Site icon Vistara News

T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

T20 World Cup 2024

ನ್ಯೂಯಾರ್ಕ್​: ಸೋಮವಾರ (ಜೂನ್ 3 ರಂದು) ನಡೆದ ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿ ಒಮಾನ್ ತಂಡದ ವಿರುದ್ಧ ನಮೀಬಿಯಾ ತಂಡದ ರೂಬೆನ್ ಟ್ರಂಪೆಲ್ಮನ್ ಹೊಸ ಟಿ20 ದಾಖಲೆ ಬರೆದಿದ್ದಾರೆ. ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಒಮಾನ್ ಬ್ಯಾಟಿಂಗ್ ಘಟಕವನ್ನು ಛಿದ್ರಗೊಳಿಸುವ ಮೂಲಕ 26 ವರ್ಷದ ಎಡಗೈ ವೇಗಿ ಟಿ 20 ಐ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಯಕ ಗೆರ್ಹಾರ್ಡ್ ಎರಾಸ್ಮಸ್ ಟಾಸ್ ಗೆದ್ದ ನಂತರ ರೂಬೆನ್ ಟ್ರಂಪೆಲ್ಮನ್ ಮಾರಕ ಬೌಲಿಂಗ್ ದಾಳಿ ಮಾಡಿದರು. ಬೌಲರ್​ಗಳಿಗೆ ಸಾಕಷ್ಟು ಮಾಡುವ ಪಿಚ್​ನಲ್ಲಿ ಭರ್ಜರಿ ಬೌಲಿಂಗ್​ ಮಾಡಲು ಮುಂದಾದರು. ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಆರಂಭಿಕ ಆಟಗಾರ ಕಶ್ಯಪ್ ಪ್ರಜಾಪತಿ ಮತ್ತು ನಾಯಕ ಅಕಿಬ್ ಇಲ್ಯಾಸ್ ಅವರ ದೊಡ್ಡ ವಿಕೆಟ್​​ಗಳನ್ಉ ಉರುಳಿಸುದರ. ಹೀಗಾಗಿ ನಮೀಬಿಯಾ ಉತ್ತಮ ಆರಂಭ ಪಡೆಯಿತು. ಇದು ಟ್ರಂಪೆಲ್ಮನ್ ಅವರ ಎಡಗೈ ಸ್ವಿಂಗ್ ಬೌಲಿಂಗ್ ಮಾಸ್ಟರ್ ಕ್ಲಾಸ್ ಪ್ರದರ್ಶನವಾಗಿದೆ. ಪ್ರಜಾಪತಿಯನ್ನು ಲೆಂತ್ ಎಸೆತದ ಮೂಲಕ ಹಿಮ್ಮೆಟ್ಟಿಸಿದರೆ ಇಲ್ಯಾಸ್ ಗೆ ಆಡಲು ಸಾಧ್ಯವೇ ಇಲ್ಲದ ಸ್ವಿಂಗ್ ಯಾರ್ಕರ್ ಹಾಕಿದರು. ಆದಾಗ್ಯೂ, ಟ್ರಂಪೆಲ್ಮನ್ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರು ತಮ್ಮ ಎರಡನೇ ಓವರ್​ನಲ್ಲಿ ವಿಕೆಟ್ ಕೀಪರ್ ನಸೀಮ್ ಅವರನ್ನು 6 ರನ್​ಗಳಿಗೆ ಔಟ್ ಮಾಡಿದರು. ಪಂದ್ಯದ ಮೂರನೇ ಓವರ್​ನಲ್ಲಿ ನಮೀಬಿಯಾ 3 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿತ್ತು.

ಇನ್ನಿಂಗ್ಸ್ ನ 19 ನೇ ಓವರ್ ನಲ್ಲಿ ಟೇಲ್ ಎಂಡರ್ ಕಲೀಮುಲ್ಲಾ ಅವರನ್ನು ಔಟ್ ಮಾಡುವ ಮೂಲಕ ಟ್ರಂಪೆಲ್ಮನ್ ಸೋಮವಾರ ತಮ್ಮ ಖಾತೆಗೆ ಮತ್ತೊಂದು ವಿಕೆಟ್ ಸೇರಿಸಿದರು. ಟ್ರಂಪೆಲ್ಮನ್ 21 ರನ್ಗಳಿಗೆ 4 ವಿಕೆಟ್​​ ಪಡೆದರು. ಇದು ಟಿ 20 ಐ ಕ್ರಿಕೆಟ್​​ನಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆ.

