Site icon Vistara News

Sudha Murthy : ವಿವಾದ ಸೃಷ್ಟಿಸಿದ ಸುಧಾ ಮೂರ್ತಿಯವರ ‘ರಕ್ಷಾ ಬಂಧನ’ದ ಕತೆ; ಸ್ಪಷ್ಟನೆ ನೀಡಿದ ಸಂಸದೆ

Sudha Murthy'

ಬೆಂಗಳೂರು : ರಕ್ಷಾ ಬಂಧನ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯರಾದ ಸುಧಾ ಮೂರ್ತಿ (Sudha Murthy) ಹಂಚಿಕೊಂಡ ಸಂದೇಶ ವಿವಾದಕ್ಕೆ ಈಡಾಗಿದ್ದು ಬಳಿಕ ಅವರು ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮಗೆ ಹೇಗೆ “ಪ್ರಮುಖ ಹಬ್ಬ” ಮತ್ತು ದಾರ ಅಥವಾ ರಾಖಿ ಹೊಂದಿರುವ ಮೌಲ್ಯವನ್ನು ಅವರು ವಿವರಣೆ ನೀಡಿದ್ದು ಒಂದು ವರ್ಗದ ಜನರನ್ನು ಕೆರಳಿಸಿತ್ತು. ಬಳಿಕ ಅವರು ತಮ್ಮ ಹೇಳಿಕೆಯನ್ನು ತಿದ್ದಿಕೊಂಡಿದ್ದಾರೆ. ಆದಾಗ್ಯೂ ಇದು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್​ನಲ್ಲಿ ಚರ್ಚೆಗೆ ಕಾರಣವಾಯಿತು. ನಾನು ಬೆಳೆಯುವ ಅವಧಿಯಲ್ಲಿ ಕಲಿತ ಕಥೆಯನ್ನು ಹೇಳುವ ಉದ್ದೇಶ ತಮ್ಮದಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.


“ರಕ್ಷಾ ಬಂಧನವು ನನಗೆ ಒಂದು ಪ್ರಮುಖ ಹಬ್ಬವಾಗಿದೆ, ಸಹೋದರಿಯೊಬ್ಬಳು ಕಷ್ಟದ ಸಂದರ್ಭದಲ್ಲಿ ಯಾವಾಗಲೂ ನನಗೆ ನೆರವಿಗೆ ಬರಬೇಕು ಎಂದು ಸಹೋದರನಿಗೆ ಕಟ್ಟುವ ದಾರ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಬರೆದುಕೊಂಡಿದ್ದಾರೆ.

ರಾಣಿ ಕರ್ಣಾವತಿ (ಮೇವಾರ್ ಸಾಮಾಜ್ಯ ) ತನ್ನ ರಾಜ್ಯದ ಮೇಲೆ ದಾಳಿ ನಡೆದಾಗ ಏನು ಮಾಡಬೇಕೆಂದು ಅವಳಿಗೆ ತಿಳಿಯದೇ ಮೊಘಲ್ ಚಕ್ರವರ್ತಿ ಹುಮಾಯೂನ್ ಗೆ ದಾರವೊಂದನ್ನು ಕಳುಹಿಸಿ, ನಾನು ಅಪಾಯದಲ್ಲಿದ್ದೇನೆ ದಯವಿಟ್ಟು ನನ್ನನ್ನು ನಿಮ್ಮ ಸಹೋದರಿ ಎಂದು ಪರಿಗಣಿಸಿ ಕಾಪಾಡಿ ಎಂದ ಕೋರಿದ್ದಳು.. ಹುಮಾಯೂನ್ ಗೆ ಅದು ಏನೆಂದು ತಿಳಿದಿರಲಿಲ್ಲ ಇದು ಏನು ಎಂದು ಸಭಾಸದರನ್ನು ಕೇಳಿದ್ದಳು. ಆಗ ವರು ಸಹೋದರನಿಗೆ ಸಹೋದರಿಯ ಕರೆ ಎಂದು ಹೇಳಿದರು. ಇದು ಈ ನೆಲದ ಪದ್ಧತಿ ಎಂದರು. ಇದು ನಿಜವಾಗಿದ್ದರೆ ನಾನು ರಾಣಿ ಕರ್ಣಾವತಿಗೆ ಸಹಾಯ ಮಾಡುತ್ತೇನೆ ಎಂದು ಹುಮಾಯುನ್ ದೆಹಲಿಯಿಂದ ಹೊರಟಿದ್ದ. ಆದರೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ ಮತ್ತು ಕರ್ಣಾವತಿ ನಿಧನ ಹೊಂದಿದ್ದರು ಎಂದು ಸುಧಾ ಮೂರ್ತಿ ಕತೆಯನ್ನು ಹೇಳಿದ್ದರು.

