Site icon Vistara News

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತ ವಿಕೆಟ್​ ನಷ್ಟವಿಲ್ಲದೆ 100 ರನ್​; ಭವಿಷ್ಯ ನುಡಿದ ಬ್ರಿಯಾನ್ ಲಾರಾ

T20 world cup

ಆಂಟಿಗುವಾ: ಟಿ20 ವಿಶ್ವ ಕಪ್​ನಲ್ಲಿ (T20 World Cup 2024) ಭಾರತ ತಂಡ ವಿಶ್ವಾಸದಿಂದ ಮುನ್ನುಗ್ಗುತ್ತಿದೆ. ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಜೂನ್ 22ರಂದು ಬಾಂಗ್ಲಾದೇಶ ವಿರುದ್ಧದ ಭಾರತದ (IND vs BAN) ಸೂಪರ್ 8 ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯ ಹೆಚ್ಚು ಕುತೂಹಲ ಮೂಡಿಸಿದೆ. ಭಾರತ ಗೆದ್ದರೆ ನೇರವಾಗಿ ಸೆಮಿಫೈನಲ್​ ಪ್ರವೇಶ ಮಾಡಲಿದೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್​ ತಂಡದ ದಂತಕತೆ ಬ್ರಿಯಾನ್ ಲಾರಾ ಪಂದ್ಯದ ಕುರಿತು ದಿಟ್ಟ ಭವಿಷ್ಯ ನುಡಿದಿದ್ದಾರೆ. ಭಾರತವು ಯಾವುದೇ ವಿಕೆಟ್ ಕಳೆದುಕೊಳ್ಳದೆ ನೂರು ರನ್ ಗಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ವೈಫಲ್ಯ ಕೊನೆಯಾಗಲಿದೆ. ಅವರು ರನ್​ ಗಳಿಸಲಿದ್ದಾರೆ ಎಂಬುದು ಲಾರಾ ಅವರ ಭವಿಷ್ಯವಾಣಿಯಾಗಿದೆ. 2024 ರ ಟಿ 20 ವಿಶ್ವಕಪ್​ನಲ್ಲಿ ಭಾರತ ತಂಡದ ಇಬ್ಬರು ದಿಗ್ಗಜರ ಫಾರ್ಮ್ ದೊಡ್ಡ ಚರ್ಚೆಗೆ ಕಾರಣವಾಗಿದೆ. ಭಾರತದ ಅಜೇಯ 4 ಪಂದ್ಯಗಳ ಗೆಲುವಿನ ಹೊರತಾಗಿಯೂ, ರೋಹಿತ್ ಮತ್ತು ಕೊಹ್ಲಿ ಇನ್ನೂ ಬ್ಯಾಟಿಂಗ್​ನಲ್ಲಿ ಮಿಂಚಿಲ್ಲ ಎಂಬುದೇ ಚಿಂತೆಯಾಗಿದೆ.

ರೋಹಿತ್ ನಾಲ್ಕು ಇನ್ನಿಂಗ್ಸ್​​ಗಳಲ್ಲಿ 111.76 ಸ್ಟ್ರೈಕ್ ರೇಟ್​ನಲ್ಲಿ 19.00 ಸರಾಸರಿಯಲ್ಲಿ ಕೇವಲ 76 ರನ್ ಗಳಿಸಿದ್ದರೆ, ಕೊಹ್ಲಿ 7.25 ಸರಾಸರಿಯಲ್ಲಿ 29 ರನ್ ಗಳಿಸಿದ್ದಾರೆ. ಆದಾಗ್ಯೂ ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್ ಅವರಂಥ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಮತ್ತು ಬೌಲರ್​​ಗಳ ಸಾಂಘಿಕ ಪ್ರಯತ್ನದೊಂದಿಗೆ ಗೆಲುವು ಕಾಣುತ್ತಿದೆ.

ಇದನ್ನೂ ಓದಿ: T20 World Cup 2024 : ವೆಸ್ಟ್​ ಇಂಡೀಸ್​​ನಲ್ಲಿ ಹಲಾಲ್​ ಮಾಂಸದೂಟ ಸಿಗದ್ದಕ್ಕೆ ತಾವೇ ಅಡುಗೆ ಮಾಡಿಕೊಳ್ಳುತ್ತಿರುವ ಅಫಘಾನಿಸ್ತಾನದ ಕ್ರಿಕೆಟಿಗರು !

