ಬೆಂಗಳೂರು: ಕುಲದೀಪ್ ಯಾದವ್ ಅವರ ಬಾಲ್ಯದ ತರಬೇತುದಾರ ಕಪಿಲ್ ದೇವ್ ಪಾಂಡೆ ಭಾರತವೇ ವಿಶ್ವ ಕಪ್ ಗೆಲ್ಲುತ್ತದೆ (T20 World cup) ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಹಾಲಿ ಆವೃತ್ತಿಯಲ್ಲಿ ಕುಲ್ದೀಪ್ ಯಾದವ್ ಅವರ ಪ್ರದರ್ಶನವನ್ನೂ ಮೆಚ್ಚಿದ್ದಾರೆ. ನ್ಯೂಯಾರ್ಕ್ನಲ್ಲಿ ವೇಗದ ಬೌಲಿಂಗ್ಗೆ ಪೂರಕ ಪಿಚ್ ಇದ್ದ ಕಾರಣ ಯುಎಸ್ಎಯಲ್ಲಿ ಆಡಿದ ಪಂದ್ಯಾವಳಿಯ ಗುಂಪು ಹಂತಗಳ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ವಿಂಡೀಸ್ನಲ್ಲಿ ನಡೆದ ಸೂಪರ್ 8 ಹಂತದಲ್ಲಿ ಅವರಿಗೆ ಅವಕಾಶಗಳು ಲಭಿಸಿವೆ.
ಅಲ್ಲಿಂದೀಚೆಗ, ಸ್ಪಿನ್ನರ್ ಹಿಂದೆ ಬಿದ್ದಿಲ್ಲ. ಭಾರತದ ಬೌಲಿಂಗ್ ವಿಭಾಗದಲ್ಲಿ ಭಾರತದ ಪ್ರಮುಖ ಅಸ್ತ್ರವಾಗಿ ಬಳಕೆಯಾದರು. ಮಧ್ಯಮ ಓವರ್ಗಳಲ್ಲಿ ವಿಕೆಟ್ ಪಡೆಯುವ ಅವರ ಸಾಮರ್ಥ್ಯವು ಹೆಚ್ಚು ಎದ್ದು ಕಂಡಿತು. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ನಲ್ಲಿಯೂ ಅವರ ಪಾತ್ರ ನಿರ್ಣಾಯಕವಾಗಲಿದೆ. ಅಂತೆಯೇ ಕುಲದೀಪ್ ಯಾದವ್ ಅವರ ಬಾಲ್ಯದ ತರಬೇತುದಾರ ಕಪಿಲ್ದೇವ್ ಪಾಂಡೆ, ತಮ್ಮ ನೆಚ್ಚಿನ ಆಟಗಾರನನ್ನು ತಂಡದ ಬೆನ್ನೆಲುಬು ಎಂದು ಕರೆದಿದ್ದಾರೆ. ಅವರು ತಮ್ಮ ದೇಶಕ್ಕಾಗಿ ಪ್ರದರ್ಶನ ನೀಡುತ್ತಿರುವ ವಿಧಾನದ ಬಗ್ಗೆ ಹೆಮ್ಮೆಪಟ್ಟರು.
🇮🇳♥️ pic.twitter.com/8tLJTgtFtN
— Kuldeep yadav (@imkuldeep18) June 28, 2024
ನಿಸ್ಸಂಶಯವಾಗಿ ಅವರು (ಕುಲ್ದೀಪ್) ಭಾರತೀಯ ತಂಡದ ಬೆನ್ನೆಲುಬು. ಕಳೆದ ನಾಲ್ಕು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಯಾವ ರೀತಿಯ ಆಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ದೇಶಕ್ಕಾಗಿ ಪ್ರದರ್ಶನ ನೀಡುವುದನ್ನು ನೋಡಲು ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ ಎಂದು ಕಪಿಲ್ ದೇವ್ ಪಾಂಡೆ ಹೇಳಿದರು.
ಕುಲದೀಪ್ ಯಾದವ್ ಆಡಿರುವ ನಾಲ್ಕು ಪಂದ್ಯಗಳಲ್ಲಿ 9.40ರ ಸರಾಸರಿಯಲ್ಲಿ 5.87ರ ಎಕಾನಮಿ ರೇಟ್ನಲ್ಲಿ 10 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ 19 ರನ್ಗೆ 3 ವಿಕೆಟ್ ಪಡೆದು ಭಾರತ ಫೈನಲ್ ಪ್ರವೇಶಿಸಲು ಸಹಾಯ ಮಾಡಿದ್ದರು. ಎಡಗೈ ಮಣಿಕಟ್ಟು ಸ್ಪಿನ್ನರ್ ಕಳೆದ ಒಂದು ವರ್ಷದಿಂದ ಆಟದ ಎಲ್ಲಾ ಸ್ವರೂಪಗಳಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲೂ ಕುಲ್ದೀಪ್ ನಿರ್ಣಾಯಕ ಪಾತ್ರ ವಹಿಸಿದ್ದರು.
ಭಾರತ ಬಲಿಷ್ಠ ತಂಡ
ಭಾರತ ತಂಡವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಅವರು ಪ್ರತಿ ತಂಡವನ್ನು ಸೋಲಿಸಿದ ನಂತರ ಟಿ 20 ವಿಶ್ವಕಪ್ ಫೈನಲ್ ತಲುಪಿದ್ದಾರೆ. ಇದು ಫೈನಲ್ ತಲುಪಿದ ಅತ್ಯುತ್ತಮ ಭಾರತೀಯ ಟಿ 20 ಐ ತಂಡಗಳಲ್ಲೊಂದು. ಈ ತಂಡವು 2007 ರ ಟಿ 20 ವಿಶ್ವಕಪ್ನ ವೈಭವವನ್ನು ಮರಳಿ ತರುತ್ತದೆ. 17 ವರ್ಷಗಳ ಬರಗಾಲವನ್ನು ಕೊನೆಗೊಳಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ಪಾಂಡೆ ಹೇಳಿದ್ದಾರೆ.
2007ರಲ್ಲಿ ಭಾರತ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಅಂದಿನಿಂದ, ಭಾರತವು ಒಮ್ಮೆ (2014 ರಲ್ಲಿ) ಮಾತ್ರ ಫೈನಲ್ ತಲುಪಿತ್ತು. ಆದರೆ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಸೋತಿತ್ತು. 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಮೆನ್ ಇನ್ ಬ್ಲೂ ತಂಡ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಲವು ಬಾರಿ ಸೆಮಿಫೈನಲ್ ಹಾಗೂ ಫೈನಲ್ ತಲುಪಿದ್ದರೂ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ಭಾರತದ ಟ್ರೋಫಿ ಬರವು ಈ ಬಾರಿ ಕೊನೆಗೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುವುದು ಆಸಕ್ತಿದಾಯಕ. ಆದರೆ ದಕ್ಷಿಣ ಆಫ್ರಿಕಾ ತಂಡದಿಂದ ಕಠಿಣ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ.