Site icon Vistara News

Samajwadi Party: ಸಮಾಜವಾದಿ ಪಕ್ಷಕ್ಕೆ ಹೊಡೆತ, ಸ್ವಾಮಿ ಪ್ರಸಾದ ಮೌರ್ಯ ರಾಜೀನಾಮೆ

swami prasad maurya resigned to Samajwadi Party

ಲಕ್ನೋ: ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ (swami prasad maurya) ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಅಲ್ಲದೇ, ವಿಧಾನಸಭೆ ಪರಿಷತ್ (Vidhan Parishad) ಸದಸ್ಯತ್ವವನ್ನೂ ತೊರೆದಿದ್ದಾರೆ(resigned). ನಾನು ಶುದ್ಧ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದೇನೆ. ಸಮಾಜವಾದಿ ಪಕ್ಷದಿಂದ ಬೇರೆಯಾಗಲು ಸೈದ್ಧಾಂತಿಕ ಕಾರಣಗಳಿವೆ. ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಕ್ಷ (Samajwadi Party) ಮತ್ತು ನನ್ನ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ ಎಂದು ಸ್ವಾಮಿ ಪ್ರಸಾದ್ ಮೌರ್ಯ ಅವರು ಹೇಳಿದ್ದಾರೆ.

ಸಮಾಜವಾದಿ ಪಕ್ಷಕ್ಕೆರಾಜೀನಾಮೆ ನೀಡಿರುವ ಸ್ವಾಮಿ ಮೌರ್ಯ ಪ್ರಸಾದ್ ಅವರು ತಮ್ಮದೇ ಆದ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆಂದು ಮೂಲಗಳು ಹೇಳುತ್ತಿವೆ. ಸಮಾಜವಾದಿ ಪಕ್ಷವನ್ನು ಸೇರುವ ಮೊದಲು ಮೌರ್ಯ ಅವರು, ಭಾರತೀಯ ಜನತಾ ಪಾರ್ಟಿ ಹಾಗೂ ಬಹುಜನ ಸಮಾಜ ಪಾರ್ಟಿಯಲ್ಲಿದ್ದರು. ರಾಮಚರಿತಮಾನಸ ಹಾಗೂ ರಾಮ ಮಂದಿರ ಉದ್ಘಾಟನೆ ಸಂಬಂಧ ಮೌರ್ಯ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

ನಾನು ಅಖಿಲೇಶ್ ಯಾದವ್ ಅವರನ್ನು ನೋಡಿದ್ದೇನೆ, ಅವರು ಸಮಾಜವಾದಿ ಸಿದ್ಧಾಂತಕ್ಕೆ ವಿರುದ್ಧವಾಗಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಕೆಲಸ ಮಾಡಿದ ಅನುಭವ ನನಗಿದೆ. ಅವರು ಕಟ್ಟಾ ಸಮಾಜವಾದಿ ನಾಯಕರಾಗಿದ್ದರು. ಅವರ ಪರಂಪರೆಯನ್ನು ಮುನ್ನಡೆಸುತ್ತಿರುವವರಿಗೆ ಅವರ ಸಿದ್ಧಾಂತವನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲ. ಇದು ದುರದೃಷ್ಟಕರ ಎಂದು ರಾಜೀನಾಮೆ ನೀಡಿದ ಬಳಿಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಹೇಳಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಧಾನ ಪರಿಷತ್‌ಗೂ ರಾಜೀನಾಮೆ

ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಅಧ್ಯಕ್ಷರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ ಮೌರ್ಯ ಅವರು, “ನಾನು ವಿಧಾನ ಪರಿಷತ್ತಿನಲ್ಲಿ ಸಮಾಜವಾದಿ ಪಕ್ಷದ ಸದಸ್ಯನಾಗಿ ಆಯ್ಕೆಯಾಗಿದ್ದೇನೆ, ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ, ನೈತಿಕತೆಯ ಆಧಾರದ ಮೇಲೆ ನಾನು ಎಂಎಲ್ಸಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ಮೌರ್ಯ ಅವರು ಫೆಬ್ರವರಿ 13 ರಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಾಯಕತ್ವವು ತನ್ನ ವಿರುದ್ಧ ತಾರತಮ್ಯ ಮಾಡುತ್ತಿದೆ ಮತ್ತು ರಾಮಚರಿತಮಾನಸ್ ಮತ್ತು ಅಯೋಧ್ಯೆ ದೇವಾಲಯದ ಶಂಕುಸ್ಥಾಪನೆ ಸಮಾರಂಭದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ತನ್ನನ್ನು ಸಮರ್ಥಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ: Swami Prasad Maurya: ‘ಹಿಂದು ಧರ್ಮ ಅಲ್ಲ, ಮೋಸ’ ಎಂದ ಸಮಾಜವಾದಿ ಪಕ್ಷದ ನಾಯಕ!

Exit mobile version