ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಅವರಿಗೆ ಯುಎಇಯ ಪ್ರವಾಸೋದ್ಯಮ ಇಲಾಖೆ ಗೋಲ್ಡನ್ ವೀಸಾ ನೀಡಿದೆ. ಹಿರಿಯ ನಟ ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಬುಧಾಬಿ ಸರ್ಕಾರ ಮತ್ತು ಲುಲು ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಯೂಸುಫ್ ಅಲಿ (M A Yusuf Ali) ಅವರ ಪ್ರಯತ್ನಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಜನಿಕಾಂತ್ “ಅಬುಧಾಬಿ ಸರ್ಕಾರದಿಂದ ಪ್ರತಿಷ್ಠಿತ ಯುಎಇ ಗೋಲ್ಡನ್ ವೀಸಾ ಸ್ವೀಕರಿಸಲು ಹೆಮ್ಮೆ ಎನಿಸುತ್ತಿದೆ. ಈ ವೀಸಾ ಲಭ್ಯತೆಯನ್ನು ಸುಗಮಗೊಳಿಸಿದ್ದಕ್ಕಾಗಿ ಮತ್ತು ಎಲ್ಲಾ ರೀತಿಯ ಬೆಂಬಲಕ್ಕಾಗಿ ಅಬುಧಾಬಿ ಸರ್ಕಾರಕ್ಕೆ ಮತ್ತು ನನ್ನ ಉತ್ತಮ ಸ್ನೇಹಿತ, ಲುಲು ಗ್ರೂಪ್ನ ಸಿಎಂಡಿ ಯೂಸುಫ್ ಅಲಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
Superstar #Rajinikanth received the UAE's prestigious Golden Visa..🔥 pic.twitter.com/9OhtgyNVHE
— SureshEAV (@Dir_Suresheav) May 23, 2024
ಇತ್ತೀಚೆಗೆ ಯುಎಇಯಲ್ಲಿದ್ದಾಗ, ನಟ ಲುಲು ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಯೂಸುಫ್ ಅಲಿ ಮತ್ತು ಅದರ ಇತರ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಸೂಪರ್ ಸ್ಟಾರ್ ಮತ್ತು ಉದ್ಯಮಿ ರೋಲ್ ರಾಯ್ಸ್ ನಲ್ಲಿ ಸವಾರಿ ಮಾಡಿದ್ದರು.
ನಟ ಫುಲ್ ಬ್ಯುಸಿ
ಸೂಪರ್ಸ್ಟಾರ್ ರಜನಿಕಾಂತ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ವೆಟ್ಟೈಯಾನ್’ ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು. ಇದನ್ನು ಟಿ.ಜೆ.ಜ್ಞಾನವೇಲ್ ಬರೆದು ನಿರ್ದೇಶಿಸಿದ್ದಾರೆ. ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್ ಸಾಂಗ್ ರಿಲೀಸ್
ಈ ತಿಂಗಳ ಆರಂಭದಲ್ಲಿ, ರಜನಿಕಾಂತ್ ಮತ್ತು ಅಮಿತಾಬ್ ಒಟ್ಟಿಗೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದರು. ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಅಮಿತಾಬ್ ಬಚ್ಚನ್ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. “ತಲಾ ದಿ ಗ್ರೇಟ್ ರಜನಿ ಅವರೊಂದಿಗೆ ಇರುವುದೇ ನನಗೆ ಗೌರವ, ಅವರು ಬದಲಾಗಲೇ ಇಲ್ಲ.. ಅದೇ ಸರಳ, ವಿನಮ್ರತೆ ಸ್ನೇಹಿತ ಎಂದು ಬರೆದುಕೊಂಡಿದ್ದರು.
ಇದಕ್ಕೂ ಮೊದಲು, ಲೈಕ್ರಾ ಪ್ರೊಡಕ್ಷನ್ ಹೌಸ್ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಫೋಟೋಗಳನ್ನು ಹಂಚಿಕೊಂಡು, “ದಿ ಟೈಟಾನ್ಸ್ ಆಫ್ ಇಂಡಿಯನ್ ಸಿನೆಮಾ! ಸೂಪರ್ಸ್ಟಾರ್ ಎಂದು ಬರೆದಕೊಂಡಿತ್ತು. ಆ ಫೋಟೋಗಳಲ್ಲಿ, ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಸ್ಟೈಲಿಶ್ ಕಪ್ಪು ದಿರಸಿನಲ್ಲಿ ಪೋಸ್ ನೀಡಿದ್ದರು. ಅವರಿಬ್ಬರು ಮಾತನಾಡಿದ್ದರು.