Site icon Vistara News

T20 World Cup 2024 : ಒಂದೇ ಒಂದು ಸೋಲು ಕಾಣದೆ ವಿಶ್ವ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ ತಂಡ

T20 World Cup 2024

ಬೆಂಗಳೂರು: ವೆಸ್ಟ್​ಇಂಡೀಸ್​ನ ಬಾರ್ಬಡೋಸ್​ನಲ್ಲಿ ಜೂನ್ 29 ರಂದು ನಡೆದ ಐಸಿಸಿ ಪುರುಷರ ವಿಶ್ವಕಪ್ 2024 ರ (T20 World Cup 2024) ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಏಡೆನ್ ಮಾರ್ಕ್ರಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳಿಂದ ಸೋಲಿಸಿ ಚಾಂಪಿಯನ್ ಆಯಿತು. ಇದರೊಂದಿಗೆ ಭಾರತವು 13 ವರ್ಷಗಳ ವಿಶ್ವ ಕಪ್ ಹಾಗೂ 17 ವರ್ಷಗಳ ಟಿ20 ವಿಶ್ವ ಕಪ್​ ಕೊರತೆಯನ್ನು ನೀಗಿಸಿತು. ಅಂದ ಹಾಗೆ ಭಾರತ ತಂಡ ಈ ಬಾರಿಯ ಟ್ರೋಫಿಯನ್ನು ಅಜೇಯವಾಗಿ ಗೆದ್ದಿದೆ. ಟೂರ್ನಿಯುದ್ದಕ್ಕೂ ಪಂದ್ಯಾವಳಿಯುದ್ದಕ್ಕೂ ಎಲ್ಲಾ ಪಂದ್ಯಗಳನ್ನು ಗೆದ್ದು ಟ್ರೋಫಿ ಗೆದ್ದ ಮೊದಲ ತಂಡ ಎಂಬ ಇತಿಹಾಸ ಬರೆದಿದೆ.

ಗುಂಪು ಹಂತದಲ್ಲಿ ಭಾರತ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿತ್ತು. ಒಂದು ಪಂದ್ಯ ಮಳೆಯಿಂದಾಗಿ ಕೊಚ್ಚಿಹೋಗಿತ್ತು. ಗಯಾನಾದಲ್ಲಿ ನಡೆದ ಸೆಮಿಫೈನಲ್​​ನಲ್ಲಿ ಗೆಲ್ಲುವ ಮೊದಲು ಭಾರತವು ಸೂಪರ್ ಎಂಟರ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ಸೆಮಿಯಲ್ಲಿ ಇಂಗ್ಲೆಂಡ್ ಅನ್ನು 68 ರನ್​ಗಳಿಂದ ಸೋಲಿಸಿತ್ತು.

ಇದನ್ನೂ ಓದಿ:T20 World Cup 2024 : ಕಣ್ಣೀರ ಧಾರೆ; ಟ್ರೋಫಿ ಗೆದ್ದ ಖುಷಿಗೆ ಕಣ್ಣೀರು ಸುರಿಸಿದ ಪಾಂಡ್ಯ, ರೋಹಿತ್, ಕೊಹ್ಲಿ, ಸಿರಾಜ್​ 

ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಆಡಿದ ತಂಡವು ರನ್​ ಗುರಿಯನ್ನು ಗುರಿಯನ್ನು ರಕ್ಷಿಸಿ ಗೆದ್ದಿರುವುದು ಇದು ಮೂರನೇ ಬಾರಿ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಈ ಸಾಧನೆ ಮಾಡಿದ್ದರೆ, 2012ರಲ್ಲಿ ವೆಸ್ಟ್ ಇಂಡೀಸ್ ಈ ಸಾಧನೆ ಮಾಡಿತ್ತು.

ಭಾರತ-ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯ ಹೀಗಿತ್ತು

ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ದಕ್ಷಿಣ ಆಫ್ರಿಕಾಕ್ಕೆ 177 ರನ್ ಗಳ ಗುರಿ ನೀಡಿತು. ಇದು ಟಿ20 ವಿಶ್ವಕಪ್ ಫೈನಲ್ನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಭಾರತದ ಪರ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿದರು, ಇದು ಟಿ 20 ವಿಶ್ವಕಪ್ ಫೈನಲ್​​​ನಲ್ಲಿ ಗರಿಷ್ಠ ಆಟಗಾರರೊಬ್ಬರ ವೈಯಕ್ತಿಕ ಸ್ಕೋರ್ ಆಗಿದೆ.

177 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಭಾರತದ ಪರ ಹಾರ್ದಿಕ್ ಪಾಂಡ್ಯ 3, ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷ್ದೀಪ್ ಸಿಂಗ್ ತಲಾ 2, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.

15 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2024 ರ ಟಿ 20 ವಿಶ್ವಕಪ್​​ನಲ್ಲಿ ಬೌಲಿಂಗ್ ಎಕಾನಮಿ 4.17 ಆಗಿತ್ತು/ ಇದು ಟಿ 20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಇದುವರೆಗಿನ ಅತ್ಯುತ್ತಮ ಸಾಧನೆಯಅಗಿದೆ.

ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ

‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದ ನಂತರ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟಿ 20 ಐ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. “ಇದು ನನ್ನ ಕೊನೆಯ ಟಿ 20 ವಿಶ್ವಕಪ್, ಇದನ್ನು ನಾವು ಸಾಧಿಸಲು ಬಯಸಿದ್ದೆವು. ಒಂದು ದಿನ ನೀವು ರನ್ ಗಳಿಸಲು ಸಾಧ್ಯವಿಲ್ಲ ಎಂದು ನಿಮಗೆ ಅನಿಸುತ್ತದೆ. ಮತ್ತೊಂದು ದಿನ ಸಂಭವಿಸುತ್ತದೆ. ದೇವರು ದೊಡ್ಡವನು. ಇದು ಭಾರತಕ್ಕಾಗಿ ಆಡುವ ನನ್ನ ಕೊನೆಯ ಟಿ 20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆವು, “ಎಂದು ಕೊಹ್ಲಿ ಹೇಳಿದ್ದಾರೆ.

Exit mobile version