Site icon Vistara News

Kangana Ranaut : ಪಂಜಾಬ್​ನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ; ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ಕಂಗನಾ ಪ್ರತಿಕ್ರಿಯೆ ಹೀಗಿತ್ತು

Kangana Ranaut

ನವದೆಹಲಿ: ನಟಿ-ರಾಜಕಾರಣಿ ಕಂಗನಾ ರಣಾವತ್​​ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮಹಿಳಾ ಮಹಿಳಾ ಕಾನ್​ಸ್ಟೆಬಲ್​ ಹಲ್ಲೆ ಮಾಡಿದ ಘಟನೆ ಕುರಿತು ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪಂಜಾಬ್​​ನಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ. ಅದು ಕಳವಳಕಾರಿ ಸಂಗತಿ. ಹಲ್ಲೆ ನಡೆದ ಬಳಿಕ ನಾನು ಆರಾಮವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಘಟನೆ ಬಳಿಕ ವಿಡಿಯೊ ಮೂಲಕ ಪ್ರತಿಕ್ರಿಯಿಸಿದ ನಟಿ, “ನಾನು ಸುರಕ್ಷಿತವಾಗಿದ್ದೇನೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಈ ಘಟನೆ ನಡೆದಿದೆ. ತಪಾಸಣೆ ಮುಗಿದ ಕ್ಷಣ, ಬೇರೆ ಕ್ಯಾಬಿನ್​ನಲ್ಲಿದ್ದ ಸಿಐಎಸ್ಎಫ್ನ ಮಹಿಳಾ ಪೇದೆ ನನಗಾಗಿ ಕಾಯುತ್ತಿದ್ದಳು. ಅವಳು ನನ್ನ ಮುಖಕ್ಕೆ ಒಂದು ಬದಿಯಿಂದ ಹೊಡೆದು ನಿಂದಿಸಿದಳು. ಅವಳು ಇದನ್ನು ಏಕೆ ಮಾಡಿದಳು ಎಂದು ನಾನು ಆಕೆಯನ್ನು ಕೇಳಿದೆ, ಮತ್ತು ಅವಳು ಹೇಳಿದಳು, ಇದು ರೈತರ ಪ್ರತಿಭಟನೆಗಾಗಿ ಎಂದು ಹೇಳಿದಳು ಎಂದು ಕಂಗನಾ ಅವರು ವಿಡಿಯೊ ಮೆಸೇಜ್​ನಲ್ಲಿ ತಿಳಿಸಿದ್ದಾರೆ.

ನಾನು ಆರಾಮವಾಗಿ ಇದ್ದೇನೆ. ಆದರೆ, ಪಂಜಾಬ್​ನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ. ನಾವು ಇದನ್ನು ಹೇಗೆ ನಿಭಾಯಿಸಬೇಕಾಗುತ್ತದೆ ಎಂಬುದೇ ನನಗೆ ಕಳವಳಕಾರಿಯಾಗಿದೆ” ಎಂದು ನಟಿ ಹೇಳಿದ್ದಾರೆ. ಅಂದ ಹಾಗೆ ನಟಿಗೆ ಹೊಡೆದಿರುವುದು ಪಂಜಾಬ್ ಮೂಲದ ಕಾನ್​ಸ್ಟೆಬಲ್​. ಪಂಜಾಬ್​ನ ರೈತರು ಡೆಲ್ಲಿಯಲ್ಲಿ ಪ್ರತಿಭಟನೆ ನಡೆಸುವ ವೇಳೆ ನಟಿ ನೀಡಿದ್ದ ಹೇಳಿಕೆಗೆ ಪ್ರತಿಕಾರವಾಗಿ ಅವರು ಅಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ

ಏತನ್ಮಧ್ಯೆ, ಕಂಗನಾ ರಣಾವತ್​ಗೆ ಕಪಾಳಮೋಕ್ಷ ಮಾಡಿದ ಮಹಿಳಾ ಪೇದೆ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಕಂಗಾನ ಪ್ರತಿಭಟನೆಗೆ ಹೋಗಿದ್ದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಅವರೆಲ್ಲರೂ 100 ರೂಪಾಯಿಗೆ ಸಿಗುವವರು ಎಂದಿದ್ದರು. ಆ ವೇಳೆ ನನ್ನ ತಾಯಿ ಪ್ರತಿಭಟನೆಯಲ್ಲಿದ್ದರು. ನನ್ನ ತಾಯಿ ಬಗ್ಗೆ ಹೇಳಿದ್ದಕ್ಕೆ ಪ್ರತಿಕಾರ ತೀರಿಸಿಕೊಂಡಿರುವುದಾಗಿ ನಟಿ ಹೇಳಿದ್ದಾರೆ. ಘಟನೆ ಬಳಿಕ ಮಹಿಳಾ ಪೇದೆಯನ್ನು ಅಮಾನತುಗೊಳಿಸಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ.

ಏನು ಹೇಳಿದ್ದರು ಕಂಗನಾ

2020 ರಲ್ಲಿ, ಕಂಗನಾ ರನೌತ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್​ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್​ಸ್ಟೇಬಲ್​ ಕುಲ್ವಿಂದರ್ ಕೌರ್​ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ.

100 ರೂಪಾಯಿಗೆ ಸಿಗುವ ಮಹಿಳೆಯರು ಎಂದು ಕಂಗನಾ ಕೊಟ್ಟಿರುವ ಹೇಳಿಕೆಯು ಎಕ್ಸ್ ನಲ್ಲಿ(ಟ್ವಿಟರ್​) ಕಂಗನಾ ಮತ್ತು ಗಾಯಕ-ನಟ ದಿಲ್ಜೀತ್ ದೋಸಾಂಜ್ ನಡುವೆ ಗಲಾಟೆಗೆ ಕಾರಣವಾಗಿತ್ತು.
ರಿಹಾನ್ನಾ ಬಗ್ಗೆಯೂ ಟೀಕೆ

ಫೆಬ್ರವರಿ 2021 ರಲ್ಲಿ, ಅಂತರರಾಷ್ಟ್ರೀಯ ಪಾಪ್ ಸೆನ್ಸೇಷನ್ ರಿಹಾನ್ನಾ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ರನೌತ್ ಪ್ರತಿಭಟನಾಕಾರರನ್ನು “ಭಯೋತ್ಪಾದಕರು” ಎಂದು ಕರೆದಿದ್ದರು ಮತ್ತು ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

Exit mobile version