Site icon Vistara News

T20 World Cup : ಅಫಘಾನಿಸ್ತಾನ ತಂಡದ ನಾಯಕ ರಶೀದ್​ ಗೆ ಕರೆ ಮಾಡಿ ಶುಭಾಶಯ ತಿಳಿಸಿದ ತಾಲಿಬಾನ್ ನಾಯಕ

T20 world cup 2024

ಬೆಂಗಳೂರು: ಟಿ20 ವಿಶ್ವ ಕಪ್​ 2024 (T20 World Cup 2024) ಅಫಘಾನಿಸ್ತಾನ ತಂಡ ಬಾಂಗ್ಲಾದೇಶ ತಂಡವನ್ನು ಸೋಲಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ನಾಯಕ ರಶೀದ್ ಖಾನ್​ಗೆ ವಿಡಿಯೊ ಕಾಲ್ ಮಾಡಿ ಮಾತನಾಡಿದ್ದಾರೆ. ಲಕ್ಷಾಂತರ ಅಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿಗಳ ಭಾವನೆಗಳನ್ನು ಅವರು ತಮ್ಮ ಕರೆಯ ಮೂಲಕ ಪ್ರತಿಧ್ವನಿಸಿದ್ದಾರೆ ಎನ್ನಲಾಗಿದೆ. ಪುರುಷರ ಟಿ 20 ವಿಶ್ವಕಪ್ 2024 ರ ಸೆಮಿಫೈನಲ್​ ಪ್ರವೇಶಿಸಿದ್ದಕ್ಕಾಗಿ ತಂಡವನ್ನು ಅಭಿನಂದಿಸಿದ್ದಾರೆ. ಸೇಂಟ್ ವಿನ್ಸೆಂಟ್​​ನ ಕಿಂಗ್ಸ್​​ಟೌನ್​ ಅರ್ನೋವ್ ವೇಲ್ ಮೈದಾನದಲ್ಲಿ ನಡೆದ ಕೊನೆಯ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನದ ರೋಚಕ ಗೆಲುವು ಸಾಧಿಸಿತ್ತು.

ಅಫ್ಘಾನಿಸ್ತಾನ ಪುರುಷರ ಟಿ 20 ವಿಶ್ವಕಪ್​​ನಲ್ಲಿ ಬಾರಿಗೆ ಸೆಮಿಫೈನಲ್ ತಲುಪುವ ಮೂಲಕ ಸ್ಮರಣೀಯ ದಾಖಲೆ ಬರೆದಿದೆ. ಕೆರಿಬಿಯನ್ ನೆಲದಲ್ಲಿ ನಡೆದ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲುವು ಸಾಧಿಸುವ ಮೊದಲು ಅಫ್ಘಾನಿಸ್ತಾನವು ಅಚ್ಚರಿಯ ಫಲಿತಾಂಶ ಒದಗಿಸಿತ್ತು.

ಬಾಂಗ್ಲಾದೇಶ ವಿರುದ್ಧದ ಥ್ರಿಲ್ಲರ್ ಪಂದ್ಯದ ನಂತರ ಮೈದಾನದಲ್ಲಿದ್ದ ರಶೀದ್ ಖಾನ್ ಅವರೊಂದಿಗೆ ತಾಲಿಬಾನ್ ವಿದೇಶಾಂಗ ಸಚಿವರು ಮಾತನಾಡುವ ವೀಡಿಯೊವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಗೆಲುವಿಗಾಗಿ ತಂಡವನ್ನು ಅಭಿನಂದಿಸಿದ ಮುತ್ತಾಕಿ, ಮುಂದಿನ ಯಶಸ್ಸನ್ನು ಹಾರೈಸಿದ್ದರು. 1

ಅಫ್ಘಾನಿಸ್ತಾನದ ಆಟಗಾರರು ಮೈದಾನದಲ್ಲಿ ಡಾನ್ಸ್​ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದ್ದರು. ರಶೀದ್ ಖಾನ್ ತಂಡದ ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದರೆ, ಆಟಗಾರರು ವಿಜಯೋತ್ಸವದಲ್ಲಿ ಸಾಗಿದ್ದರು. ಕೋಚ್ ಜೊನಾಥನ್ ಟ್ರಾಟ್​ ಅವನ್ನು ಹೆಗಲ ಮೇಲೆ ಎತ್ತಿಕೊಂಡು ಹೋಗಿದ್ದರು. ಅಫ್ಘಾನಿಸ್ತಾನದ ಆಟಗಾರರು ತಂಡದ ಬಸ್​ನಲ್ಲಿ ತಮ್ಮ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಅವರ ರ್ಯಾಪ್ ಹಾಡುಗಳಿಗೆ ಡಾನ್ಸ್ ಮಾಡಿದ್ದರು

ಅಫಘಾನಿಸ್ತಾನದಲ್ಲೂ ಮೆರವಣಿಗೆ

ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಬೀದಿಗಳಲ್ಲಿ ಅಫ್ಘಾನಿಸ್ತಾನದ ಐತಿಹಾಸಿಕ ಸೆಮಿಫೈನಲ್ ಪ್ರವೇಶವನ್ನು ಆಚರಿಸುವ ಮೆರವಣಿಗೆ ನಡೆದವು. ನಾಯಕ ರಶೀದ್ ಖಾನ್ ಬ್ರಿಯಾನ್ ಲಾರಾ ಅವರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. ಯಾಕೆಂದರೆ ಪಂದ್ಯಾವಳಿಯ ಆರಂಭದಲ್ಲಿ ವೆಸ್ಟ್ ಇಂಡೀಸ್ ದಂತಕಥೆ ಲಾರಾ, ನಾಲ್ಕು ಸೆಮಿಫೈನಲ್ ಸ್ಪರ್ಧಿಗಳಲ್ಲಿ ಒಂದು ತಂಡವನ್ನು ಅಫಘಾನಿಸ್ತಾನವನ್ನು ಆಯ್ಕೆ ಮಾಡಿದ್ದರು. ಅದು ತಮಗೆ ಸಾಕಷ್ಟು ಪ್ರೇರಣೆ ನೀಡಿತು ಎಂದು ಹೇಳಿದರು.

ಇದನ್ನೂ ಓದಿ: David Warner Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್

ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್​​ ಪ್ರೀತಿಸುವ ಯುವಕರಿಗೆ ಸೆಮಿಫೈನಲ್ ಬೃಹತ್ ಸ್ಫೂರ್ತಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಅಫ್ಘಾನಿಸ್ತಾನ ತಂಡ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇದು ನಂಬಲಾಗದ ಭಾವನೆ, ಮತ್ತು ಅಫ್ಘಾನಿಸ್ತಾನವನ್ನು ಸೆಮಿಫೈನಲ್​​ನ ಅಗ್ರ ನಾಲ್ಕು ಸ್ಥಾನಗಳಲ್ಲಿ ಉಲ್ಲೇಖಿಸಿದ ಏಕೈಕ ವ್ಯಕ್ತಿ ಬ್ರಿಯಾನ್ ಲಾರಾ. ನಾವು ಅದನ್ನು ಸಾಬೀತುಪಡಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ರಶೀದ್ ಹೇಳಿದ್ದಾರೆ.

Exit mobile version