ಎಕ್ಸ್ ನಲ್ಲಿ ಹಲವಾರು ಬಳಕೆದಾರರು ಮೂರ್ತಿಯವರ ಕತೆಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು. ರಾಖಿ ಹಬ್ಬ ಆರಂಭಗೊಂಡಿದ್ದು ಮಹಾಭಾರತದ ಸಮಯಕ್ಕೆ ಎಂದು ವಾದಿಸಿದ್ದರು. ಮಹಾಭಾರತದ ಸಮಯದಲ್ಲಿ, ರಾಜ ಶಿಶುಪಾಲನನ್ನು ಕೊಲ್ಲಲು ಸುದರ್ಶನ ಚಕ್ರ ಬಳಸುವಾಗ ಶ್ರೀಕೃಷ್ಣನು ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದ. ಈ ವೇಳೆ ದ್ರೌಪದಿ ಗಾಯವನ್ನು ಬಟ್ಟೆಯ ತುಂಡಿನಿಂದ ಕಟ್ಟಿದ್ದಳು. ಶ್ರೀಕೃಷ್ಣನು ಖುಷಿಯಿಂದ ಕಷ್ಟಕಾಲದಲ್ಲಿ ನೆರವಾಗುವುದಾಗಿ ದ್ರೌಪದಿಗೆ ಭರವಸೆ ನೀಡಿದ್ದ. ಕೌರವರು ದ್ರೌಪದಿಯನ್ನು ಅವಮಾನಿಸಲು ಪ್ರಯತ್ನಿಸಿದಾಗ ಶ್ರೀಕೃಷ್ಣನು ಸೀರೆಯನ್ನು ನೀಡಿ ಆಕೆಯ ಮಾನ ಕಾಪಾಡಿದ. ಇದು ರಾಖಿ ಹಬ್ಬದ ಮೂಲ ಎಂದು ವಾದಿಸಿದರು.

ಇದನ್ನೂ ಓದಿ: Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

ಬಳಿಕ ಸುಧಾ ಮೂರ್ತಿ ಅವರು ಸ್ಪಷ್ಟೀಕರಣ ನೀಡಿದ್ದಾರೆ. “ರಕ್ಷಾ ಬಂಧನದಂದು ನಾನು ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ಖಂಡಿತವಾಗಿಯೂ ಹಬ್ಬದ ಮೂಲ ಅದಲ್ಲ. ನಾನು ವೀಡಿಯೊದಲ್ಲಿ ಮೊದಲೇ ಹೇಳಿದ್ದೇನೆ. ಇದು ಈ ನೆಲದ ಪದ್ಧತಿ ಎಂದು. ನಾನು ಬೆಳೆಯುತ್ತಿರುವಾಗ ಕಲಿತ ಅನೇಕ ಕಥೆಗಳಲ್ಲಿ ಅದೂ ಒಂದು. ರಕ್ಷಾ ಬಂಧನದ ಹಿಂದಿನ ಸಾಂಕೇತಿಕತೆಯ ಬಗ್ಗೆ ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರ.

Exit mobile version