ಪಂದ್ಯಾವಳಿಯ ಸೆಮಿಫೈನಲ್ ಕಡೆಗೆ ಭಾರತ ತಂಡ ಮುನ್ನುಗ್ಗುತ್ತಿರುವ ರೀತಿಗೆ ಲಾರಾ ಪ್ರಭಾವಿತರಾಗಿದ್ದಾರೆ. ಬಾಂಗ್ಲಾದೇಶವು ಭಾರತಕ್ಕೆ ಸೆಡ್ಡು ಹೊಡೆಯಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಕೊಹ್ಲಿ ಮತ್ತು ರೋಹಿತ್ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಬಗ್ಗೆ ಜಾಗರೂಕರಾಗಿರುವುದು ಉತ್ತಮ ಎಂದು ಸಲಹೆ ಕೊಟ್ಟಿದ್ದಾರೆ.

ಸೂಪರ್​ 8 ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿದರೆ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸುವುದು ಖಚಿತ. ಅವರು 2ನೇ ಬ್ಯಾಟಿಂಗ್ ಮಾಡಿದರೂ 100 ರನ್ ಗಳಿಸಲಿದ್ದಾರೆ. ಭಾರತ ತಂಡ ತುಂಬಾ ಬಲಿಷ್ಠವಾಗಿದೆ. ಈ ಸಮಯದಲ್ಲಿ ಪ್ರತಿ ತಂಡವನ್ನು ಸೋಲಿಸುತ್ತಿದ್ದಾರೆ. ಆದರೆ ಆರಂಭಿಕ ಪಾಲುದಾರಿಕೆ ಬಗ್ಗೆ ಭಾರತವು ತುಂಬಾ ಕಾಳಜಿಯಾಗಿದೆ. ಆದರೆ ಬಾಂಗ್ಲಾದೇಶವು ಬೆದರಿಕೆಯಾಗುವುದಿಲ್ಲ, “ಎಂದು ಲಾರಾ ಹೇಳಿದ್ದಾರೆ.

ರೋಹಿತ್ ಹಲವು ವರ್ಷಗಳಿಂದ ಎಡಗೈ ಬೌಲರ್​ಗಳ ವಿರುದ್ಧ ಸಾಕಷ್ಟು ಹೋರಾಟ ನಡೆಸಿದ್ದಾರೆ. ಟಿ 20 ವಿಶ್ವಕಪ್ 2024 ರಲ್ಲಿ ಎಡಗೈ ವೇಗದ ಬೌಲರ್ ವಿರುದ್ಧ ಆರಂಭಿಕ ಬ್ಯಾಟರ್​​ ಎಲ್ಲಾ 4 ಬಾರಿ ಔಟ್ ಆಗಿದ್ದಾರೆ. ಈ ಬಾರಿ ಬಾಂಗ್ಲಾದೇಶ ವಿರುದ್ಧದ ಸವಾಲನ್ನು ಜಯಿಸಲು ಎದುರು ನೋಡುತ್ತಿದ್ದಾರೆ.

ಫಾರ್ಮ್​​ ಮರಳುತ್ತಾರಾ ರೋಹಿತ್-ಕೊಹ್ಲಿ ಜೋಡಿ

ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಫಾರ್ಮ್ ಭಾರತಕ್ಕೆ ಆತಂಕಕಾರಿಯಾಗಬಾರದು ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ. ಬಾಂಗ್ಲಾದೇಶದ ವಿರುದ್ಧ ರನ್ ಗಳಿಸಲು ಆರಂಭಿಕ ಜೋಡಿಯನ್ನು ಬೆಂಬಲಿಸಿದ್ದಾರೆ.

ಭಾರತ ತಂಡವು ಉತ್ತಮ ಆರಂಭಿಕ ಜತೆಯಾಟವನ್ನು ನಿರೀಕ್ಷಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ಈ ವಿಶ್ವಕಪ್​​ನಲ್ಲಿ ಪಿಚ್​ಗಳ ಸ್ಥಿತಿಯಿಂದಾಗಿ ಯಾವುದೇ ತಂಡವು ಹೆಚ್ಚು ಪ್ರಾಬಲ್ಯ ಹೊಂದಿಲ್ಲ. ಭಾರತವು ಆರಂಭಿಕ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾದರೆ ಭಾರತವೇ ಉತ್ತಮ ತಂಡ ಎಂದು ಹೇಳಿದ್ದಾರೆ.

Exit mobile version