ಬೆಂಗಳೂರು : ಗುರುವಾರವಷ್ಟೇ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಮೆರಿಕ ತಂಡ ಟಿ20 ಕ್ರಿಕೆಟ್ ವಿಶ್ವ ಕಪ್ನಲ್ಲಿ ಐತಿಹಾಸಿಕ ವಿಜಯವೊಂದನ್ನು ದಾಖಲಿಸಿತ್ತು. ಇದೀಗ ಶುಕ್ರವಾರ ನಡೆದ ಪಂದ್ಯದಲ್ಲಿ ಕೆನಡಾ ತಂಡ ಟೂರ್ನಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಗೆಲುವು ದಾಖಲಿಸಿದೆ. ಈ ತಂಡವು ತನಗಿಂತ ಸ್ವಲ್ಪ ಮಟ್ಟಿಗೆ ಬಲಿಷ್ಠವಾಗಿರುವ ಐರ್ಲೆಂಡ್ ವಿರುದ್ಧ ವಿಜಯ ಸಾಧಿಸಿದೆ.
ನ್ಯೂಯಾರ್ಕ್‌ನ ನಸ್ಸೌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 7ರ ಶುಕ್ರವಾರ ನಡೆದ ಪಂದ್ಯದಲ್ಲಿ ಕೆನಡಾ ತಂಡ 12 ರನ್ಗಳ ವಿಜಯ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಕೆನಡಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 137 ರನ್ ಬಾರಿಸಿತ್ತು. ಪ್ರತಿಯಾಗಿ ಆಡಿದ ಐರ್ಲೆಂಡ್ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿ ಸೋಲೋಪ್ಪಿಕೊಂಡಿತು. ಇದು ಕೂಡ ಟೂರ್ನಿಯ ಜಿದ್ದಾಜಿದ್ದಿನ ಪಂದ್ಯ ಎನಿಸಿಕೊಂಡಿತು.
Canada WIN in New York! 🇨🇦
— T20 World Cup (@T20WorldCup) June 7, 2024
A superb bowling performance from them against Ireland sees them register their first Men's #T20WorldCup win 👏#CANvIRE | 📝: https://t.co/CxIp7x4F2q pic.twitter.com/OR5JFjG0qj
ಕೆನಡಾ ತಂಡ ಪರ ಅ್ಯರೋನ್ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಬ್ಯಾಟಿಂಗ್ ಆರಂಭಿಸಿದರು. ಆದರೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಮೊದಲ ವಿಕೆಟ್‌ಗೆ ಕೇವಲ 12 ರನ್‌ಗಳನ್ನು ದಾಖಲಾಯಿತು. ಧಲಿವಾಲ್ ಆರು ರನ್ ಗೆ ಔಟಾದರು. ಬಳಿಕ ಪರ್ಗತ್ ಸಿಂಗ್ 18 ರನ್ ಗಳಿಸಿ ನಿರ್ಗಮಿಸಿದರು. ಅತ್ತ ಜಾನ್ಸನ್ ಮೂರು ಬೌಂಡರಿಗಳ ನೆರವಿನಿಂದ 14 ರನ್ ಗಳಿ ಪೆವಿಲಿಯನ್ಗೆ ಮರಳಿದರು. ಜಾನ್ಸನ್ ಔಟಾದ ನಂತರ ಕ್ರೀಸ್ಗೆ ಇಳಿದ ದಿಲ್‌ಪ್ರೀತ್ ಬಾಜ್ವಾ 7 ರನ್ ಔಟಾದರು. ಬಳಿಕ ನಿಕೋಲಸ್ ಕಿರ್ಟನ್ ಮೊವ್ವಾ ಉತ್ತಮ ಜೊತೆಯಾಟವಾಡಿದರು. 15.2 ಓವರ್‌ಗಳಲ್ಲಿ ತಂಡ 100 ರನ್ ಗಳಿಸಿತು. ಏತನ್ಮಧ್ಯೆ ಮೆಕಾರ್ಥಿ ಎಸೆದ 19ನೇ ಓವರ್‌ನಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡಿತು. 35 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸಹಿತ 49 ರನ್ ಗಳಿಸಿದ್ದ ಕಿರ್ಟನ್ 1 ರನ್ನಿಂದ ಅರ್ಧ ಶತಕದ ಅವಕಾಶ ನಷ್ಟ ಮಾಡಿಕೊಂಡರು. ಆದಾಗ್ಯೂ ತಂಡ ಪರ ಗರಿಷ್ಠ ಮೊತ್ತ ಬಾರಿಸಿದರು. ಮೊವ್ವ 36 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 37 ರನ್ ಗಳಿಸಿದರು.
ಇದನ್ನೂ ಓದಿ : T20 World Cup : ಪಾಕಿಸ್ತಾನ ತಂಡದ ಅಮೆರಿಕ ವಿರುದ್ಧ ಸೋತಿದ್ದು ಐಎಮ್ಎಫ್ ನೀಡುವ 80 ಕೋಟಿ ಸಾಲಕ್ಕಾಗಿ!
ಐರ್ಲೆಂಡ್ ಬೌಲಿಂಗ್ನಲ್ಲಿ ಯಂಗ್ ಮತ್ತು ಮೆಕಾರ್ಥಿ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್ನಲ್ಲಿ ಅನುಕ್ರಮವಾಗಿ 32 ಮತ್ತು 24 ರನ್ ಬಿಟ್ಟುಕೊಟ್ಟು ತಲಾ ಎರಡು ವಿಕೆಟ್ ಪಡೆದರು. ಅದೈರ್ ಮತ್ತು ಡೆಲಾನಿ ತಲಾ ಒಂದು ವಿಕೆಟ್ ಕಬಳಿಸಿದರು.
ಐರ್ಲೆಂಡ್ ಚೇಸಿಂಗ್ ಫೇಲ್
ಗುರಿ ಬೆನ್ನಟ್ಟಲು ಶುರು ಮಾಡಿದ ಐರ್ಲೆಂಡ್ ಸತತವಾಗಿ ಮೇಲೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಪೌಲ್ ಸ್ಟಿರ್ಲಿಂಗ್ ವಿಫಲರಾಗಿ ಕೇವಲ 9 ರನ್ ಗಳಿಸಿ ಔಟಾದರು. ಬಾಲ್ಬಿರ್ನಿ ಕೊಡುಗೆ 17 ರನ್. ಹ್ಯಾರಿ ಟೆಕ್ಟರ್ 7 ರನ್ ಗಳಿಸಿದರೆ, ಲೋರ್ಕನ್ ಟಕರ್ 10 ರನ್ ಗಳಿಸಿ ನಿರ್ಗಮಿಸಿದರು. ಕರ್ಟಿಸ್ ಕ್ಯಾಂಫರ್ 4 ರನ್‌ಗೆ ಸೀಮಿತಗೊಂಡರು. ದಿಢೀರನೆ ಕುಸಿತ ಕಂಡ ತಂಡಕ್ಕೆ ಡಾಕ್ರೆಲ್ ಹಾಗೂ ಮಾರ್ಕ್ ಅಡೈರ್ ಆಸರೆಯಾದರು. ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು. ಆದರೆ, ಕೆನಡಾ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಕೊನೇ ಓವರ್‌ನಲ್ಲಿ 17 ರನ್ ಗೆಲುವಿಗೆ ಬೇಕಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.