ಬೆಂಗಳೂರು: ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಶನಿವಾರ ನಡೆದ ವಿಶ್ವ ಕಪ್ 2024ರ (T20 World Cup 2024) ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಬಳಿಕ ಭಾರತ ತಂಡದ ಆಟಗಾರರ ಸಂತಸಕ್ಕೆ ಪಾರವೇ ಇಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಅಂತೆಯೇ ಪಂದ್ಯದ 19ನೇ ಓವರ್ನಲ್ಲಿ ಅದ್ಬುತ ಕ್ಯಾಚ್ ಹಿಡಿದು ಪಂದ್ಯಕ್ಕೆ ನಿರ್ಣಾಯ ತಿರುವು ಕೊಟ್ಟ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಅವರು ರಾತ್ರಿಯಲ್ಲಿ ಟಿ 0 ವಿಶ್ವಕಪ್ ಟ್ರೋಫಿ ಬೆಡ್ ಮೇಲೆ ಇಟ್ಟು ಮಲಗಿದ್ದಾರೆ. ಅದರ ವಿಡಿಯೊ ವೈರಲ್ ಆಗಿದೆ.
ಅಂತಿಮ ಓವರ್ನಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಬೌಂಡರಿ ಲೈನ್ನಲ್ಲಿ ಕ್ಯಾಚ್ ಹಿಡಿದು ಔಟ್ ಮಾಡಿದ ಸೂರ್ಯ ಕುಮಾರ್ ಯಾದವ್ ಅತ್ಯಂತ ಸಂಭ್ರಮದಲ್ಲಿದ್ದರು. ತಂಡದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಇದನ್ನು ಆಟದ ಗತಿ ಬದಲಾವಣೆ ಮಾಡಿದ ಕ್ಷಣ ಎಂದು ಕರೆದಿದ್ದಾರೆ. ಏಕೆಂದರೆ ವಿಜಯದ ನಂತರ ಸೂರ್ಯ ಭಾರತೀಯ ಡ್ರೆಸ್ಸಿಂಗ್ ಕೋಣೆಯಲ್ಲಿ ಅತ್ಯುತ್ತಮ ಫೀಲ್ಡರ್ ಪದಕ ಕೂಡ ಪಡೆದಿದ್ದಾರೆ.
ಅದಕ್ಕಿಂತ ಮೊದಲು ಕುಲದೀಪ್ ಯಾದವ್ ಕ್ವಿಂಟನ್ ಡಿ ಕಾಕ್ ಅವರ ಪ್ರಮುಖ ಕ್ಯಾಚ್ ಪಡೆದಿದ್ದರು. ಆದರೆ ಸೂರ್ಯಕಮಾರ್ ಯಾದವ್ ಅವರ ಕ್ಯಾಚ್ ಇನ್ನೂ ಅತ್ಯುತ್ತಮವಾಗಿತ್ತು ಎಂದು ಟಿ ದಿಲೀಪ್ ಹೇಳಿದ್ದಾರೆ. ಆದ್ದರಿಂದ, ಅವರು ಟ್ರೋಫಿಯನ್ನು ಪಕ್ಕದಲ್ಲೇ ಇಟ್ಟುಕೊಂಡಿರುವುದು ಸರಿಯಾಗಿಯೇ ಇದೆ.
ಸೂರ್ಯ ಹಾಸಿಗೆ ಒಂದು ಬದಿಯಲ್ಲಿ ಮಲಗಿದ್ದರೆ ಪತ್ನಿ ಇನ್ನೊಂದು ಕಡೆಯಲ್ಲಿ ಮಲಗಿದ್ದರು. ಮಧ್ಯದಲ್ಲಿ ಅವರು ಟ್ರೋಫಿಯನ್ನು ಇಟ್ಟುಕೊಂಡಿದ್ದರು. ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ 7 ರನ್ ಗಳ ಜಯ ಸಾಧಿಸಿತು. 2007ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಎಂ.ಎಸ್.ಧೋನಿ ಪಡೆ ಟ್ರೋಫಿ ಪಡೆದ ಬಳಿಕ ಇದು ಎರಡನೇ ಟಿ20 ವಿಶ್ವ ಕಪ್ ಟ್ರೋಫಿಯಾಗಿದೆ.
ಇದನ್ನೂ ಓದಿ: Hardik Pandya : ಭಾರತಕ್ಕೆ ಆಡುವುದೇ ಕನಸು; ಹಾರ್ದಿಕ್ ಪಾಂಡ್ಯನ ಹಳೆ ವಿಡಿಯೊ ವೈರಲ್
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ರೋಹಿತ್ ನಾಯಕನಾಗಿ 50 ಗೆಲುವುಗಳನ್ನು ದಾಖಲಿಸಿದ್ದಾರೆ. ಇದು ಟಿ 20 ಪಂದ್ಯಗಳಲ್ಲಿ ಯಾವುದೇ ನಾಯಕನಿಗೆ ಅತಿ ಹೆಚ್ಚು. ಗೆಲುವಾಗಿದೆ.