Site icon Vistara News

Team India : ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಪ್ರಕಟ

Team india

ಬೆಂಗಳೂರು: ಭಾರತ ಕ್ರಿಕೆಟ್​ ತಂಡ (Team India) ಮುಂದಿನ ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾಗೆ ಪ್ರವಾಸ ಮಾಡಲಿದ್ದು ಅದರ ವೇಳಾಪಟ್ಟಿಯನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಬಿಡುಗಡೆ ಮಾಡಿದೆ. ಭಾರತ ತಂಡ ನಾಲ್ಕು ಟಿ 20 ಐ ಪಂದ್ಯಗಳ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಸಂಸ್ಥೆ ಜೂನ್​ 21ರಂದು ಘೋಷಿಸಿದೆ. ಟಿ 20 ಪಂದ್ಯಗಳು ನವೆಂಬರ್ 8, 10, 13 ಮತ್ತು 15 ರಂದು ನಡೆಯಲಿದ್ದು, ಕ್ರಮವಾಗಿ ಡರ್ಬಾನ್, ಗ್ಬೆರ್ಹಾ, ಸೆಂಚೂರಿಯನ್ ಮತ್ತು ಗೌಟೆಂಗ್ ಈ ಹೈವೋಲ್ಟೇಜ್ ಪಂದ್ಯಗಳಿಗೆ ತಾಣಗಳಾಗಿವೆ.

ಟಿ 20 ಐ ಸರಣಿಯು ನವೆಂಬರ್ 8 ರ ಶುಕ್ರವಾರದಿಂದ ಆರಂಭಗೊಳ್ಳಲಿದ್ದು ಡರ್ಬಾನ್​​ ಹಾಲಿವುಡ್​ಬೆಟ್ಸ್​ ಕಿಂಗ್ಸ್​​ಮೀಡ್​ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮುಂದಿನ ಪಂದ್ಯವು ನವೆಂಬರ್ 10 ರ ಭಾನುವಾರ ಡಫಾಬೆಟ್ ಸೇಂಟ್ ಜಾರ್ಜ್ ಪಾರ್ಕ್​ನಲ್ಲಿ ಗ್ಬೆರ್ಹಾದಲ್ಲಿ ನಡೆಯಲಿದೆ. ನವೆಂಬರ್ 13 ರ ಬುಧವಾರ ಸೂಪರ್​ಸ್ಪೋರ್ಟ್ ಪಾರ್ಕ್ ನಲ್ಲಿ ಪಂದ್ಯ ನಿಗದಿಯಾಗಿದೆ. ಡಿಪಿ ವರ್ಲ್ಡ್ ವಾಂಡರರ್ಸ್ ಕ್ರೀಡಾಂಗಣವು ನವೆಂಬರ್ 15 ರ ಶುಕ್ರವಾರಂದು ನಡೆಯುವ ಸರಣಿಯ ಅಂತಿಮ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ ಎಂದು ಸಿಎಸ್ಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಿಎಸ್ಎ ಅಧ್ಯಕ್ಷ ಲಾಸನ್ ನೈಡೂ ಈ ಕುರಿತು ಪ್ರಕಟಣೆ ಹೊರಡಿಸಿ “ದಕ್ಷಿಣ ಆಫ್ರಿಕಾದ ಕ್ರಿಕೆಟ್​ಗೆ ಮತ್ತು ಸಾಮಾನ್ಯವಾಗಿ ವಿಶ್ವ ಕ್ರಿಕೆಟ್​ಗೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮಲ್ಲಿಗೆ ಭಾರತೀಯ ಕ್ರಿಕೆಟ್ ತಂಡದ ಯಾವುದೇ ಪ್ರವಾಸವು ರೋಮಾಂಚಕವಾಗಿರುತ್ತದೆ. ಎರಡೂ ತಂಡಗಳ ಅಸಾಧಾರಣ ಪ್ರತಿಭೆಗಳು ಮಿಂಚಲಿರುವ ಈ ಸರಣಿಗಾಗಿ ನಮ್ಮ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: David Johnson : ಬದುಕಿನ ಆಟ ಮುಗಿಸಿದ ‘ವೇಗ ದೂತ’

ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಈ ಕುರಿತು ಪ್ರಕಟಣೆ ಹೊರಡಿಸಿ “ಭಾರತ ಮತ್ತು ದಕ್ಷಿಣ ಆಫ್ರಿಕಾ ಸದಾ ಬಲವಾದ ಬಂಧ ಹೊಂದಿದೆ. ಈ ಬಗ್ಗೆ ಎರಡೂ ದೇಶಗಳು ಹೆಮ್ಮೆ ಪಡುತ್ತವೆ. ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದ ಅಭಿಮಾನಿಗಳಿಂದ ನಿರಂತರವಾಗಿ ಅಪಾರ ಮೆಚ್ಚುಗೆ ಮತ್ತು ಪ್ರೀತಿ ಪಡೆದಿದೆ. ದಕ್ಷಿಣ ಆಫ್ರಿಕಾ ತಂಡದ ಬಗ್ಗೆ ಭಾರತೀಯ ಅಭಿಮಾನಿಗಳಲ್ಲಿ ಈ ಭಾವನೆ ಅಷ್ಟೇ ಬಲವಾಗಿದೆ. ಮುಂಬರುವ ಸರಣಿಯು ಮತ್ತೊಮ್ಮೆ ಮೈದಾನದಲ್ಲಿನ ಕ್ರಿಕೆಟ್ ಶ್ರೇಷ್ಠತೆ ಎತ್ತಿ ತೋರಿಸುತ್ತದೆ. ರೋಮಾಂಚಕ ಹಾಗೂ ತೀವ್ರತೆಯ ಸ್ಪರ್ಧೆಗಳು ನಡೆಯುವ ವಿಶ್ವಾಸ ಇದೆ ಎಂದು ಹೇಳಿದರು.

ಪಂದ್ಯದ ವೇಳಾಪಟ್ಟಿ ಹೀಗಿದೆ

Exit mobile version