Site icon Vistara News

T20 World Cup 2024 : ಭಾರತ- ಬಾಂಗ್ಲಾ ಸೂಪರ್​ 8 ಪಂದ್ಯಕ್ಕೆ ಮಳೆ ಅಡಚಣೆ ಇದೆಯೇ?

T20 World Cup 2024

ಬೆಂಗಳೂರು: ಐಸಿಸಿ ಟಿ 20 ವಿಶ್ವಕಪ್ 2024 ರ (T20 World Cup 2024) ಸೂಪರ್ 8 ಹಂತದ ಮುಂದಿನ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ರೋಹಿತ್ ಶರ್ಮಾ (Rohit Sharma) ಭಾರತವನ್ನು ಮುನ್ನಡೆಸಿದರೆ, ನಜ್ಮುಲ್ ಹೊಸೈನ್ ಶಾಂಟೊ ಬಾಂಗ್ಲಾದೇಶವನ್ನು ಮುನ್ನಡೆಸಲಿದ್ದಾರೆ. ಸೂಪರ್ 8 ಸುತ್ತಿನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಕ್ಕೆ ಎರಡನೇ ಪಂದ್ಯವಾಗಿದೆ. ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ವಿರುದ್ಧ ಗೆದ್ದಿದ್ದರೆ ಬಾಂಗ್ಲಾದೇಶವು ಆಸ್ಟ್ರೇಲಿಯಾವನ್ನು ಎದುರಿಸಿ 28 ರನ್​ಗಳಿಂದ ಸೋತಿದೆ.

ರೋಹಿತ್ ಶರ್ಮಾ ಮತ್ತು ಬಳಗ ಈ ಹಂತದ ತನ್ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ಬಾಂಗ್ಲಾದೇಶ ತನ್ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಗ್ರೂಪ್ 1 ಮತ್ತು ಗ್ರೂಪ್ 2 ರಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಗೆ ಅರ್ಹತೆ ಪಡೆಯುತ್ತವೆ. ಹೀಗಾಗಿ ಭಾರತ ಇಲ್ಲಿ ಗೆದ್ದರೆ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಸೆಮೀಸ್ ಅವಕಾಶ ಸಂಕಷ್ಟದಲ್ಲಿ ಸಿಲುಕಲಿದೆ.

ಆಂಟಿಗುವಾದ ನಾರ್ತ್ ಸೌಂಡ್ ಸಿಟಿಯ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಜೂನ್ 22 ರಂದು ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ನಡೆಯಲಿದೆ. ಹವಾಮಾನ ವರದಿಗಳ ಪ್ರಕಾರ, ಶನಿವಾರ ಈ ಸ್ಥಳದ ತಾಪಮಾನವು ಹಗಲಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ 27 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಮಧ್ಯಾಹ್ನ ಆಕಾಶವು ಸ್ವಲ್ಪ ಮೋಡ ಕವಿದಿರುತ್ತದೆ. ಮಳೆಯಾಗುವ ಸಾಧ್ಯತೆ ಶೇ.1ರಷ್ಟಿದೆ. ತೇವಾಂಶವು 68% ಆಗಿರುತ್ತದೆ.

ಪಿಚ್​ ಪರಿಸ್ಥಿತಿ ಹೇಗಿದೆ?

ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾ ಪಂದ್ಯ ನಡೆಯುತ್ತದೆ. ಈ ಕ್ರೀಡಾಂಗಣವು 34 ಟಿ 20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು 16 ಪಂದ್ಯಗಳನ್ನು ಗೆದ್ದಿದ್ದರೆ, ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು 16 ಪಂದ್ಯಗಳನ್ನು ಗೆದ್ದಿವೆ.

ಇದನ್ನೂ ಓದಿ: T20 World Cup 2024 : ಗೆಲುವು ಬೋನಸ್​ ಎನ್ನುತ್ತಿರುವ ಬಾಂಗ್ಲಾವನ್ನು ಮಟ್ಟ ಹಾಕುವುದೇ ಭಾರತ?

ಕ್ರೀಡಾಂಗಣದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತ 122 ಆಗಿದ್ದರೆ, ಸರಾಸರಿ ಎರಡನೇ ಇನ್ನಿಂಗ್ಸ್ ಮೊತ್ತ 105 ಆಗಿದೆ. ಐಸಿಸಿ ಟಿ 20 ವಿಶ್ವಕಪ್ 2024 ರ ಹಿಂದಿನ ಪಂದ್ಯದಲ್ಲಿ ಯುಎಸ್ಎ ವಿರುದ್ಧ ದಕ್ಷಿಣ ಆಫ್ರಿಕಾ 194/4 ಸ್ಕೋರ್ ಮಾಡಿದೆ. ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣವನ್ನು ಕಡಿಮೆ ಸ್ಕೋರಿಂಗ್ ಕ್ರೀಡಾಂಗಣ ಎಂದು ಕರೆಯಬಹುದು. ಏಕೆಂದರೆ 34 ಟಿ 20 ಐ ಪಂದ್ಯಗಳ ನಂತರವೂ ಯಾವುದೇ ತಂಡವು 200 ಕ್ಕೂ ಹೆಚ್ಚು ಮೊತ್ತ ದಾಖಲಿಸಿಲ್ಲ. ಪಿಚ್ ಅನ್ನು ಬೌಲಿಂಗ್ ಸ್ನೇಹಿ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಬ್ಯಾಟರ್​ಗಳು ರನ್ ಗಳಿಸಲು ಕಷ್ಟಪಡುತ್ತಾರೆ. ವೇಗಿಗಳಿಗಿಂತ ಸ್ಪಿನ್ನರ್ ಗಳು ಹೆಚ್ಚು ಅನುಕೂಲ ಪಡೆಯುತ್ತಾರೆ.

ಹವಾಮಾನದ ಪರಿಣಾಮ ಇದೆಯೇ?

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸೂಪರ್ 8 ಪಂದ್ಯವು ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ ನಡೆಯುತ್ತದೆ. ಈ ಪಂದ್ಯದ ವೇಳೆ ಮಳೆ ಬೀಳುವ ಸಾಧ್ಯತೆ ಕೇವಲ ಶೇ.1ರಷ್ಟಿದೆ. ಆದ್ದರಿಂದ, ಮಳೆಯಿಂದಾಗಿ ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಅದೇ ರೀತಿ ಇಬ್ಬನಿ ಸೇರಿದಂತೆ ಬೇರೆ ಯಾವುದೇ ರೀತಿಯ ಹವಾಮಾನವು ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ, ಡಿಎಲ್ಎಸ್ ಜಾರಿಗೆ ಬರುವ ಬಗ್ಗೆ ಎರಡೂ ತಂಡಗಳ ಆಟಗಾರರು ಒತ್ತಡ ಮುಕ್ತರಾಗಬಹುದು.

Exit mobile version