Site icon Vistara News

Terrorist Killed : ಜಮ್ಮು ಕಾಶ್ಮೀರದಲ್ಲಿ ಉಗ್ರನೊಬ್ಬನ್ನು ಹೊಡೆದುರುಳಿಸಿದ ಭದ್ರತಾ ಪಡೆ

Terrorist Killed

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮನೆಯೊಂದಕ್ಕೆ ನುಗ್ಗಿದ್ದ ಉಗ್ರರ ಗುಂಪಿನಲ್ಲಿ ಒಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ (Terrorist Killed) . ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿ ಅವರಲ್ಲೊಬ್ಬರನ್ನು ಹೊಡೆದುರುಳಿಸಿದ್ದಾರೆ. ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಹಿರಾನಗರ್ ಸೆಕ್ಟರ್​ನ ಸೆಡಾ ಸೋಹಲ್ ಗ್ರಾಮದಲ್ಲಿ ಸಂಜೆ 7: 45 ರ ಸುಮಾರಿಗೆ ಅನುಮಾನಾಸ್ಪದ ಉಗ್ರಗಾಮಿ ಚಟುವಟಿಕೆ ಪತ್ತೆಯಾಗಿತ್ತು. ಅವರಿಗೆ ಶರಣಾಗುವಂತೆ ಸೂಚಿಸಿದೆವು. ಅವರು ಮನವಿ ಧಿಕ್ಕರಿಸಿ ಕಾಡಿನೊಳಗೆ ಹೋಗಿ ಗುಂಡಿನ ದಾಳಿ ನಡೆಸಿದ್ದರು. ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಶಂಕಿತರನ್ನು ಪತ್ತೆಹಚ್ಚಲು ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸಿ ಅವರಲ್ಲೊಬ್ಬರನ್ನು ಹೊಡೆದುರುಳಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಘಟನೆ ಬಗ್ಗೆ ಕಥುವಾ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಭಾರತ ಪಾಕ್​ ಗಡಿಗೆ ಹತ್ತಿರವಿರುವ ಹಿರಾನಗರ್ ಸೆಕ್ಟರ್​ನ ಸೈದಾ ಗ್ರಾಮದ ಮನೆಯೊಂದರ ಮೇಲೆ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನಾನು ಡಿಸಿ #Kathua ಶ್ರೀ ರಾಕೇಶ್ ಮಿನ್ಹಾಸ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನು ಸ್ಥಳದಲ್ಲಿರುವ ಕಥುವಾ ಎಸ್ಎಸ್ಪಿ ಅನಾಯತ್ ಅಲಿ ಚೌಧರಿ ಜತೆಗೂ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ” ಎಂದು ಸಿಂಗ್ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ದಾಳಿಗೊಳಗಾದ ಮನೆಯ ಮಾಲೀಕರು ಮೊಬೈಲ್ ಫೋನ್​ನಲ್ಲಿ ಮಾತನಾಡಿದ್ದಾರೆ. ಜಂಟಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ನಾನು ಮತ್ತು ನನ್ನ ಕಚೇರಿ ನಿರಂತರ ಸಂಪರ್ಕರುತ್ತದೆ” ಎಂದು ಕೇಂದ್ರ ಸಚಿವರು ಹೇಳಿದರು.

ಇದನ್ನೂ ಓದಿ: Joe Biden : ಬಂದೂಕು ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಪುತ್ರ ತಪ್ಪಿತಸ್ಥ; ಕಾದಿದೆ 25 ವರ್ಷ ಜೈಲು ಶಿಕ್ಷೆ

ಶಿವ ಖೋರಿ ದೇವಸ್ಥಾನದಿಂದ ಕತ್ರಾದ ಮಾತಾ ವೈಷ್ಣೋ ದೇವಿ ದೇವಾಲಯಕ್ಕೆ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ರಿಯಾಸಿಯ ಪೋನಿ ಪ್ರದೇಶದ ಟೆರ್ಯಾತ್ ಗ್ರಾಮದ ಬಳಿ ಉಗ್ರರ ಗುಂಡೇಟು ತಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿದೆ. ಈ ದಾಳಿಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 41 ಜನರು ಗಾಯಗೊಂಡಿದ್ದಾರೆ.

Exit mobile version