Site icon Vistara News

T20 World Cup 2024 : ಗೆಲುವಿನ ಸಂಭ್ರಮದಲ್ಲಿ ಪಾಂಡ್ಯ ಕೆನ್ನೆಗೆ ಮುತ್ತಿಟ್ಟ ನಾಯಕ ರೋಹಿತ್; ಇಲ್ಲಿದೆ ವಿಡಿಯೊ

T20 World Cup 2024

ಬೆಂಗಳೂರು: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29 ರಂದು ನಡೆದ ಟಿ20 ವಿಶ್ವ ಕಪ್​ 2024 (T20 World Cup 2024) ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಯಿತು. ಈ ಮೂಲಕ 17 ವರ್ಷಗಳ ಬಳಿಕ ಟಿ20 ವಿಶ್ವ ಕಪ್​ ಟ್ರೋಫಿ ಗೆದ್ದುಕೊಂಡಿತು. ಅಂತೆಯೇ 13 ವರ್ಷದ ನಂತದ ಐಸಿಸಿ ವಿಶ್ವ ಕಪ್​ಗೆ ಪಾತ್ರವಾಯಿತು. ಇಂಥ ಅಪರೂಪದ ಖುಷಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ ವಿಭಿನ್ನವಾಗಿ ಭಾಗಿಯಾದರು. ಅವರ ನಡುವಿನ ಭಾವನಾತ್ಮಕ ಕ್ಷಣವು ಎಲ್ಲರ ಗಮನ ಸೆಳೆಯಿತು. ಪಂದ್ಯದ ನಂತರ ಮಾತನಾಡುವಾಗ ಭಾರತೀಯ ನಾಯಕ ರೋಹಿತ್​ ಖುಷಿ ತಡೆಯಲಾರದೇ ಪಾಂಡ್ಯ ಕೆನ್ನೆಗೆ ಮುತ್ತಿಟ್ಟರು.

ಟಾಸ್ ಗೆದ್ದ ನಂತರ ಭಾರತವು ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನವಾಗಿ ರನ್ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ 177 ರನ್​ಗಳ ಸವಾಲಿನ ಗುರಿ ನಿಗದಿಪಡಿಸಿತು. ಅಂತೆಯೇ ಅಂತಿಮ ಓವರ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಶಸ್ತಿ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು. ಈ ನಿರ್ಣಾಯಕ ಓವರ್​ಗೆ ಎಸೆಯಲು ರೋಹಿತ್ ಶರ್ಮಾ ಪಾಂಡ್ಯಗೆ ಚೆಂಡನ್ನು ನೀಡಿದರು. ಪಾಂಡ್ಯ ಕೇವಲ ಏಳು ರನ್​ಗಳನ್ನು ಬಿಟ್ಟುಕೊಟ್ಟು ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ಎರಡು ಪ್ರಮುಖ ವಿಕೆಟ್​​ಗಳನ್ನು ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು.

ಖುಷಿ ತಡೆಯಲಾರೆ ಅತ್ತ ಪಾಂಡ್ಯ

ಗೆಲುವಿನ ಇದರ ಅರ್ಥ ಬಹಳಷ್ಟಿದೆ. ಇದು ತುಂಬಾ ಭಾವನಾತ್ಮಕವಾಗಿದೆ. ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದರೆ ಏನೂ ಕ್ಲಿಕ್ ಆಗುತ್ತಿಲಿಲ್ಲ. ಇದು ನಮಗೆ ಹೆಚ್ಚು ವಿಶೇಷವಾಗಿದೆ ಎಂದು ನಾನು ಭಾವಿಸುತ್ತೇನೆ. ಕಳೆದ ಆರು ತಿಂಗಳುಗಳಲ್ಲಿ ನಾನು ಒಂದು ಮಾತನ್ನೂ ಮಾತನಾಡದಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತಲೇ ಇದ್ದರೆ ಬೆಳಗಲು ಸಾಧ್ಯವಾಗುವ ಸಮಯವಿರುತ್ತದೆ ಎಂದು ನಾನು ನಂಬುತ್ತೇನೆ. ಅದು ಎಲ್ಲವನ್ನೂ ಖುಷಿಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಗೆಲ್ಲುವುದು ನನ್ನ ಕನಸಾಗಿತ್ತು ಮತ್ತು ವಿಶೇಷವಾಗಿ ಈ ರೀತಿಯ ಅವಕಾಶವನ್ನು ಪಡೆಯುವುದು”ಎಂದು ಹಾರ್ದಿಕ್ ಪಂದ್ಯದ ನಂತರ ಹೇಳಿದರು.

