Site icon Vistara News

T20 World Cup : ಆಸ್ಟ್ರೇಲಿಯಾ ವಿರುದ್ಧ 24 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡ ಭಾರತ

Rohit Sharma

ಸೇಂಟ್​ ಲೂಸಿಯಾ: ರೋಹಿತ್ ಶರ್ಮಾ ಅವರ (92 ರನ್​, 41 ಎಸೆತ, 8 ಸಿಕ್ಸರ್, 7 ಫೋರ್​) ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ಟಿ20 ವಿಶ್ವ ಕಪ್​ನ 2024ನೇ (T20 World Cup) ಆವೃತ್ತಿಯ ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ದ (IND vs AUS) 24 ರನ್​ಗಳ ಗೆಲುವು ದಾಖಲಿಸಿತು. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಹಾಗೂ 2023ರ ಏಕ ದಿನ ವಿಶ್ವ ಕಪ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು. ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ತಂಡದ ಟಿ 20 ವಿಶ್ವ ಕಪ್​ ಸೆಮಿಫೈನಲ್ ಹಾದಿ ಕಠಿಣಗೊಂಡಿತು. ಇದೇ ವೇಳೆ ಟಿ20 ವಿಶ್ವ ಕಪ್​​ನಲ್ಲಿ ಭಾರತ ತಂಡದ ಅಜೇಯ ಓಟ ಮುಂದುವರಿಯಿತು. ಸೂಪರ್​ 8 ಹಂತದಲ್ಲಿ ಗುಂಪು ಎ ಯಿಂದ ಒಟ್ಟು ಮೂರು 3 ಗೆಲುವಿನೊಂದಿಗೆ 6 ಅಂಕಗಳ ಸಮೇತ ಸೆಮಿಫೈನಲ್​​ಗೆ ಪ್ರವೇಶ ಪಡೆಯಿತು.

ಇಲ್ಲಿನ ಡ್ಯಾರೆನ್​ ಸಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್​ ನಷ್ಟಕ್ಕೆ 205 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತನ್ನ ಪಾಲಿನ 20 ಒವರ್​ಗಳಲ್ಲಿ 7 ವಿಕೆಟ್​ಗೆ 181 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಗುರಿ ಬೆನ್ನಟ್ಟಲು ಹೊರಟ ಆಸ್ಟ್ರೇಲಿಯಾ 6 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಡೇವಿಡ್​ ವಾರ್ನರ್​ 6 ರನ್ ಬಾರಿಸಿ ಅರ್ಶ್​ದೀಪ್​ಗೆ ವಿಕೆಟ್​ ಒಪ್ಪಿಸಿದರು. ಆದರೆ, ನಂತರದಲ್ಲಿ ಟ್ರಾವಿಸ್​ ಹೆಡ್​ (76ರನ್​ ) ಹಾಗೂ ಮಿಚೆಲ್ ಮಾರ್ಷ್​ (37 ರನ್​) ರನ್ ವೇಗ ಕುಸಿಯದಂತೆ ನೋಡಿಕೊಂಡರು. ಟ್ರಾವಿಸ್ ಹೆಡ್​ ಹೋರಾಟ ನಡೆಸಿದ ಭಾರತ ತಂಡದಿಂದ ಗೆಲುವು ಕಸಿಯಲು ಯತ್ನಿಸಿದರು. ಅದರೆ, ಕುಲ್ದೀಪ್​ ಯಾದವ್​ (2 ವಿಕೆಟ್​), ಅರ್ಶ್​ದೀಪ್​ ಸಿಂಗ್​ (3 ವಿಕೆಟ್​) ಆಸೀಸ್ ತಂಡದ ಓಟಕ್ಕೆ ತಡೆಯೊಡ್ಡಿತು. ಮ್ಯಾಕ್ಸ್​ವೆಲ್​ 20 ರನ್ ಬಾರಿಸಿದರೆ, ಟಿಮ್ ಡೇವಿಡ್​ 15 ರನ್ ಬಾರಿಸಿದರು.

ಭಾರತದ ಉತ್ತಮ ಬ್ಯಾಟಿಂಗ್​

ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಘಾತ ಕೊಟ್ಟಿದ್ದು ವಿರಾಟ್ ಕೊಹ್ಲಿ. ಐದು ಎಸೆತಗಳನ್ನು ಎದುರಿಸಿದ ಅವರು ಶೂನ್ಯಕ್ಕೆ ಔಟಾಗಿ ಬೇಸರ ಮೂಡಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ರನ್ ಪೇರಿಸುತ್ತಲೇ ಹೋದರು. ಭಾರತ ಕೇವಲ 29 ಎಸೆತಗಳಲ್ಲಿ 50 ರನ್ ಬಾರಿಸಿದರೆ ಬಳಿಕ ರೋಹಿತ್ ಶರ್ಮಾ 19 ಎಸೆತಕ್ಕೆ ಅರ್ಧ ಶತಕ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್​ ಪಂತ್​ 14 ಎಸೆತಕ್ಕೆ 15 ರನ್ ಬಾರಿಸಿದರು. ಆದರೆ, ನಂತರ ಆಡಲು ಬಂದ ಸೂರ್ಯಕುಮಾರ್​ ಯಾದವ್​ ರೋಹಿತ್ ಶರ್ಮಾಗೆ ಉತ್ತಮ ಬೆಂಬಲ ಕೊಟ್ಟರು. ಆದರೆ, ಅವರು 16 ಎಸೆತಕ್ಕೆ 36 ರನ್ ಬಾರಿಸಿ ಔಟಾದರು.

ಇದನ್ನೂ ಓದಿ: Rohit Sharma : ಆಸ್ಟ್ರೇಲಿಯಾದ ವೇಗಿ ​ ಸ್ಟಾರ್ಕ್​ ಬೆಂಡೆತ್ತಿದ ರೋಹಿತ್​; ಒಂದೇ ಓವರ್​​ನಲ್ಲಿ 29 ರನ್​

ಸೂರ್ಯ ಔಟಾಗುತ್ತಿದ್ದಂತೆ ಭಾರತದ ಸ್ಕೋರ್ ಗಳಿಕೆ ನಿಧಾನಗೊಂಡಿತು. ಆದಾಗ್ಯೂ ಶಿವಂ ದುಬೆ 1 ಸಿಕ್ಸರ್ ಹಾಗೂ 2 ಫೋರ್ ಸಮೇತ 28 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಔಟಾಗದೇ 17 ಎಸೆತಕ್ಕೆ 27 ರನ್ ಬಾರಿಸಿದರು. ರವೀಂದ್ರೆ ಜಡೇಜಾ 5 ಎಸೆತಕ್ಕೆ 9 ರನ್ ಬಾರಿಸಿದರು.

Exit mobile version