Site icon Vistara News

T20 World Cup 2024 : ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಸಿಗಲಿದೆ ಪ್ರಧಾನಿ ಮೋದಿಯ ಭರ್ಜರಿ ಆತಿಥ್ಯ

T20 World Cup

ನವದೆಹಲಿ: ವೆಸ್ಟ್ ಇಂಡೀಸ್​ನಲ್ಲಿ ನಡೆದ ಟಿ 20 ವಿಶ್ವಕಪ್ (T20 World Cup 2024) ಪ್ರಶಸ್ತಿ ಗೆಲುವಿನ ನಂತರ ದೇಶಕ್ಕೆ ಮರಳಲಿರುವ ಚಾಂಪಿಯನ್ ಆಟಗಾರರಿಗೆ ಪ್ರಧಾನಿ ಮೋದಿ ಭರ್ಜರಿ ಆತಿಥ್ಯ ನೀಡುವ ಸಾಧ್ಯತೆಗಳಿವೆ ಎಂಬುದಾಗಿ ವರದಿಯಾಗಿದೆ. ಅವರೆಲ್ಲರೂ ವೆಸ್ಟ್​​ ಇಂಡೀಸ್​ನಿಂದ ಭಾರತಕ್ಕೆ ಬಂದ ಬಳಿಕ ಮೋದಿಯವನ್ನು ಭೇಟಿಯಾಗಿ ಸಂಭ್ರಮ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಟೀಮ್ ಇಂಡಿಯಾ ಆಟಗಾರರ ಸಭೆ ಯೋಜಿಸುತ್ತಿದ್ದಾರೆ. ಆಟಗಾರರ ನಿಯೋಗ ಭಾರತದಲ್ಲಿ ಜತೆಯಾದ ಬಳಿಕ ಈ ಭೇಟಿ ಸಂಭವಿಸಲಿದೆ.

ಈ ಸಂಭ್ರಮ ಕೂಟದಲ್ಲಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಹೊರತುಪಡಿಸಿ ಹೆಚ್ಚಿನ ಆಟಗಾರರು ಭಾಗವಹಿಸವ ನಿರೀಕ್ಷೆಯಿದೆ. ಸ್ಯಾಮ್ಸನ್, ಜೈಸ್ವಾಲ್ ಮತ್ತು ದುಬೆ ಮುಂಬರುವ ಜಿಂಬಾಬ್ವೆ ವಿರುದ್ಧದ ಟಿ 20 ಐ ಸರಣಿಗೆ ಭಾರತದ ತಂಡದ ಭಾಗವಾಗಿದ್ದಾರೆ. ಭಾರತ-ಜಿಂಬಾಬ್ವೆ ನಡುವಿನ ಸರಣಿ ಜುಲೈ 6ರಿಂದ ಹರಾರೆಯಲ್ಲಿ ಆರಂಭವಾಗಲಿದೆ. ಅವರು ನೇರವಾಗಿ ವಿಂಡೀಸ್​ನಿಂದ ಅಲ್ಲಿಗೆ ತೆರಳಲಿದ್ದಾರೆ.

ಶನಿವಾರ ನಡೆದ ಟಿ 20 ವಿಶ್ವಕಪ್ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಳು ರನ್​ಗಳ ಜಯ ಸಾಧಿಸಿದ ನಂತರ ಪ್ರಧಾನಿ ಮೋದಿ, ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಬ್ಯಾಟರ್​ ವಿರಾಟ್ ಕೊಹ್ಲಿ ಅವರೊಂದಿಗೆ ಮಾತನಾಡಿದ್ದರು. ಅವರೆಲ್ಲರಿಗೂ ದೇಶದ ಜನತೆಯ ಪರವಾಗಿ ಶುಭಾಶಯ ಹೇಳಿದ್ದರು.

ಇದನ್ನೂ ಓದಿ:Virat kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಕೊಹ್ಲಿ, ರೋಹಿತ್ ದಾಖಲೆಗಳ ಕಂಪ್ಲೀಟ್‌ ಡಿಟೇಲ್ಸ್‌!

ನವದೆಹಲಿ: 2024 ರ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ವೆಸ್ಟ್ ಇಂಡೀಸ್ನಿಂದ ಹಿಂದಿರುಗಿದ ನಂತರ ಭಾರತೀಯ ಕ್ರಿಕೆಟ್ ತಂಡವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಜಿಂಬಾಬ್ವೆ ವಿರುದ್ಧದ ಐದು ಟಿ 20 ಪಂದ್ಯಗಳಿಂದಾಗಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಮಾತ್ರ ಅಲಭ್ಯರಾಗಿರುವುದರಿಂದ ಹೆಚ್ಚಿನ ಆಟಗಾರರು ಹಾಜರಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಅದಕ್ಕಿಂತ ಹಿಂದೆ ಭಾರತ ಕಪ್​ ಗೆದ್ದ ತಕಷಣ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್​ನಲ್ಲಿ ಸರಣಿ ಪೋಸ್ಟ್​​ನಲ್ಲಿ ಪಿಎಂ ಮೋದಿ ತಂಡವನ್ನು ಶ್ಲಾಘಿಸಿದ್ದರು.

ಚಾಂಪಿಯನ್ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ

ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರಲ್ಲಿ (T20 World Cup 2024 ) ಚಾಂಪಿಯನ್ ಪಟ್ಟ ಅಲಂಕರಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಬಾರ್ಬಡೋಸ್​​ನಲ್ಲಿ ಶನಿವಾರ ನಡೆದ ವಿಶ್ವ ಕಪ್​ನ ಫೈನಲ್​ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸುವ ಮೂಲಕ ಭಾರತೀಯ ಪುರುಷರ ಕ್ರಿಕೆಟ್ ತಂಡವು ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಅಲ್ಲದೇ ಎರಡನೇ ಬಾರಿ ಟಿ20 ವಿಶ್ವ ಕಪ್​ ಗೆದ್ದುಕೊಂಡಿತು. 2007ರಲ್ಲಿ ಧೋನಿ ನೇತೃತ್ವದಲ್ಲಿ ಭಾರತ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಕಪ್​ ಗೆದ್ದುಕೊಂಡಿತ್ತು.

Exit mobile version