ನವದೆಹಲಿ: ವಿಶ್ವ ಕಪ್ ಗೆಲುವಿನ ಬಳಿಕ ಟಿ20 ಮಾದರಿಗೆ ನಿವೃತ್ತಿ ಹೇಳಿರುವ ರೋಹಿತ್ ಶರ್ಮಾ (Rohit Sharma) ಇದೀಗ ಅದು ಕೇವಲ ವಿಶ್ರಾಂತಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ನಿವೃತ್ತಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ಗೆಲುವಿನ ನಂತರ ರೋಹಿತ್ ಟಿ20 ಕ್ರಿಕೆಟ್ನಿಂದ ನಿವೃತ್ತಿ ಹೇಳಿದ್ದರು. ಅದಕ್ಕೆ ಮೊದಲು ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ರೋಹಿತ್ ಆ ರೀತಿ ಮಾಡಿದ್ದು ಯಾಕೆ ಎಂಬುದು ಗೊತ್ತಿಲ್ಲ.
ವಿಶ್ವ ಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸುವ ಮೂಲಕ ಮೆನ್ ಇನ್ ಬ್ಲೂ 11 ವರ್ಷಗಳ ಐಸಿಸಿ ಟ್ರೋಫಿ ಬರ ಕೊನೆಗೊಳಿಸಿತ್ತು. ಎರಡನೇ ಟಿ 20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಭಾರತವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ್ದರು.
Even we are not over your T20I retirement, @ImRo45 🥹
— Sony Sports Network (@SonySportsNetwk) August 1, 2024
What's your take? 💬#SonySportsNetwork #SLvIND #RohitSharma pic.twitter.com/AMt7HXLR6U
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್, ಅವರು ನಾನು ಇನ್ನೂ ನನ್ನು ನಿವೃತ್ತಿಗೆ ಹೊಂದಾಣಿಕೆಯಾಗಿಲ್ಲ. ದೊಡ್ಡ ಟಿ 20 ಅಂತಾರಾಷ್ಟ್ರೀಯ ಟೂರ್ನಿಗೆ ಮೊದಲು ತಂಡಕ್ಕೆ ಮತ್ತೆ ಸೇರಿಕೊಳ್ಳುತ್ತೇವೆ ಎಂದು ಅನಿಸುತ್ತದೆ ಎಂದು ಹೇಳಿದರು.
ಈ ಹಿಂದೆ ನಡೆದಂತೆ ನನಗೆ ಟಿ 20 ಯಿಂದ ವಿಶ್ರಾಂತಿ ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ. ದೊಡ್ಡ ಪಂದ್ಯಾವಳಿ ಮುಂದೆ ಬರಲಿದೆ ಮತ್ತು ನಾವು ಮತ್ತೆ ಟಿ 20 ಗಳಿಗೆ ಸಿದ್ಧರಾಗಬೇಕಾಗಿದೆ. ಆದ್ದರಿಂದ ನಾನು ಫಾರ್ಮಾಟ್ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದೇನೆ ಎಂದು ನಾನು ಭಾವಿಸುವುದಿಲ್ಲ”ಎಂದು ಶರ್ಮಾ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಟಿ20 ವಿಶ್ವ ಕಪ್ನಲ್ಲಿ ರೋಹಿತ್ ಶರ್ಮಾ ಭರ್ಜರಿ ಆಟ
2024 ರ ಟಿ 20 ವಿಶ್ವಕಪ್ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಭಾರತದ ಆರಂಭಿಕ ಆಟಗಾರ ತಮ್ಮ ಟಿ 20 ಐ ವೃತ್ತಿಜೀವನಕ್ಕೆ ಪರಿಪೂರ್ಣ ವಿದಾಯ ಹೇಳಿದ್ದರು. ಬಲಗೈ ಬ್ಯಾಟ್ಸ್ಮನ್ ಎಂಟು ಇನ್ನಿಂಗ್ಸ್ಗಳಿಂದ 36.71 ಸರಾಸರಿಯಲ್ಲಿ 257 ರನ್ ಗಳಿಸಿದ್ದಾರೆ. ಮೂರು ಅರ್ಧಶತಕಗಳೊಂದಿಗೆ 156.70 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
151 ಇನ್ನಿಂಗ್ಸ್ಗಳಲ್ಲಿ 32.05ರ ಸರಾಸರಿಯಲ್ಲಿ 4231 ರನ್ ಗಳಿಸಿರುವ 37ರ ಹರೆಯದ ರೋಹಿತ್, ಜಂಟಿ ದಾಖಲೆಯ 5 ಶತಕ ಮತ್ತು 32 ಅರ್ಧಶತಕಗಳೊಂದಿಗೆ 140.89ರ ಸ್ಟ್ರೈಕ್ ರೇಟ್ನೊಂದಿಗೆ ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ನಾಗ್ಪುರ ಮೂಲದ ಕ್ರಿಕೆಟಿಗ 2023 ರ ಏಕದಿನ ವಿಶ್ವಕಪ್ ನಂತರ ಮೊದಲ ಬಾರಿಗೆ ಏಕದಿನ ಕ್ರಿಕೆಟ್ಗೆ ಮರಳಲಿದ್ದಾರೆ. ಭಾರತದ ನಾಯಕ 11 ಇನ್ನಿಂಗ್ಸ್ಗಳಿಂದ 54.27 ಸರಾಸರಿಯಲ್ಲಿ 597 ರನ್ ಗಳಿಸುವ ಮೂಲಕ ಮತ್ತು 125.94 ಸ್ಟ್ರೈಕ್ ರೇಟ್ ಮೂಲಕ ಮಿಂಚಿದ್ದರು ಆಗಸ್ಟ್ 1 ರಿಂದ ಪ್ರಾರಂಭವಾಗಲಿರುವ ಮುಂಬರುವ ಸರಣಿಯಲ್ಲಿ ರೋಹಿತ್ ತಮ್ಮ ಫಾರ್ಮ್ ಅನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ.