ಮುಂಬಯಿ: ಶಸ್ತ್ರಚಿಕಿತ್ಸೆಯಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣ ಐಪಿಎಲ್ 17ನೇ ಆವೃತ್ತಿಯ (IPL 2024) ಮೂರು ಪಂದ್ಯಗಳಿಂದ ಹೊರಗುಳಿದಿರುವ ಸೂರ್ಯಕುಮಾರ್ ಯಾದವ್ (SuryaKumar Yadav) ಅವರ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡ ಕಣಕ್ಕಿಳಿದಿದೆ. ಅದೇ ರೀತಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಅವರ ಅನುಪಸ್ಥಿತಿಯಲ್ಲೇ ತಂಡ ಸೋಲುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಏತನ್ಮಧ್ಯೆ ಅವರು ಶೀಘ್ರದಲ್ಲೇ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಮರಳಲಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಪ್ರಸ್ತುತ ತಮ್ಮ ಪುನರ್ವಸತಿ ಪ್ರಕ್ರಿಯೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ಕೆ ಮುಂಚಿತವಾಗಿ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಅವರಿಗೆ ಪುನಶ್ಚೇತನ ಮುಂದುವರಿಸಲು ತಿಳಿಸಲಾಯಿತು. ಅವರು ತಮ್ಮ ಪಾದದ ಗಾಯ ಮತ್ತು ಸ್ಪೋರ್ಟ್ಸ್ ಹರ್ನಿಯಾಗೆ ಬ್ಯಾಕ್ ಟು ಬ್ಯಾಕ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಹೀಗಾಗಿ ತಕ್ಷಣದಲ್ಲೇ ಸುಧಾರಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ.
ಅವರ ಅನುಪಸ್ಥಿತಿಯನ್ನು ಐದು ಬಾರಿಯ ಚಾಂಪಿಯನ್ ತಂಡ ಅನುಭವಿಸಿದೆ. ಅವರು 17 ನೇ ಋತುವಿನಲ್ಲಿ ಇನ್ನೂ ಒಂದು ಜಯ ಕಂಡಿಲ್ಲ. ಪ್ರಸಕ್ತ ಋತುವಿನಲ್ಲಿ ಒಂದು ಪಾಯಿಂಟ್ ಇಲ್ಲದ ಏಕೈಕ ತಂಡ ಮುಂಬಯಿ . ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನೊಂದಿಗೆ ಪ್ರಾರಂಭವಾದ ಹಾಲಿ ಋತುವು ಮುಂದಿನ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಇದನ್ನೂ ಓದಿ: IPL 2024: ಕೋಲ್ಕೊತಾ ನೈಟ್ ರೈಡರ್ಸ್ ಸವಾಲು ಮೀರುವುದೇ ಡೆಲ್ಲಿ ಕ್ಯಾಪಿಟಲ್ಸ್?
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 31 ರನ್ಗಳ ಸೋಲು ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್ಗಳ ಪರಾಜಯ ಹೊಸ ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಆಟಗಾರರ ಮೇಲೆ ಪರಿಣಾಮ ಬೀರಿದೆ.
ಟಿ 20 ಐ ಶ್ರೇಯಾಂಕದಲ್ಲಿ ಪಾಂಡ್ಯ ನಂಬರ್ 1
ಅವರ 360 ಡಿಗ್ರಿ ಬ್ಯಾಟಿಂಗ್ ಶೈಲಿಯು ಈ ಹಿಂದೆ ಮುಂಬೈಗೆ ರೋಚಕ ವಿಜಯಗಳನ್ನು ತಂದುಕೊಟ್ಟಿತು. ಏಪ್ರಿಲ್ 2 ರಂದು ಮತ್ತೊಂದು ಸುತ್ತಿನ ಫಿಟ್ನೆಸ್ ಪರೀಕ್ಷೆಗಳ ನಂತರ ಎನ್ಸಿಎ ಪಾಂಡ್ಯ ಅವರನ್ನು ತೆರವುಗೊಳಿಸಲಿದೆ. ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 7 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದ್ದು, ಪ್ರಮುಖ ಪಂದ್ಯಕ್ಕೆ ಸ್ಕೈ ಲಭ್ಯವಾಗುವ ಸಾಧ್ಯತೆಯಿದೆ.
ಮುಂಬಯಿ: ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians ) ಪಂದ್ಯಾವಳಿಯ ಇತಿಹಾಸದಲ್ಲಿ 250 ಐಪಿಎಲ್ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ 2024ರ (IPL 2024) ಪಂದ್ಯದಲ್ಲಿ ಮೆನ್ ಇನ್ ಬ್ಲೂ ಆ್ಯಂಡ್ ಗೋಲ್ಡ್ ಈ ಸಾಧನೆ ಮಾಡಿದೆ. ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ಆರ್ಸಿಬಿ ತಂಡ (244 ಪಂದ್ಯಗಳು), ಡೆಲ್ಲಿ ಕ್ಯಾಪಿಟಲ್ಸ್ (241 ಪಂದ್ಯಗಳು), ಕೋಲ್ಕತಾ ನೈಟ್ ರೈಡರ್ಸ್ (239 ಪಂದ್ಯಗಳು), ಪಂಜಾಬ್ ಕಿಂಗ್ಸ್ (235 ಪಂದ್ಯಗಳು) ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (228 ಪಂದ್ಯಗಳು) ನಂತರದ ಸ್ಥಾನಗಳಲ್ಲಿವೆ.