಲಿ 17 ವಿಕೆಟ್​​ ಕಬಳಿಸಿದ್ದಾರೆ. ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ಆಂಡ್ರೆ ರಸೆಲ್ ನಂತರ ನರೈನ್ ಕೆಕೆಆರ್ ಪರ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅಂತಿಮ ಪಂದ್ಯದಲ್ಲಿ ಸ್ಪಿನ್ನರ್ ನಾಲ್ಕು ಓವರ್ ಗಳಲ್ಲಿ ಕೇವಲ 16 ರನ್ ಗಳಿಗೆ ಒಂದು ವಿಕೆಟ್ ಪಡೆದರು.

ಇದು 2012 ರಂತೆ ಭಾಸವಾಯಿತು – ಸುನಿಲ್ ನರೈನ್

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸುನಿಲ್ ನರೈನ್, ಪ್ರಶಸ್ತಿ ಗೆಲ್ಲಲು ಕೆಕೆಆರ್ ಆಟದ ಪ್ರತಿಯೊಂದು ಅಂಶದಲ್ಲೂ ಉತ್ತಮವಾಗಿ ಸಿದ್ಧವಾಗಿದೆ ಎಂದು ಹೇಳಿದರು. ಫೈನಲ್​ನಲ್ಲಿ ಫಿಲ್ ಸಾಲ್ಟ್ ಇಲ್ಲದಿರುವುದನ್ನು ಆಲ್​ರೌಂಡರ್​​ ಒಪ್ಪಿಕೊಂಡರು ಮತ್ತು ರಹಮಾನುಲ್ಲಾ ಗುರ್ಬಾಜ್ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಇಂದು ಮೈದಾನಕ್ಕೆ ಬಂದಾಗ, ಇದು 2012 ರಂತೆ ಭಾಸವಾಯಿತು. ಭಾವನೆ ಮಿತಿ ಮೀರಿದೆ. ಇದಕ್ಕಿಂತ ಉತ್ತಮವಾದ ಹುಟ್ಟುಹಬ್ಬದ ಉಡುಗೊರೆಯನ್ನು ನಾನು ನಿರೀಕ್ಷಿಸಲು ಸಾಧ್ಯವಿಲ್ಲ. ನಾನು ಈ ಸಮಯದಲ್ಲಿ ನನ್ನ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೇನೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್. ತಂಡ ಗೆದ್ದಾಗ ಎಲ್ಲವೂ ಸಹಾಯವಾಗುತ್ತದೆ ಎಂದು ನರೈನ್ ಹೇಳಿದರು.

Exit mobile version