ಇದನ್ನೂ ಓದಿ: T20 World Cup 2024 : ಉಗ್ರರ ಬೆದರಿಕೆ ನಡುವೆಯೂ ನ್ಯೂಯಾರ್ಕ್​ನಲ್ಲಿ ಭಾರತ ತಂಡದ ಆಟಗಾರರ ಬಿಂದಾಸ್​ ತಿರುಗಾಟ!

ಟಿ 20 ವಿಶ್ವಕಪ್ ಪಂದ್ಯದಲ್ಲಿ ಟ್ರಂಪೆಲ್ಮನ್ ಅವರ 21 ರನ್​ಗಳಿಗೆ 4 ವಿಕೆಟ್​ ಸಾಧನೆಯೊಂದಿಗೆ ನಮೀಬಿಯಾ ತಂಡವು ಒಮಾನ್ ತಂಡವನ್ನು 19.4 ಓವರ್​​ಗಳಲ್ಲಿ 109 ರನ್​ಗಳಿಗೆ ಆಲೌಟ್ ಮಾಡಿತು.

ಬಾರ್ಬಡೋಸ್ ನಲ್ಲಿ ಒಮಾನ್ ಹೋರಾಟ

ಒಮಾನ್ ತಂಡ ತನ್ನ ಇನಿಂಗ್ಸ್​ನಲ್ಲಿ ಉತ್ತಮವಾಗಿ ಆಡಲಿಲ್ಲ. ಅವರು ನಿಯಮಿತವಾಗಿ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಲೇ ಸಾಗಿದರು. ಅನುಭವಿ ಆಲ್ರೌಂಡರ್ ಝೀಶಾನ್ ಮಕ್ಸೂದ್ ಮಾತ್ರ ಅಗ್ರ ಕ್ರಮಾಂಕದಲ್ಲಿ 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​​ನಲ್ಲಿ ಸ್ಕೋರ್ ಮಾಡಿದ್ದಾರೆ. ಮಕ್ಸೂದ್ 20 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು,. ಪವರ್ ಪ್ಲೇ ನಂತರ ಒಮಾನ್ 4 ವಿಕೆಟ್ ನಷ್ಟಕ್ಕೆ 37 ರನ್ ಗಳಿಗೆ ಕುಸಿಯಿತು.

ಖಾಲಿದ್ ಕೈಲ್ ಮತ್ತು ಅಯಾನ್ ಖಾನ್ 31 ರನ್​ಗಳ ಜೊತೆಯಾಟ ನೀಡಿದರು. ಆದರೆ ಒಮಾನ್ ನಮೀಬಿಯಾದ ಬೌಲಿಂಗ್ ದಾಳಿಯ ವೈವಿಧ್ಯತೆ ಮತ್ತು ಗುಣಮಟ್ಟವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಅನುಭವಿ ಡೇವಿಡ್ ವೈಸ್ ಮೂರು ವಿಕೆಟ್ ಪಡೆದರೆ, ನಾಯಕ ಗೆರ್ಹಾರ್ಡ್ ಎರಾಸ್ಮಸ್​ ನಾಲ್ಕು ಓವರ್​ಗಳಲ್ಲಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಪಡೆದರು. ಬಳಿಕ ಬ್ಯಾಟ್ ಮಾಡಿದ ನಮೀಬಿಯಾ ತಂಡವೂ 106 ರನ್​ ಗಳಿಸಿತು. ಪಂದ್ಯ ಟೈ ಆದ ಕಾರಣ ಸೂಪರ್ ಓವರ್​ ನಡೆಸಲಾಯಿತು. ಅಲ್ಲಿ ನಮೀಬಿಯಾ ಗೆಲುವು ಸಾಧಿಸಿತು.

Exit mobile version