Site icon Vistara News

Team India : ಆಸ್ಟ್ರೇಲಿಯಾ ಪ್ರವಾಸಕ್ಕೆ 18 ಸದಸ್ಯರ ಭಾರತ ‘ಎ’ ಮಹಿಳಾ ತಂಡ ಪ್ರಕಟ

Team India

ಬೆಂಗಳೂರು: ಭಾರತ ‘ಎ’ ಮಹಿಳಾ ತಂಡ ಆಸ್ಟ್ರೇಲಿಯಾ ‘ಎ’ ವಿರುದ್ಧದ ಬಹು ಮಾದರಿಯ ಕ್ರಿಕೆಟ್​​ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಆಸ್ಟ್ರೇಲಿಯಾ ‘ಎ’ ವಿರುದ್ಧ ಭಾರತ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಈ ಬಹು-ಸ್ವರೂಪದ ಪ್ರವಾಸವು ಆಗಸ್ಟ್ 7 ರಂದು ಬ್ರಿಸ್ಬೇನ್​​​ ಅಲನ್ ಬಾರ್ಡರ್ ಫೀಲ್ಡ್ (ಎಬಿಎಫ್) ನಲ್ಲಿ ಪ್ರಾರಂಭವಾಗಲಿದೆ. ಈ ತಾಣವು ಮೂರು ಟಿ 20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಏಕದಿನ ಪಂದ್ಯಗಳು ಮ್ಯಾಕೆಯಲ್ಲಿ ನಡೆಯಲಿದ್ದು, ಗೋಲ್ಡ್ ಕೋಸ್ಟ್ ನಾಲ್ಕು ದಿನಗಳ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಮಹಿಳಾ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮಿನ್ನು ಮಣಿ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದು, ಶ್ವೇತಾ ಶೆರಾವತ್ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಪ್ರೀಮಿಯರ್ ಲೀಗ್ 2024 ರಲ್ಲಿ ಮಿಂಚಿದ ಸಜನಾ ಸಜೀವನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ತಂಡದ ಪ್ರಭಾವ ಅಧಿಕ


ಹಿರಿಯ ಭಾರತ ಮಹಿಳಾ ತಂಡದ ಬಗ್ಗೆ ಮಾತನಾಡುವುದಾದರೆ, ಜೂನ್ 16 ರಂದು ಪ್ರಾರಂಭವಾದ ಬಹು-ಸ್ವರೂಪದ ಪ್ರವಾಸದಲ್ಲಿ ಅವರು ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು. ಮೊದಲಿಗೆ ಭಾರತವು ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್​ ಮಾಡಿತ್ತು. ನಂತರ ಚೆನ್ನೈನಲ್ಲಿ ನಡೆದ ಏಕೈಕ ಟೆಸ್ಟ್​​ನಲ್ಲಿ ಪ್ರವಾಸಿ ದ. ಆಫ್ರಿಕಾ ತಂಡದ ವಿರುದ್ಧ ಐತಿಹಾಸಿಕ ಗೆಲುವ ಸಾಧಿಸಿತು. ಆದಾಗ್ಯೂ, ಪ್ರವಾಸದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಸ್ವಲ್ಪ ಪ್ರಬಲವಾಯಿತು. ಅವರು ಟಿ 20 ಐ ಸರಣಿಯನ್ನು 1-1 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: IND vs ZIM : ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿಯೂ ವಿಜಯ, 4-1 ಅಂತರದಲ್ಲಿ ಸರಣಿ ಭಾರತದ ಕೈವಶ

ಭಾರತ ‘ಎ’ ಮಹಿಳಾ ತಂಡ

ಮಿನ್ನು ಮಣಿ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ಪ್ರಿಯಾ ಪೂನಿಯಾ, ಶುಭಾ ಸತೀಶ್, ತೇಜಲ್ ಹಸಬ್ನಿಸ್, ಕಿರಣ್ ನವಗಿರೆ, ಸಜ್ನಾ ಸಜೀವನ್, ಉಮಾ ಚೆಟ್ರಿ (ಯುಕೆ), ಶಿಪ್ರಾ ಗಿರಿ (ಯುಕೆ), ರಾಘವಿ ಬಿಶ್ತ್, ಸೈಕಾ ಇಶಾಕ್, ಮನ್ನತ್ ಕಶ್ಯಪ್, ತನುಜಾ ಕನ್ವರ್, ಪ್ರಿಯಾ ಮಿಶ್ರಾ, ಮೇಘನಾ ಸಿಂಗ್, ಸಯಾಲಿ ಸತ್ಘರೆ, ಶಬ್ನಮ್ ಶಕೀಲ್*, ಎಸ್.

ಶಬ್ನಮ್​ ಶಕೀಲ್ ಆಯ್ಕೆ ಫಿಟ್ನೆಸ್​ಗೆ ಒಳಪಟ್ಟಿರುತ್ತದೆ. ಸ್ಟ್ಯಾಂಡ್​ಬೈ ಆಟಗಾರ್ತಿ: ಸೈಮಾ ಠಾಕೂರ್

Exit mobile version