ಬೆಂಗಳೂರು: ಭಾರತ ಅಂಡರ್-19 ವಿಶ್ವ ಕಪ್ ವಿಜೇತ ತಂಡದ ನಾಯಕರಾಗಿದ್ದ ಉನ್ಮುಕ್ತ್ ಚಾಂದ್ಗೆ (Unmukth Chand) ಅದೃಷ್ಟ ಸದಾ ಕೈಕೊಡುತ್ತದೆ. ಭಾರತ ತಂಡದಲ್ಲಿ ಸ್ಥಾನ ಪಡೆಯದ ಅವರು ಐಪಿಎಲ್ನಲ್ಲಿ ಅವಕಾಶ ಪಡೆಯುವಲ್ಲೂ ಸೋತಿದ್ದರು. ಹೀಗಾಗಿ ಅವರು ಅವಕಾಶಗಳನ್ನು ಅರಸಿಕೊಂಡು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿನ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗುವುದು ಅವರ ಗುರಿಯಾಗಿತ್ತು. ಅದಕ್ಕೆ ತಕ್ಕ ಹಾಗೆ ಉತ್ತಮ ಪ್ರದರ್ಶನವನ್ನೂ ನೀಡಿದ್ದರು. ಆದಾಗ್ಯೂ ಅವರ ಭಾಗ್ಯದ ಬಾಗಿಲು ತೆರೆದಿಲ್ಲ. ಮುಂಬರುವ ವಿಶ್ವ ಕಪ್(T20 World Cup) ಯುಎಸ್ ತಂಡಕ್ಕೆ ಅವರು ಆಯ್ಕೆಯಾಗಿಲ್ಲ.
ವಿಶ್ವ ಕಪ್ನ ಸಹ-ಆತಿಥೇಯ ಅಮೆರಿಕ ಶುಕ್ರವಾರ (ಮೇ 3ಂದು) ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಚಾಂದ್ ಅವಕಾಶ ಪಡೆದಿಲ್ಲ. ನ್ಯೂಜಿಲೆಂಡ್ನ ಮಾಜಿ ಆಲ್ರೌಂಡರ್ ಕೋರಿ ಆ್ಯಂಡರ್ಸನ್ ಸೇರ್ಪಡೆ ತಂಡದ ಪ್ರಮುಖ ಅಂಶವಾಗಿದೆ. ವೇಗದ ಬೌಲಿಂಗ್ ಆಲ್ರೌಂಡರ್ 2015 ರಲ್ಲಿ ಏಕದಿನ ವಿಶ್ವಕಪ್ ಫೈನಲ್ಗೆ ಅರ್ಹತೆ ಪಡೆದ ನ್ಯೂಜಿಲೆಂಡ್ ತಂಡದ ಪ್ರಮುಖ ಸದಸ್ಯರಾಗಿದ್ದರು. 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ಪರ ಆಡುವಾಗ ಆ್ಯಂಡರ್ಸನ್ ಕೇವಲ 36 ಎಸೆತಗಳಲ್ಲಿ ಏಕದಿನ ಶತಕ ಬಾರಿಸಿದ್ದರು.
