ಪೊನ್ನಂಪೇಟೆ (ಮಡಿಕೇರಿ) : ಆಹಾರ ಅರಸಿಕೊಂಡು ಬಂದ ಹುಲಿಯೊಂದು ಇಲ್ಲಿನ ಹರಿಹರ ಗ್ರಾಮದಲ್ಲಿ ಬೀಡುಬಿಟ್ಟಿದ್ದು ಗ್ರಾಮಸ್ಥರು ಭಯದಿಂದ ಜೀವನ ಮಾಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಪತ್ತೆ ಹಚ್ಚು ಕಾರ್ಯದಲ್ಲಿ ತೊಡಗಿದ್ದಾರೆ.
ರಾತ್ರಿ ವೇಳೆ ಕಾಡು ಬಿಟ್ಟು ನಾಡಿಗೆ ಬಂದಿರುವ ಹುಲಿ ಹರಿಹರ ಗ್ರಾಮದ ಸುಬ್ರಹ್ಮಣ್ಯ ದೇಗುದಲ್ಲಿ ಬೀಡುಬಿಟ್ಟಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಮೂಲಕ ಹುಲಿಯ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹುಲಿ ರಾತ್ರಿಯೆಲ್ಲಾ ದೇವಾಲಯದ ಕೆರೆ ಬಳಿ ಮಲಗಿತ್ತು ಎಂದು ಹೇಳಲಾಗಿದೆ. ಹುಲಿಯ ಪುರ ಪ್ರವೇಶದಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಹುಲಿ ಎದುರಾದರೆ ಏನು ಮಾಡಬೇಕು?
ಶಾಂತವಾಗಿರಲು ಪ್ರಯತ್ನಿಸಿ ಮತ್ತು ನಿಧಾನವಾಗಿ ಹಿಂದೆ ಸರಿಯಿರಿ. ಹುಲಿ ನಿಮ್ಮನ್ನು ಬೆನ್ನಟ್ಟುತ್ತಿದ್ದರೆ ಅಥವಾ ನಿಮ್ಮ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರೆ ಶಾಂತವಾಗಿರಲು ಪ್ರಯತ್ನಿಸಿ. ಹುಲಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು. ನಿಧಾನವಾಗಿ ಆಲೋಚಿಸಿ ತಪ್ಪಿಸುವ ದಾರಿಯನ್ನು ಕಂಡುಕೊಳ್ಳಿದೆ. ಹಿಂದೆ ಹಿಂದೆ ನಡೆಯುತ್ತಾ ಅದು ಕಣ್ಣಿಂದ ಮರೆಯಾದ ಬಳಿಕ ಓಡಿ.
ಇದನ್ನೂ ಓದಿ: ire Accident : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮನೆಗೆ ಬಿತ್ತು ಬೆಂಕಿ, ಇಲ್ಲಿದೆ ವಿಡಿಯೊ
ಸಾಧ್ಯವಾದಷ್ಟು ಧೈರ್ಯಶಾಲಿಯಾಗಿ ಕಾಣಲು ಪ್ರಯತ್ನಿಸಿ. ಓಡಿ ಹೋಗುವ ಮೂಲಕ ದಾಳಿ ಮಾಡಲು ಹುಲಿಗೆ ಪ್ರಚೋದಿಸಬಾರದು. ದುರ್ಬಲ ಮಿಕದಂತೆ ವರ್ತಿಸಬೇಡಿ. ಕಿರುಚಿ ಹುಲಿಯನ್ನು ಗಾಬರಿಗೊಳಿಸಬಾರದು. ಧೈರ್ಯವಾಗಿಯೇ ಇದ್ದು ಹುಲಿಯ ಭಯ ಆಗಿಲ್ಲ ಎಂಬುದಾಗಿ ವರ್ತಿಸಬೇಕು.
ಹುಲಿಯನ್ನು ಶಬ್ದದಿಂದ ಹಿಮ್ಮೆಟ್ಟಿಸಿ. ನಿಮ್ಮಲ್ಲಿರುವ ಯಾವುದಾದೂ ವಸ್ತುವಿನಿಂದ ಶಬ್ದ ಮಾಡಿ, ವಿಶೇಷವಾಗಿ ಅದು ದೊಡ್ಡ ಅಥವಾ ಅಸ್ವಾಭಾವಿಕ ಶಬ್ದವಾಗಿರಬೇಕು. ಬಂದೂಕು ಇದ್ದರೆ ಗಾಳಿಯಲ್ಲಿ ಮಾತ್ರ ಗುಂಡು ಹಾರಿಸಿ. ಯಾವುದೇ ಲೋಹ ಅಥವಾ ಗಾಜಿನ ವಸ್ತುಗಳನ್ನು ಬಡಿದು ಸದ್ದು ಮಾಡಿದೆ.
ಹುಲಿ ದೈಹಿಕವಾಗಿ ದಾಳಿ ಮಾಡಲು ಪ್ರಾರಂಭಿಸಿದರೆ ಆತ್ಮರಕ್ಷಣೆಗಾಗಿ ಪ್ರತಿದಾಳಿ ಮಾಡಿ. ಅದಕ್ಕಾಗಿ ಹುಲಿಯನ್ನು ಹೆದರಿಸಬೇಕಾಗುತ್ತದೆ ಅಥವಾ ಗಾಯಗೊಳಿಸಬೇಕಾಗುತ್ತದೆ. ದಾಳಿಯಿಂದ ಬದುಕುಳಿದರೆ ತಕ್ಷಣವೇ ಚಿಕಿತ್ಸೆ ಪಡೆಯಿರಿ.