Site icon Vistara News

T20 Cricket : ಬಾಂಗ್ಲಾದೇಶ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದ ಕ್ರಿಕೆಟ್​ ಶಿಶು ಅಮೆರಿಕ

t20 cricket

ಬೆಂಗಳೂರು: 2024 ರ ಟಿ 20 ವಿಶ್ವಕಪ್​ಗೆ ಕೆಲವೇ ದಿನಗಳ ಮೊದಲು ನಡೆದ ಐತಿಹಾಸಿಕ ಟಿ20 ಕ್ರಿಕೆಟ್​ ಸರಣಿಯ (T20 Cricket) ಎರಡನೇ ಪಂದ್ಯದಲ್ಲಿ ಯುಎಸ್ಎ ತಂಡವು ಪೂರ್ಣ ಸಾಮರ್ಥ್ಯದ ಬಾಂಗ್ಲಾದೇಶ ತಂಡವನ್ನು ಆರು ರನ್​ಗಳಿಂದ ಸೋಲಿಸಿದೆ. ಈ ಮೂಲಕ ಕ್ರಿಕೆಟ್​ ಶಿಶು ಅಮೆರಿಕ ಐತಿಹಾಸಿಕ ಸಾಧನೆ ಮಾಡಿದೆ. 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಬಾಂಗ್ಲಾದೇಶ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನೀಡಿದ ಹೊರತಾಗಿಯೂ ಗೆಲುವು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

ಹ್ಯೂಸ್ಟನ್​ನಲ್ಲಿ ನಡೆದ 3 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಯುಎಸ್ಎ ಸತತ ಎರಡನೇ ಬಾರಿಗೆ ಬಾಂಗ್ಲಾದೇಶ ತಂಡಕ್ಕೆ ಆಘಾತ ಕೊಟ್ಟಿತು. ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ಏಷ್ಯಾದ ತಂಡಕ್ಕೆ ಎಚ್ಚರಿಕೆ ಕೊಟ್ಟಿತು. ಆ ತಂಡ ತನ್ನ ತೂಕವನ್ನು ಮೀರಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಪ್ರೈರಿ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ 145 ರನ್ ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 19.3 ಓವರ್ ಗಳಲ್ಲಿ 138 ರನ್ ಗಳಿಗೆ ಆಲೌಟ್ ಆಗಿ ಮುಖಭಂಗ ಎದುರಿಸಿತು.

ಕೆಕೆಆರ್​​ನ ಮಾಜಿ ವೇಗದ ಬೌಲರ್ ಅಲಿ ಖಾನ್ ಅವರು ಶಕೀಬ್ ಅಲ್ ಹಸನ್ ಸೇರಿದಂತೆ 3 ವಿಕೆಟ್​ಗಳನ್ನು ಕಬಳಿಸುವ ಮೂಲಕ ಅಮೆರಿಕದ ತಂಡಕ್ಕೆ ಐತಿಹಾಸಿಕ ಸರಣಿ ಗೆಲುವು ಸಾಧಿಸಲು ಸಹಾಯ ಮಾಡಿದರು. ಜೂನ್ 1 ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ ವಹಿಸಲಿರುವ ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ಯುಎಸ್ಎ ರಾಷ್ಟ್ರೀಯ ತಂಡಕ್ಕೆ ಈ ಗೆಲುವು ದೊಡ್ಡ ಉತ್ತೇಜನವಾಗಿದೆ.

ಇದನ್ನೂ ಓದಿ: IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

ಮೇ 21 ರ ಮಂಗಳವಾರ ನಡೆದ ಮೊದಲ ಟಿ 20 ಪಂದ್ಯದಲ್ಲಿ 154 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ನಂತರ ಯುಎಸ್ಎ ತಂಡವು ಎರಡನೇ ಟಿ 20 ಪಂದ್ಯವನ್ನು ಸಾಕಷ್ಟು ಆತ್ಮವಿಶ್ವಾಸದಿಂದ ಆಡಿತು. ಹ್ಯೂಸ್ಟನ್ ನಲ್ಲಿ ನಿಧಾನಗತಿಯ ಪಿಚ್ ನಲ್ಲಿ ಮೊತ್ತವನ್ನು ರಕ್ಷಿಸಿಕೊಂಡಿತು..

ಈ ಫಲಿತಾಂಶ ತುಂಬಾ ನಿರಾಶಾದಾಯಕವಾಗಿದೆ. ಆದರೆ ಮೂರನೇ ಪಂದ್ಯದಲ್ಲಿ ತಿರುಗೇಟು ಕೊಡುತ್ತೇವೆ. ಇದು ಕೌಶಲದ ಬಗ್ಗೆ ಅಲ್ಲ, ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ” ಎಂದು ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂಟೊ ಹೇಳಿದರು.

Exit mobile version