Site icon Vistara News

IPL 2024 : ಐಪಿಎಲ್​ ಮ್ಯಾಚ್​ ಇದೆ, ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಬೇಡಿ, ಹೋಗಬೇಡಿ

RCB Match

ಬೆಂಗಳೂರು: ಸೋಮವಾರ (ಮಾರ್ಚ್​ 25ರಂದು) ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮ್ಯಾಚ್ (IPL 2024) ಇರುವ ಕಾರಣ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧವಿದೆ. ಆತಿಥೇಯ ಆರ್​​ಸಿಬಿ ಮತ್ತು ಪಂಜಾಬ್ ಕಿಂಗ್ಸ್​ ನಡುವೆ ಈ ಪಂದ್ಯ ಆಯೋಜನೆಗೊಂಡಿದೆ. ವಾಹನ ಸವಾರರು ಈ ರಸ್ತೆಯ ಮೂಲಕ ಸಾಗುವಾಗ ಆದಷ್ಟು ಗಮನ ಇಡುವುದು ಒಳಿತು. ಇಲ್ಲದಿದ್ದರೆ ನಿಧಾನವಾಗಿ ಸಾಗುವ ಟ್ರಾಫಿಕ್​ನೊಳಗೆ ಸಿಲುಕಿ ಹಾಕಿಕೊಳ್ಳುವುದು ಖಚಿತ.

ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ವಾಹನ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಸುಗಮ ಸಂಚಾರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಲವೊಂದು ಕಡೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲದೆ ವಾಹನ ಪಾರ್ಕಿಂಗ್​​ಗೂ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.

ಪಂದ್ಯ ಆರಂಭಕ್ಕೆ ನಾಲ್ಕು ಗಂಟೆ ಮೊದಲು ಅಂದರೆ ಸಂಜೆ ಮೂರು ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಇದೆ. ಇಲ್ಲೆಲ್ಲ ಪಾರ್ಕಿಂಗ್ ಮಾಡಿದರೆ ಕೇಸು ಅಥವಾ ಟೋಯಿಂಗ್ ಗ್ಯಾರಂಟಿ. ಆದರೆ, ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಇಲ್ಲೆಲ್ಲ ತಪ್ಪಿಯೂ ಪಾರ್ಕಿಂಗ್ ಮಾಡಬೇಡಿ

ಇದನ್ನೂ ಓದಿ : IPL 2024: ಐಪಿಎಲ್​ನ ದ್ವಿತೀಯಾರ್ಧದ ವೇಳಾಪಟ್ಟಿ ಇಂದೇ ಪ್ರಕಟ; ಎಷ್ಟು ಗಂಟೆಗೆ?

ಇಲ್ಲಿ ಪಾರ್ಕಿಂಗ್ ಮಾಡಿ

ಕ್ರೀಡಾಭಿಮಾನಿಗಳನ್ನು ಕರೆದುಕೊಂಡು ಬರುವ ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್​​ಗಳು, ಪಿಕ್ ಆಪ್ ಮತ್ತು ಡ್ರಾಪ್ ಮಾಡುವ ಸ್ಥಳಗಳ ಬಗ್ಗೆಯೂ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದು, ಆ ವಿವರ ಇಲ್ಲಿದೆ.

ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ
ಯು.ಬಿ ಸಿಟಿ ಪಾರ್ಕಿಂಗ್ ಸ್ಥಳ
ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಮೊದಲನೆ ಮಹಡಿ & ಓಲ್ಡ್ ಕೆ.ಜಿ.ಐ.ಡಿ ಬಿಲ್ಡಿಂಗ್
ಕಿಂಗ್ಸ್ ರಸ್ತೆ (ಕಬ್ಬನ್ ಪಾರ್ಕ್ ಒಳಭಾಗ)

ತವರಿನಲ್ಲಿ ಗೆಲುವಿನ ಖಾತೆ ತೆರೆದೀತೇ ಆರ್​ಸಿಬಿ?

ಈ ಬಾರಿಯ ಐಪಿಎಲ್​ನ(IPL 2024) ಉದ್ಘಾಟನ ಪಂದ್ಯದಲ್ಲಿ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB vs PBKS) ತಂಡ ಗೆಲುವಿನ ಇದಾರೆಯೊಂದಿಗೆ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಸವಾಲು ಎದುರಿಸಲಿದೆ. ಆರ್​ಸಿಬಿಗೆ ಇದು ಮೊದಲ ತವರಿನ ಪಂದ್ಯವಾಗಿದ್ದು, ತವರಿನ ಸಂಪೂರ್ಣ ಲಾಭವೆತ್ತುವ ಯೋಜನೆಯಲ್ಲಿದೆ.

