Site icon Vistara News

Death News : ಕಟ್ಟಿಂಗ್​ ಮೆಷಿನ್​ ಉಲ್ಟಾ ಹೊಡೆದು ಕಾರ್ಮಿಕನ ಕುತ್ತಿಗೆ ಕಟ್ ​​

death news

ಚಿಕ್ಕಬಳ್ಳಾಪುರ: ವೈರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಗೋಡೆ ಕಟ್ ಮಾಡುವ ಮೆಷಿನ್​ ಆಕಸ್ಮಿಕವಾಗಿ ​ ಕೆಲಸ ಮಾಡುತ್ತಿದ್ದ ಕಾರ್ಮಿಕನ ಕತ್ತು ಸೀಳಿದ (Death News ) ಪ್ರಕರಣ ಬಾಗೇಪಲ್ಲಿ ತಾಲೂಕಿನ‌ ನಲ್ಲಪರೆಡ್ಡಿ ಗ್ರಾಮದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿದ್ದ 26 ವರ್ಷದ ಕಾರ್ಮಿಕ ಸುಹೇಲ್​ ಮೃತಪಟ್ಟಿದ್ದಾನೆ.

ದುರ್ದೈವಿ ಸುಹೇಲ್​ ವೈರಿಂಗ್ ಮಾಡಲೆಂದು ಗೋಡೆಯನ್ನು ಯಂತ್ರದ ಮೂಲಕ ಕಟ್​ ಮಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ‌ ರಿವರ್ಸ್ ಹೊಡೆದ ಕಟ್ಟಿಂಗ್ ಮಿಷನ್ ಆತನ ಕತ್ತಿಗೆ ತಾಗಿದೆ. ನೋಡು‌ ನೋಡುತ್ತಲೇ ಆತನ ಕತ್ತನ್ನು ಕಟ್ಟಿಂಗ್ ಮೆಷಿನ್​ ಬ್ಲೇಡ್​ ಸೀಳಿದೆ. ಅತಿಯಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬಾಗೇಪಲ್ಲಿ ಪಟ್ಟಣ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃತಕ ಗರ್ಭಧಾರಣೆಗೆ ಹೈ ಡೋಸ್ ಇಂಜೆಕ್ಷನ್‌ ಪ್ರಭಾವಕ್ಕೆ ಕಣ್ಣು‌ ಕಳೆದುಕೊಂಡ ಮಹಿಳೆ!

ಬೀದರ್: ಕೃತಕ ಗರ್ಭಧಾರಣೆ ಮಾಡುವುದಾಗಿ ಹೇಳಿ ಖಾಸಗಿ‌ ಆಸ್ಪತ್ರೆಯೊಂದು ಮಹಿಳೆಯರ ಜೀವದ ಜೊತೆ ಜೆಲ್ಲಾಟವಾಡಿರುವುದು ಬೀದರ್‌ನಲ್ಲಿ ನಡೆದಿದೆ. ಹೈ ಡೋಸ್ ಇಂಜೆಕ್ಷನ್‌ನಿಂದ ಮಹಿಳೆಯೊಬ್ಬರು ಕಣ್ಣು (eyesight) ಕಳೆದುಕೊಂಡಿರುವ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮಹಿಳೆ ಮನವಿ ಮಾಡಿದ್ದಾರೆ.

ಬೀದರ್ ನಗರದ ವಿಜಯ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ವಿಜಯಪುರ ಮೂಲದ ವಂದನಾ ನಾಗರಾಜ‌ ಎಂಬುವವರು ನೊಂದ ಮಹಿಳೆಯಾಗಿದ್ದು, ಆಸ್ಪತ್ರೆಯಲ್ಲಿ ಹೈ ಡೋಸ್ ಇಂಜೆಕ್ಷನ್ ನೀಡಿದ್ದರಿಂದ ಕಣ್ಣು‌ ಕಳೆದು ಕೊಂಡೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ತೆಲಂಗಾಣ ಮೂಲದ ಕವಿತಾ ಹಾಗೂ ಸೀಮಾ ಬೇಗಂ ಎಂಬ ಮಹಿಳೆಯರಿಗೂ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ : Blast in Bengaluru: ಇನ್ನು ಆರೇ ದಿನಕ್ಕೆ ವೈಟ್‌ಫೀಲ್ಡ್‌ ರಾಮೇಶ್ವರಂ ಕೆಫೆ ರೀ ಓಪನ್

ಬಂಜೆತನ ನಿವಾರಣೆ ಹೆಸರಿನಲ್ಲಿ ಆಸ್ಪತ್ರೆ ಲಕ್ಷ ಲಕ್ಷ ಹಣ ಪೀಕುತ್ತಿದೆ. ಹೈಡೋಸ್ ಇಂಜೆಕ್ಷನ್‌ನಿಂದ‌ ಕಣ್ಣು ಕಳೆದುಕೊಂಡಿದ್ದು, ನ್ಯಾಯ ಕೊಡಿಸಬೇಕು ಎಂದು ನೊಂದ‌ ಮಹಿಳೆ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ನಿವಾಸಿ ವಂದನಾ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ.

ತೆಲಂಗಾಣ ಮೂಲದ ಇಬ್ಬರು ಮಹಿಳೆಯರಿಗೂ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತನಿಖೆ ನಡೆಸಿ‌ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಜ್ಞಾನೇಶ್ವರ್ ನಿರಗೂಡೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Exit mobile version