Site icon Vistara News

T20 World Cup : ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಅಮೆರಿಕ ತಂಡ

T20 World Cup

ನವದೆಹಲಿ: ಐಸಿಸಿ ಟಿ 20 ವಿಶ್ವಕಪ್ (T20 World Cup) 2024 ರ 11 ನೇ ಪಂದ್ಯದಲ್ಲಿ ಯುಎಸ್ಎ ಗುರುವಾರ (ಜೂನ್ 7) ಪಾಕಿಸ್ತಾನ ತಂಡವನ್ನು ಸೂಪರ್​ ಓವರ್​ನಲ್ಲಿ ಸೋಲಿಸಿತು. ಈ ಮೂಲಕ ವಿಶೇಷ ದಾಖಲೆಯೊಂದನ್ನು ಬರೆಯಿತು. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಸರಣಿ ಗೆಲುವು ಮತ್ತು ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಕೆನಡಾ ವಿರುದ್ಧದ ಪ್ರಭಾವಶಾಲಿ ವಿಜಯದ ನಂತರ ನಂತರ ಅಮೆರಿಕ ತಂಡ ಮತ್ತೊಂದು ಬಾರಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಎಂದು ಕ್ರಿಕೆಟ್ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಪಾಕಿಸ್ತಾನ ತಂಡವನ್ನು ಸೋಲಿಸಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಪಾಕ್ ತಂಡವನ್ನು ಕ್ಯಾರೇ ಅನ್ನದೇ ಸುಲಭವಾಗಿ ಜಯ ಗಳಿಸಿತು. ಈ ಮೂಲಕ ಸತತವಾಗಿ ಎರಡು ವಿಜಯವನ್ನು ಪಡೆದು ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿತು.

ಪಾಕಿಸ್ತಾನವನ್ನು 7 ವಿಕೆಟ್ ನಷ್ಟಕ್ಕೆ 159 ರನ್​​ಗಳಿಗೆ ಸೀಮಿತಗೊಳಿಸಿದ ನಂತರ, ಮೊನಾಂಕ್ ಪಟೇಲ್ ನೇತೃತ್ವದ ತಂಡವು ತನ್ನ ಇನ್ನಿಂಗ್ಸ್ ಅನ್ನು 159 ರನ್​ಗಳಿಗೆ ಮುಕ್ತಾಯaಗೊಳಿಸಿತು. ಇದರ ನಂತರ ಸೂಪರ್ ಓವರ್ ನಡೆಯಿತು ಮತ್ತು ಯುಎಸ್ಎ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸುವಲ್ಲಿ ಯಶಸ್ವಿಯಾಯಿತು>

ಯುಎಸ್ಎ ಹೆಚ್ಚಿನ ಯಶಸ್ಸಿನ ಮೇಲೆ ಕಣ್ಣಿಟ್ಟಿದೆ

ಪಾಕಿಸ್ತಾನದ ವಿರುದ್ಧದ ಅದ್ಭುತ ಪ್ರದರ್ಶನಕ್ಕಾಗಿ ಯುಎಸ್ಎ ವಿಶ್ವದಾದ್ಯಂತ ಪ್ರಶಂಸೆ ಪಡೆಯುತ್ತಿದ್ದರೂ, ಅವರು ವಿಶ್ರಾಂತಿ ಪಡೆಯಲು ಸಿದ್ಧರಿಲ್ಲ ಆ ತಂಡದ ವೇಗದ ಬೌಲರ್ ಅಲಿ ಖಾನ್, ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯತ್ತ ತಂಡವು ಸಂಪೂರ್ಣವಾಗಿ ಗಮನ ಹರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದೆ.

ಇದನ್ನೂ ಓದಿ: T20 World Cup : ಪಾಕಿಸ್ತಾನ ತಂಡಕ್ಕೆ ಕರಾಳ ದಿನ; ಮಾಜಿ ಆಟಗಾರರಿಂದ ಟೀಕೆ

ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಯುಎಸ್ಎ ಈಗ ಭಾರತ ಮತ್ತು ಐರ್ಲೆಂಡ್ ವಿರುದ್ಧದ ಉಳಿದ ಗುಂಪು ಪಂದ್ಯಗಳಲ್ಲಿ ಗೆಲುವಿನ ಮೇಲೆ ಕಣ್ಣಿಟ್ಟಿದೆ ಎಂದು ಪಾಕಿಸ್ತಾನ ಮೂಲದ ವೇಗಿ ಹೇಳಿದ್ದಾರೆ.

“ಶ್ರೇಷ್ಠ ತಂಡ ಪಾಕಿಸ್ತಾನ ವಿರುದ್ಧ ನಮಗೆ ಉತ್ತಮ ಗೆಲುವು ಸಿಕ್ಕಿದೆ. ನಾವು ಈ ಹಂತಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೇವೆ. ನಾವು ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ಸೂಪರ್ 8 ಗೆ ಅರ್ಹತೆ ಪಡೆಯುವುದು ನಮ್ಮ ಕೆಲಸವಾಗಿರುವುದರಿಂದ ಆ ಕೆಲಸ ಇನ್ನೂ ಮುಗಿದಿದೆ ಎಂದು ನಾನು ಭಾವಿಸುವುದಿಲ್ಲ. ಆದ್ದರಿಂದ ತಂಡವು ನಿಜವಾಗಿಯೂ ಆತ್ಮವಿಶ್ವಾಸದಲ್ಲಿದೆ. ನಾವು ಈ ವೇಗವನ್ನು ಉಳಿಸಿಕೊಳ್ಳಲಿದ್ದೇವೆ ಮತ್ತು ಭಾರತ ಮತ್ತು ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಭರವಸೆ ಹೊಂದಿದ್ದೇವೆ”ಎಂದು ಅಲಿ ಖಾನ್ ಕ್ರಿಕ್​ಬಜ್​ಗೆ ತಿಳಿಸಿದರು.

ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಅಮೆರಿಕ ‘ಎ’ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಇನ್ನೂ ಒಂದು ಗೆಲುವು ಯುಎಸ್ಎ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಬಲವಾದ ಸ್ಥಾನದಲ್ಲಿರಿಸುತ್ತದೆ. ಜೂನ್ 12 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಟೀಮ್ ಇಂಡಿಯಾವನ್ನು ಎದುರಿಸಲಿದ್ದಾರೆ.

Exit mobile version