ಭಾರತದ ಮಾಜಿ ಅಂಡರ್ -19 ನಾಯಕ ಉನ್ಮುಕ್ತ್ ಚಾಂದ್ ಟಿ 20 ವಿಶ್ವಕಪ್ ಗಾಗಿ ಯುಎಸ್ಎ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಎಂಐಎಲ್ ಸಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಪಂದ್ಯಾವಳಿಯಲ್ಲಿ ಯುಎಸ್ಎಯನ್ನು ಪ್ರತಿನಿಧಿಸುವ ಭರವಸೆಯನ್ನು ಚಾಂದ್ ಹೊಂದಿದ್ದರು. ಎಂಐಎಲ್ನಲ್ಲಿ 3 ಋತುಗಳಲ್ಲಿ ಅವರು 45 ಇನ್ನಿಂಗ್ಸ್ಗಳಲ್ಲಿ 1500 ರನ್ ಗಳಿಸಿದ್ದರು. ಆದರೂ ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
ಯುಎಸ್ಎ ತಂಡ
ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮೊನಂಕ್ ಪಟೇಲ್ ಟಿ 20 ವಿಶ್ವಕಪ್ನಲ್ಲಿ ಯುಎಸ್ಎ ತಂಡವನ್ನು ಮುನ್ನಡೆಸಲಿದ್ದಾರೆ. ಯುಎಸ್ಎ ವೇಗದ ಬೌಲರ್ ಅಲಿ ಖಾನ್ ಈವೆಂಟ್ಗೆ ಫಿಟ್ ಆಗಿದ್ದಾರೆ. ಸ್ನಾಯುಸೆಳೆತದ ಗಾಯದಿಂದಾಗಿ ಖಾನ್ ಇತ್ತೀಚೆಗೆ ಕೆನಡಾ ವಿರುದ್ಧದ ಟಿ 20 ಐ ಸರಣಿಯಿಂದ ಹೊರಗುಳಿದಿದ್ದರು.
ಇದನ್ನೂ ಓದಿ: IPL 2024 : ರೋಹಿತ್ ಶರ್ಮಾ ಬೆಂಚು ಕಾಯುವಂತೆ ಮಾಡಿದ ಹಾರ್ದಿಕ್ ಪಾಂಡ್ಯ
ಖಾನ್ ಟಿ 20 ಕ್ರಿಕೆಟ್ ಅನುಭವವನ್ನು ಹೊಂದಿದ್ದಾರೆ. ಅವರು ವಿಶ್ವದಾದ್ಯಂತ ಹಲವಾರು ಟಿ 20 ತಂಡಗಳಿಗಾಗಿ ಆಡಿದ್ದಾರೆ. ಅವರು ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ನ ಭಾಗವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಬ್ಯಾಟರ್ ಸ್ಟೀವನ್ ಟೇಲರ್ ಅವರೊಂದಿಗೆ ಯುಎಸ್ಎ ಟಿ 20 ಐ ಆಟಗಾರ ಸೌರಭ್ ನೇತ್ರವಾಲ್ಕರ್ ಕೂಡ ತಂಡದಲ್ಲಿದ್ದಾರೆ.
‘ಎ’ ಗುಂಪಿನಲ್ಲಿ ಅಮೆರಿಕ, ಮಾಜಿ ಚಾಂಪಿಯನ್ ಭಾರತ, ಪಾಕಿಸ್ತಾನ, ಐರ್ಲೆಂಡ್ ಮತ್ತು ಕೆನಡಾ ತಂಡಗಳಿವೆ. ಸಹ-ಆತಿಥೇಯರು ಜೂನ್ 1 ರಂದು ಕೆನಡಾ ವಿರುದ್ಧ ಟಿ 20 ವಿಶ್ವಕಪ್ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2024: ಅಮೆರಿಕ ತಂಡ:
ಮೊನಂಕ್ ಪಟೇಲ್ (ನಾಯಕ), ಆರೋನ್ ಜೋನ್ಸ್ (ಉಪನಾಯಕ), ಆಂಡ್ರೀಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸಾರ್ಗ್ ಪಟೇಲ್, ನಿತೀಶ್ ಕುಮಾರ್, ನೊಶ್ತುಶ್ ಕೆಂಜಿಗೆ, ಸೌರಭ್ ನೇತ್ರಲ್ವಾಕರ್, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್. ಮೀಸಲು ಆಟಗಾರರು: ಗಜಾನಂದ್ ಸಿಂಗ್, ಜುವಾಯ್ ಡ್ರೈಸ್ಡೇಲ್, ಯಾಸಿರ್ ಮೊಹಮ್ಮದ್