ನಾನು ಎಸೆಯುವ ಪ್ರತಿ ಚೆಂಡಿಗೂ ಶ್ರಮ ವಹಿಸುತ್ತೇನೆ


ಹಾರ್ದಿಕ್ ಪಾಂಡ್ಯ ಒತ್ತಡದ ಕ್ಷಣದಲ್ಲಿ ಶಾಂತವಾಗಿರುವ ತಮ್ಮ ಗುಟ್ಟನ್ನು ತೆರೆದಿಟ್ಟರು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್​ದೀಪ್​ ಸಿಂಗ್ ಆ ಕಠಿಣ ಎಸೆದು ಭಾರತವನ್ನು ಗೆಲುವಿನ ಕಡೆಗೆ ಮರಳಿ ಕರೆತಂದರು ಎಂದು ಅವರು ಶ್ಲಾಘಿಸಿದರು.

“ನಾವು ಗೆಲ್ಲಬಹುದು ಎಂದು ನಾವು ಯಾವಾಗಲೂ ನಂಬಿದ್ದೆವು. ಶಾಂತವಾಗಿರಲು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಮಾತ್ರ ಯೋಚಿಸಿದ್ದೆವು. ಒತ್ತಡವು ಅವರ ಮೇಲೆ ಬರಲಿ. ಕೊನೆಯ ನಾಲ್ಕು-ಐದು ಓವರ್​ಗಳನ್ನು ಎಸೆದ ಶ್ರೇಯಸ್ಸು ವೇಗದ ಬೌಲರ್​ಗಳಿಗೆ ಸಲ್ಲುತ್ತದೆ. ಅದು ಎಲ್ಲವನ್ನೂ ಬದಲಾಯಿಸಿತು, “ಎಂದು ಪಾಂಡ್ಯ ಹೇಳಿದರು.

ಇದನ್ನೂ ಓದಿ: Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಗ್ಗೆಯೂ ಆಲ್ರೌಂಡರ್ ಪಾಂಡ್ಯ ಮಾತನಾಡಿದ್ದಾರೆ. ಮುಖ್ಯ ತರಬೇತುದಾರರಿಗೆ ಇದು ಅತ್ಯಂತ ಸೂಕ್ತವಾದ ವಿದಾಯ ಎಂದು ಹೇಳುವ ಮೂಲಕ ಶ್ಲಾಘಿಸಿದರು.

ನಾವೆಲ್ಲರೂ ದ್ರಾವಿಡ್ ಕುರಿತು ತುಂಬಾ ಸಂತೋಷವಾಗಿದ್ದೇನೆ. ಅವರೊಂದಿಗೆ ಕೆಲಸ ಮಾಡುವುದನ್ನು ನಿಜವಾಗಿಯೂ ಆನಂದಿಸಿದೆ. ಈ ರೀತಿಯ ವಿದಾಯವನ್ನು ನೀಡಲು, ಅವರ ಕೋಚಿಂಗ್ ವೃತ್ತಿಜೀವನವು ಹೀಗೆ ಕೊನೆಗೊಳ್ಳುವುದು ಸಂತೋಷ. ನಾವು ಉತ್ತಮ ಸಂಬಂಧವನ್ನು ಹೊಂದಿದ್ದೇವೆ, ಸ್ನೇಹಿತರಾಗಿದ್ದೇವೆ ಎಂದು ಪಾಂಡ್ಯ ಹೇಳಿದ್ದಾರೆ.

ನಾನು ಶಾಂತವಾಗಿರದಿದ್ದರೆ ಪರಿಸ್ಥಿತಿ ನನಗೆ ಪೂರಕವಾಗಿರುವುದಿಲ್ಲ ಎಂದು ನನಗೆ ತಿಳಿದಿತ್ತು ಆದ್ದರಿಂದ, ನಾನು ನನ್ನ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಮತ್ತು ನಾನು ಬೌಲಿಂಗ್ ಮಾಡುವ ಪ್ರತಿ ಚೆಂಡಿಗೆ ನನ್ನ ನೂರು ಪ್ರತಿಶತವನ್ನು ನೀಡಲು ಮುಂದಾದೆ. ನಾನು ಈ ಹಿಂದೆ ಈ ಪರಿಸ್ಥಿತಿಯನ್ನು ಎದುರಿಸಿದ್ದೆ. ನಾವು ಗೆಲ್ಲದೇ ಇರಬಹುದು. ಆದರೆ ನಾನು ಯಾವಾಗಲೂ ಒತ್ತಡವನ್ನು ಆನಂದಿಸುತ್ತೇನೆ ಎಂದು ಅವರು ಹೇಳಿದರು.

Exit mobile version