Site icon Vistara News

T20 World Cup 2024 : ವೆಸ್ಟ್​ ಇಂಡೀಸ್​ನಲ್ಲಿ ಅಪಾಯಕಾರಿ ಚಂಡಮಾರುತದಲ್ಲಿ ಸಿಲುಕಿಕೊಂಡ ಚಾಂಪಿಯನ್ ಭಾರತ ತಂಡ

Maldives

Maldives: Maldives Tourism Invites Team India To Celebrate Its T20 World Cup Triumph

ಬೆಂಗಳೂರು: ದ್ವೀಪಗಳ ರಾಷ್ಟ್ರ ವೆಸ್ಟ್​​ ಇಂಡೀಸ್​ ಗೆ ಅತ್ಯಂತ ಅಪಾಯಕಾರಿ ಬೆರಿಲ್ ಚಂಡಮಾರುತ ಅಪ್ಪಳಿಸುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ಸದಸ್ಯರು ಹಲವಾರು ದಿನಗಳವರೆಗೆ ಬಾರ್ಬಡೋಸ್​ನಲ್ಲಿ ಸಿಲುಕಿ ಹಾಕಿಕೊಳ್ಳಬಹುದು. ಶನಿವಾರ (ಜೂನ್ 29) ನಡೆದ ವಿಶ್ವ ಕಪ್​ ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ರೋಹಿತ್ ಶರ್ಮಾ ಮತ್ತು ಅವರ ಬಳಗವು ಐಸಿಸಿ ಟಿ 20 ವಿಶ್ವಕಪ್ 2024 ಅನ್ನು (T20 World Cup 2024) ಗೆದ್ದುಕೊಂಡಿತ್ತು. ಅವರೆಲ್ಲರೂ ತಕ್ಷಣವೇ ಭಾರತಕ್ಕೆ ಮರಳಿ ಸಂಭ್ರಮಾಚರಣೆ ಮಾಡಬೇಕಾಗಿತ್ತು. ಆದರೆ, ಅಪಾಯಕಾರಿ ಚಂಡ ಮಾರುತ ಅವರ ಆಸೆಗೆ ತಣ್ಣೀರು ಎರಚಿದೆ. ಅವರು ತಡವಾಗಿ ಭಾರತ ಸೇರಬೇಕಾಗಿದೆ.

ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ಭಾನುವಾರ ಬೆಳಿಗ್ಗೆ ಗ್ರೇಡ್​ 3 ಚಂಡಮಾರುತವಾಗಿ ಪರಿವರ್ತನೆಗೊಂಡಿದೆ ಭಾನುವಾರ ಬೆಳಿಗ್ಗೆಯೇ ಮಾರುತದ ಗಂಟೆಗೆ 120 ಕಿಲೋಮೀಟರ್​ನಷ್ಟಿತ್ತು. ಚಂಡಮಾರುತವು ಕ್ಷಣದಿಂದ ಕ್ಷಣಕ್ಕೆ ಬಲಗೊಳ್ಳುತ್ತಿದೆ.

ಪೋರ್ಟೊ ರಿಕೊದ ಆಗ್ನೇಯ ಮತ್ತು ವೆನೆಜುವೆಲಾದ ಉತ್ತರಕ್ಕೆ ವಿಂಡ್ವರ್ಡ್ ದ್ವೀಪಗಳಿಗೆ ಬೆರಿಲ್ ಚಂಡಮಾರುತ ಅಪ್ಪಳಿಸಲಿದೆ ನಿರೀಕ್ಷೆಯಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ರಾತ್ರಿ 8:30 ರ ಹೊತ್ತಿಗೆ ಬೆರಿಲ್ ಬಾರ್ಬಡೋಸ್​​ನ ಪೂರ್ವ-ಆಗ್ನೇಯಕ್ಕೆ ಸುಮಾರು 355 ಮೈಲಿ ದೂರದಲ್ಲಿ ಸಾಗಲಿದೆ. ಮುಂಬರುವ ಗಂಟೆಗಳಲ್ಲಿ ಪರಿಸ್ಥಿತಿ ತೀವ್ರವಾಗಬಹುದು ಎಂದು ವರದಿಯಾಗಿದೆ.

ಕಠಿಣ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಸದಸ್ಯರು ದ್ವೀಪವನ್ನು ತೊರೆಯಲು ಸಾಧ್ಯವಾಗದು. ಭಾನುವಾರ, ಆಜ್ ತಕ್​ನ ವಿಕ್ರಾಂತ್ ಗುಪ್ತಾ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ. ಎಲ್ಲರೂ ಸದ್ಯಕ್ಕೆ ಬಾರ್ಬಡೋಸ್​ನಲ್ಲಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

ವಿಮಾನಗಳ ಹಾರಾಟ ರದ್ದು

ಈಗಾಗಲೇ ವಿಮಾನಗಳನ್ನು ರದ್ದುಪಡಿಸಲಾಗಿದೆ. ವಿಮಾನ ನಿಲ್ದಾಣವನ್ನು ಶೀಘ್ರದಲ್ಲೇ ಮುಚ್ಚಲಾಗುವುದು ಎಂದು ಮೂಲಗಳು ತಿಳಿಸಿವೆ. ಭಾರತೀಯ ತಂಡವು ದ್ವೀಪದಲ್ಲಿ ಸಿಲುಕಿಕೊಳ್ಳುತ್ತದೆ ಮತ್ತು ಪರಿಸ್ಥಿತಿ ಸುಧಾರಿಸಿದ ನಂತರವೇ ಹೊರಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Rohit Sharma : ತಲೆ ಪಕ್ಕದಲ್ಲೇ ಟ್ರೋಫಿ ಇಟ್ಟುಕೊಂಡು ನಿದ್ದೆ ಮಾಡಿದ ರೋಹಿತ್ ಶರ್ಮಾ

“ಬೆರಿಲ್ ಚಂಡಮಾರುತವು ಇಂದು ರಾತ್ರಿ ಅಥವಾ ಸೋಮವಾರ ಮುಂಜಾನೆ ಬಾರ್ಬಡೋಸ್​ಗೆ ಅಪ್ಪಳಿಸಲಿದೆ. ಭೂಕುಸಿತವು ತೀವ್ರವಾಗಿರಲಿದೆ. ಬಾರ್ಬಡೋಸ್ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಮತ್ತು ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ. ಚಂಡಮಾರುತ ಕಡಿಮೆಯಾಗಿ ವಿಮಾನ ನಿಲ್ದಾಣ ಪುನರಾರಂಭವಾಗುವವರೆಗೂ ಭಾರತ ತಂಡವೂ ಇಲ್ಲಿ ಸಿಲುಕಿಕೊಳ್ಳಲಿದೆ. ನಾವೂ ಇಲ್ಲಿ ಸಿಲುಕಿಕೊಂಡಿದ್ದೇವೆ. ಎಲ್ಲಾ ಹೊರಹೋಗುವ ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ” ಎಂದು ಗುಪ್ತಾ ವಿವರಿಸಿದ್ದಾರೆ.

ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು

ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಭಾರತ 2007ರ ಬಳಿಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಂತರ ಎರಡು ಬಾರಿ ಪಂದ್ಯಾವಳಿಯನ್ನು ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ವಿರಾಟ್ ಕೊಹ್ಲಿ 76 ರನ್ ಗಳಿಸಿದರೆ, ಅಕ್ಷರ್ ಪಟೇಲ್ 47 ರನ್ ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 169 ರನ್​ಗೆ ಹೋರಾಟ ಮುಗಿಸಿತು

Exit mobile version