ಫೀಲ್ಡಿಂಗ್​ ಒಕೆ

ಪ್ರತಿ ಸೀಸನ್​ನಲ್ಲಿಯೂ ಕಳಪೆ ಫೀಲ್ಡಿಂಗ್​ ಮಾಡುತ್ತಿದ್ದ ಆರ್​ಸಿಬಿ ಈ ಬಾರಿ ತನ್ನ ಫೀಲ್ಡಿಂಗ್​ ವಿಭಾಗವನ್ನು ಸುಧಾರಿಸಿಕೊಂಡಿದೆ. ಇದು ಕಳೆದ ಪಂದ್ಯದಲ್ಲಿ ಸಾಬೀತಾಗಿತ್ತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಲ್ಲ ಆಟಗಾರರು ಕೂಡ ಪಾದರಸದ ವೇಗದಲ್ಲಿ ಫೀಲ್ಡಿಂಗ್​ ನಡೆಸಿದ್ದರು. ಆದರೆ, ತಂಡಕ್ಕೆರಿವ ದೊಡ್ಡ ಚಿಂತೆ ಸೂಕ್ತ ಸ್ಪಿನ್ನರ್​ ಇಲ್ಲದೆ ಇರುವುದು. ಕರ್ಣ್​ ಶರ್ಮ ಅವರು ತಂಡದಲ್ಲಿದ್ದರೂ ಕೂಡ ಅವರು ಸ್ಟಾರ್​ ಸಿನ್ನರ್​ ಅಲ್ಲ. ವೇಗದ ಬೌಲಿಂಗ್​ ಕೂಡ ಪರಿಣಾಮಕಾರಿಯಾಗಿಲ್ಲ. ಸಿರಾಜ್​, ಜೋಸೆಫ್​ ಕಳೆದ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದಿದ್ದರು. ಹೀಗಾಗಿ ಇವರು ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.

ಆರ್​ಸಿಬಿಯ ಬ್ಯಾಟಿಂಗ್​ ಕೂಡ ಚೇತರಿಕೆ ಕಾಣಬೇಕಿದೆ. ಘೋರ ಬ್ಯಾಟಿಂಗ್​ ವೈಫಲ್ಯ ಕಾಣುತ್ತಿರುವ ರಜತ್ ಪಾಟಿದಾರ್ ಕಳೆದ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಈ ಹಿಂದೆ ಇಂಗ್ಲೆಂಡ್​ ವಿರುದ್ಧದ ತವರಿನ ಟೆಸ್ಟ್​ನಲ್ಲಿಯೂ ಅವರು ಹಲವು ಶೂನ್ಯ ಸಂಪಾದಿಸಿದ್ದರು. ಹೀಗಾಗಿ ಅವರನ್ನು ಆಡುವ ಬಳಗದಿಂದ ಕೈಬಿಡಬೇಕು ಎನ್ನುವುದು ಆರ್​ಸಿಬಿ ಅಭಿಮಾನಿಗಳ ಒತ್ತಾಸೆಯೂ ಆಗಿದೆ. ವಿರಾಟ್​ ಕೊಹ್ಲಿ ಕೂಡ ಟಿ20 ಶೈಲಿಯ ಆಟಕ್ಕೆ ತಕ್ಕ ಪ್ರದರ್ಶನ ತೋರುತ್ತಿಲ್ಲ. ಎಸೆತವೊಂದಕ್ಕೆ ರನ್​ ಗಳಿಸುತ್ತಿದ್ದಾರೆ. ಈ ಆಟ ಟಿ20ಯಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಇಲ್ಲಿ ಹೊಡಿ ಬಡಿ ಆಟವೇ ಪ್ರಧಾನ. ಕೊಹ್ಲಿ ಕೂಡ ತಮ್ಮ ಬ್ಯಾಟಿಂಗ್​ಗೆ ಚುರುಕು ಮುಟ್ಟಿಸುವ ಅಗತ್ಯವಿದೆ.

Exit mobile version